alex Certify ವಿಮಾನ ಪ್ರವೇಶಿಸಿದ ಶ್ವಾನಕ್ಕೆ ಅದ್ದೂರಿ ಸ್ವಾಗತ; ಕ್ಯಾಬಿನ್‌ ಗೆ ಕರೆದುಕೊಂಡ ಹೋದ ಪೈಲೆಟ್‌ ನಿಂದ ಸೆಲ್ಫಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮಾನ ಪ್ರವೇಶಿಸಿದ ಶ್ವಾನಕ್ಕೆ ಅದ್ದೂರಿ ಸ್ವಾಗತ; ಕ್ಯಾಬಿನ್‌ ಗೆ ಕರೆದುಕೊಂಡ ಹೋದ ಪೈಲೆಟ್‌ ನಿಂದ ಸೆಲ್ಫಿ

ನಾಯಿ ಪ್ರೇಮಿಗಳ ಸಂಖ್ಯೆಗೇನು ಕೊರತೆಯಿಲ್ಲ. ಬಡವ ಬಲ್ಲಿದ ಎಂಬುದಿಲ್ಲ. ಇದೀಗ ವಿಮಾನದೊಳಗೆ ನಾಯಿಯೊಂದು ಸೆಲೆಬ್ರಿಟಿ ರೀತಿ ಕಾಣಿಸಿಕೊಂಡ ವಿಡಿಯೋ ಒಂದು ವೈರಲ್​ ಆಗಿದೆ.

ಗ್ರೇಟ್​ ಪೈರಿನೀಸ್​ ‘ರಿಚ್ಚಿ’ ವಿಮಾನದೊಳಗೆ ಪ್ರವೇಶ ಕೊಟ್ಟಾಗ ಅಲ್ಲಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿ ಆಶ್ಚರ್ಯಚಕಿತರಾದರು. ವಿಮಾನದ ಸಿಬ್ಬಂದಿ ಕೂಡ ಉತ್ಸಾಹಭರಿತರಾಗಿ ನಾಯಿಯನ್ನು ಸವರಿ ಬರಮಾಡಿಕೊಂಡರು. ಸೆಲ್ಫಿ ಕೂಡ ತೆಗೆಸಿಕೊಂಡರು.

ಗ್ರೇಟ್​ ಪೈರಿನೀಸ್​ ನಾಯಿಯ ಉಪಸ್ಥಿತಿಯಿಂದಾಗಿ ಸಂಭವಿಸಿದ ವಿಮಾನ ಸಂಚಾರ ವಿಳಂಬವನ್ನು ಬಹಿರಂಗಪಡಿಸುವ ಶೀರ್ಷಿಕೆಯೊಂದಿಗೆ ರಿಚ್ಚಿಯ ಮಾಲೀಕರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ.

ಗ್ರೇಟ್​ ಪೈರಿನೀಸ್​ ನಾಯಿಗಳು ಶಾಂತ ಸ್ವಭಾವ ಮತ್ತು ಅಗತ್ಯವಿದ್ದಲ್ಲಿ ರಕ್ಷಿಸುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ. ಮನುಷ್ಯರೊಂದಿಗೆ ಚೆನ್ನಾಗಿ ಜೆಲ್​ ಆಗುತ್ತವೆ. ಜೊತೆಗೆ ಸೂಚನೆಗಳನ್ನು ಪಾಲಿಸುತ್ತೆ.

ರಿಚ್ಚಿಯ ಇನ್​ಸ್ಟಾಗ್ರಾಮ್​ ಖಾತೆಯನ್ನು ಗಮನಿಸಿದಾಗ ಅನೇಕ ಅಚ್ಚರಿಯ ಸಂಗತಿಗಳಿದ್ದವು. ಪೋಷಕರೊಂದಿಗೆ ರಮಣೀಯ ಸ್ಥಳಗಳು ಮತ್ತು ಪರ್ವತದ ತುದಿಗಳಿಗೆ ಟ್ರಕ್​ ಹೋಗುವುದು ಕಂಡುಬಂದಿದೆ.

ಸರಿಸುಮಾರು ಐದು ದಿನಗಳ ಹಿಂದೆ ಹಂಚಿಕೊಂಡ ವಿಡಿಯೊದಲ್ಲಿ, ರಿಚಿ ಪೈಲಟ್​ಗಳು ಮತ್ತು ಸಿಬ್ಬಂದಿಯೊಂದಿಗೆ ಪೋಸ್​ ನೀಡುತ್ತಿರುವುದನ್ನು ಕಾಣಬಹುದು. ವಿಮಾನದಲ್ಲಿದ್ದ ಪ್ರಯಾಣಿಕರೂ ಸಹ ರಿಚ್ಚಿ ಆಗಮನಕ್ಕೆ ಕಾಯುತ್ತಿದ್ದರಿಂದ ವಿಳಂಬವನ್ನು ಲೆಕ್ಕಿಸಲಿಲ್ಲ. ರಿಚ್ಚಿಯನ್ನು ತನ್ನ ಕ್ಯಾಬಿನ್​ಗೆ ಕರೆದೊಯ್ದ ಪೈಲಟ್​ ತನ್ನ ಹ್ಯಾಟ್​ ಅನ್ನು ನಾಯಿ ತಲೆ ಮೇಲೆ ಇಟ್ಟು ಸೆಲ್ಫಿ ಕೂಡ ತೆಗೆದುಕೊಳ್ಳುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...