alex Certify WATCH: ಬ್ರೆಜಿಲ್ ಬೀಚ್ ನಲ್ಲಿ ಬೀಡುಬಿಟ್ಟ ಸಾವಿರಾರು ಮೊಸಳೆಗಳು; ಬೆಚ್ಚಿಬಿದ್ದ ಸ್ಥಳೀಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

WATCH: ಬ್ರೆಜಿಲ್ ಬೀಚ್ ನಲ್ಲಿ ಬೀಡುಬಿಟ್ಟ ಸಾವಿರಾರು ಮೊಸಳೆಗಳು; ಬೆಚ್ಚಿಬಿದ್ದ ಸ್ಥಳೀಯರು

ಬ್ರೆಜಿಲ್ ನ ಬೀಚ್ ಒಂದರಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮೊಸಳೆಗಳು ಬೀಡು ಬಿಟ್ಟಿದ್ದು ಇದನ್ನು ನೋಡಿ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಮೊಸಳೆಗಳು ಈ ರೀತಿ ಒಮ್ಮೆಲೇ ಬರಲು ಏನು ಕಾರಣ ಎಂಬ ಚರ್ಚೆ ನಡೆಯುತ್ತಿದೆ.

ಟಾಕ್ ರೇಡಿಯೋ ಖ್ಯಾತಿಯ ken rutkowski ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಶೇರ್ ಮಾಡಿದ್ದು, ಈಗಾಗಲೇ ಏಳು ಮಿಲಿಯನ್ ವೀಕ್ಷಣೆಯನ್ನು ಗಳಿಸಿದೆ. ಬಹಳಷ್ಟು ಮೊಸಳೆಗಳು ದಡದಲ್ಲಿದ್ದರೆ, ಇನ್ನೊಂದಷ್ಟು ಮೊಸಳೆಗಳು ನೀರಿನಲ್ಲಿವೆ.

ಈ ವಿಡಿಯೊ ವೀಕ್ಷಿಸಿದ ಕೆಲವರು ಇವುಗಳು ಮೊಸಳೆಗಳಲ್ಲ, ಅವುಗಳನ್ನೇ ಹೋಲುವ ಮತ್ತೊಂದು ಜೀವಿಗಳು ಎಂದಿದ್ದರೆ, ಮತ್ತೊಬ್ಬರು ಮೊಸಳೆಗಳು ಬೀಚ್ ದಡದಲ್ಲಿದ್ದರೆ ಜನ ಯಾಕೆ ಹೆದರಬೇಕು. ಅವುಗಳೇನು ಶಾಪಿಂಗ್ ಮಾಲ್ ಗೆ ಬಂದಿಲ್ಲವಲ್ಲ ಎಂದಿದ್ದಾರೆ.

ಮೂಲಗಳ ಪ್ರಕಾರ ಸಂತಾನೋತ್ಪತ್ತಿಗಾಗಿ ಈ ಮೊಸಳೆಗಳು ದೊಡ್ಡ ಸಂಖ್ಯೆಯಲ್ಲಿ ದಡಕ್ಕೆ ಬಂದಿವೆ ಎನ್ನಲಾಗಿದ್ದು, ಆ ಬಳಿಕ ಮರಳಿ ನೀರಿಗೆ ಹೋಗುತ್ತವೆ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಸಾವಿರಾರು ಸಂಖ್ಯೆಯ ಮೊಸಳೆಗಳನ್ನು ಕಂಡು ಜನ ಬೆಚ್ಚಿ ಬಿದ್ದಿರುವುದಂತೂ ಸತ್ಯ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...