alex Certify ಕಾರ್ಮಿಕರ ಪ್ರತಿಭಟನೆ ಎಫೆಕ್ಟ್: ಕಸದ ಕೊಂಪೆಗಳಾದ ಪ್ಯಾರಿಸ್‌ನ ರಾಜಬೀದಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರ್ಮಿಕರ ಪ್ರತಿಭಟನೆ ಎಫೆಕ್ಟ್: ಕಸದ ಕೊಂಪೆಗಳಾದ ಪ್ಯಾರಿಸ್‌ನ ರಾಜಬೀದಿಗಳು

ಭಾರತದಲ್ಲಿನ ಅನೇಕ ನಗರಗಳಲ್ಲಿನ ರಸ್ತೆಗಳು ಕಸದ ಗುಂಡಿಗಳಾಗುವುದನ್ನು ದಿನಂಪ್ರತಿ ನೋಡುತ್ತಲೇ ಇರುತ್ತೇವೆ. ಆದರೆ ಜಗತ್ತಿನಾದ್ಯಂತ ತನ್ನ ಅದ್ಭುತ ವಾಸ್ತುಶಿಲ್ಪದಿಂದ ಪ್ರವಾಸಿಗರ ಹಾಟ್ ಫೇವರಿಟ್‌ ನಗರಗಳಲ್ಲಿ ಒಂದಾಗಿರುವ ಪ್ಯಾರಿಸ್‌ನ ಬೀದಿಗಳೂ ಸಹ ಕಸದ ಕೊಂಪೆಗಳಾಗಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಾಗಿವೆ.

ಹೊಸ ಪಿಂಚಣಿ ಸುಧಾರಣೆಗಳನ್ನು ವಿರೋಧಿಸಿ ಕಾರ್ಮಿಕರು ಪ್ರತಿಭಟನೆಗೆ ಇಳಿದಿರುವ ಪರಿಣಾಮ ನಗರದ ಬೀದಿಗಳಲ್ಲಿ 5,000 ಟನ್‌ಗಳಷ್ಟು ಕಸದ ರಾಶಿ ಕೊಳೆಯುತ್ತಿದೆ ಎಂದು ಬಿಬಿಸಿ ವರದಿ ಮಾಡಿದೆ. ಈ ಪ್ರತಿಭಟನೆ ಫ್ರಾನ್ಸ್‌ನಾದ್ಯಂತ ಇರುವ ಕಾರಣ ಪ್ಯಾರಿಸ್ ಮಾತ್ರವಲ್ಲದೇ ರೆನ್ನೆಸ್, ಲಾ ಹಾಅವ್ರೇ ಹಾಗೂ ನ್ಯಾಂಟೆಸ್‌ ನಗರಗಳಲ್ಲೂ ಇದೇ ಪರಿಸ್ಥಿತಿ ನೆಲೆಸಿದೆ.

ಪಿಂಚಣಿ ಪಡೆಯಲು ಯೋಗ್ಯ ವಯಸ್ಸನ್ನು 62ರಿಂದ 64ಕ್ಕೆ ಏರಿಸುವ ಅಧ್ಯಕ್ಷ ಎಮ್ಯಾನ್ಯುಯೆಲ್ ಮ್ಯಾಕ್ರನ್‌ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ನಗರದ ತ್ಯಾಜ್ಯ ಸಂಗ್ರಹಕರು ಮಾರ್ಚ್ 6ರಿಂದ ಪ್ರತಿಭಟನೆಯಲ್ಲಿ ತೊಡಗಿದ್ದಾರೆ.

ಸದ್ಯದ ನಿಯಮಗಳ ಅನುಸಾರ ತ್ಯಾಜ್ಯ ಸಂಗ್ರಹಕರು 57ನೇ ವಯಸ್ಸಿಗೆ ನಿವೃತ್ತಿ ಪಡೆಯಬಹುದಾಗಿದೆ. ಇನ್ನಷ್ಟು ಕಠಿಣ ಪರಿಶ್ರಮ ಬೇಡುವ ಕೊಳಚೆ ನಿರ್ವಹಣೆಯ ಕಾರ್ಮಿಕರಿಗೆ 52ನೇ ವಯಸ್ಸಿಗೆ ನಿವೃತ್ತಿ ಪಡೆಯಬಹುದಾಗಿದೆ. ಆದರೆ ಸರ್ಕಾರದ ಉದ್ದೇಶಿತ ಯೋಜನೆ ಅನುಸಾರ ಎರಡೂ ವರ್ಗಗಳ ಕಾರ್ಮಿಕರು ಈ ಮುಂಚೆ ಇದ್ದ ಮಿತಿಗಿಂತ ಇನ್ನೂ ಎರಡು ವರ್ಷ ಹೆಚ್ಚು ಕಾಲ ದುಡಿಯಬೇಕಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...