alex Certify Viral Video: ಪ್ಲಾಸ್ಟಿಕ್ ಬುಟ್ಟಿ ಮಾರಾಟಗಾರನ ಮಾರ್ಕೆಟಿಂಗ್ ತಂತ್ರಕ್ಕೆ ಬೆರಗಾದ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Viral Video: ಪ್ಲಾಸ್ಟಿಕ್ ಬುಟ್ಟಿ ಮಾರಾಟಗಾರನ ಮಾರ್ಕೆಟಿಂಗ್ ತಂತ್ರಕ್ಕೆ ಬೆರಗಾದ ಜನ

ಬದಾಮ್…… ಬದಾಮ್ ಎ ದಾದಾ ಕಚ್ಚಾ ಬದಾಮ್…… ಈ ಹಾಡು ಯಾರಿಗೆ ನೆನಪಿಲ್ಲ ಹೇಳಿ. ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೆಶನ್ ಹುಟ್ಟು ಹಾಕಿದ್ದ ಹಾಡಿದು. ಭುವನ್ ಬಡ್ಯಾಕರ್ ಅನ್ನೊ ಕಡಲೆ ಮಾರೋ ವ್ಯಾಪಾರಿ, ಗ್ರಾಹಕರ ಗಮನ ಸೆಳೆಯೊದಕ್ಕಂತ ಹಾಡಿದ್ದ ಹಾಡು.

ಸಾಮಾನ್ಯವಾಗಿ ಭಾರತದಲ್ಲಿ ವ್ಯಾಪಾರಿಗಳು ತಮ್ಮಲ್ಲಿರುವ ವಸ್ತುಗಳನ್ನ ಹೆಚ್ಚು-ಹೆಚ್ಚು ಮಾರಾಟ ಮಾಡುವುದಕ್ಕೆ ಈ ರೀತಿ ಹಾಡು ಹೇಳುವುದೋ, ಇಲ್ಲಾ ಭಿನ್ನ-ಭಿನ್ನವಾಗಿ ಕೂಗಿ ಗ್ರಾಹಕರ ಗಮನ ಸೆಳೆಯುತ್ತಾರೆ. ಅದು ಅವರವರ ಟ್ಯಾಲೆಂಟ್.

ಈಗ ಸೋಶಿಯಲ್ ಮೀಡಿಯಾದಲ್ಲಿ ಅಂತಹದ್ದೇ ವ್ಯಾಪಾರಿಯೊಬ್ಬ ತನ್ನ ವಸ್ತು ಮಾರಾಟ ಮಾಡೋದಕ್ಕೆ ಉಪಯೋಗಿಸಿರುವ ಟ್ರಿಕ್ ಈಗ ಸಖತ್ ವೈರಲ್ ಆಗ್ತಿದೆ. ಅಸಲಿಗೆ ಈ ವ್ಯಕ್ತಿ ಪ್ಲಾಸ್ಟಿಕ್‌ ಬುಟ್ಟಿಗಳನ್ನ ಮಾರುತ್ತಿದ್ದಾನೆ. ತಮ್ಮ ಬಳಿ ಇರುವ ಈ ಪ್ಲಾಸ್ಟಿಕ್ ಬುಟ್ಟಿಗಳು ತುಂಬಾ ಗಟ್ಟಿ ಮುಟ್ಟಾಗಿದ್ದು, ಅದು ತುಂಬಾ ದಿನ ಬಾಳಿಕೆಗೆ ಬರುತ್ತೆ ಅಂತ ಆತ ಗ್ರಾಹಕರಿಗೆ ತೋರಿಸ್ತಿದ್ದಾನೆ. ಅದು ಕೂಡಾ ಹೇಗಂದ್ರೆ ಆ ಪ್ಲಾಸ್ಟಿಕ್ ಬುಟ್ಟಿಗಳನ್ನ ಪದೇ-ಪದೇ ರಸ್ತೆಗೆ ಹೊಡೆದು ಬಿಸಾಕಿ ತೋರಿಸ್ತಿದ್ದಾನೆ.

ಪೊಲೀಸ್ ಅಧಿಕಾರಿ ದೀಪಾಂಶು ಕಬ್ರಾ ಈ ವಿಡಿಯೋವನ್ನ ತಮ್ಮ ಟ್ವಿಟ್ಟರ್ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋ ಶೀರ್ಷಿಕೆಯಲ್ಲಿ ’ಮಾರ್ಕೆಟ್ ಮಾಡುವ ಪರಿ ಅದ್ಭುತ’ ಅನ್ನುವ ಅರ್ಥದಲ್ಲಿ ಬರೆದಿದ್ದಾರೆ. ಈ ವಿಡಿಯೋ ನೋಡಿ ನೆಟ್ಟಿಗರು ಹುಬ್ಬೇರಿಸಿದ್ದಾರೆ. ಸದ್ಯಕ್ಕೆ ಈ ವಿಡಿಯೋ ಎಲ್ಲಿಯದ್ದು ಅಂತ ಗೊತ್ತಾಗದಿದ್ದರೂ, ಕೆಲವರು ಪಶ್ಚಿಮ ಬಂಗಾಳದ್ದು ಅಂತ ಹೇಳುತ್ತಿದ್ದಾರೆ.

ಈ ವಿಡಿಯೋವನ್ನ ಈಗಾಗಲೇ 43,000 ಜನ ನೋಡಿದ್ದಾರೆ. ಹಾಗೂ 1,302 ಜನರು ಈ ವಿಡಿಯೋವನ್ನ ಇಷ್ಟ ಪಟ್ಟಿದ್ದಾರೆ. ಕೆಲವರು ಈ ವಿಡಿಯೋ ನೋಡಿ ಒಬ್ಬರು’ ಹೀಗೂ ಮಾರಾಟ ಮಾಡಬಹುದು’ ಅಂತ ಬರೆದುಕೊಂಡಿದ್ದಾರೆ. ಇನ್ನೊಬ್ಬರು’ ಇನ್ಮುಂದೆ ಮಾರ್ಕೆಟಿಂಗ್ ಐಡಿಯಾಗಳು ಏನಾದ್ರೂ ಬೇಕಾದ್ರೆ ಪಶ್ಚಿಮ ಬಂಗಾಳದ ಜನರಿಗೆ ಕೇಳಬೇಕು’ ಅಂತ ಬರೆದಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋ ನೆಟ್ಟಿಗರಿಗೆ ಸಖತ್ ಎಂಟರ್ಟೇನ್ ಮಾಡ್ತಿರೋದಂತೂ ಸತ್ಯ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...