alex Certify ‘ಮೇರಾ ದಿಲ್ ಯೇ ಪುಕಾರೇ’ ಹಾಡಿಗೆ ಪಾಕ್​ ಬೆಡಗಿಯ ನೃತ್ಯ: ವೈರಲ್​ ವಿಡಿಯೋಗೆ ಮನಸೋತ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಮೇರಾ ದಿಲ್ ಯೇ ಪುಕಾರೇ’ ಹಾಡಿಗೆ ಪಾಕ್​ ಬೆಡಗಿಯ ನೃತ್ಯ: ವೈರಲ್​ ವಿಡಿಯೋಗೆ ಮನಸೋತ ನೆಟ್ಟಿಗರು

ಮದುವೆ ಇತ್ಯಾದಿ ಸಮಾರಂಭಗಳಲ್ಲಿ ನೃತ್ಯಕ್ಕೆ ಇರುವಷ್ಟು ಪ್ರಾಶಸ್ತ್ಯ ಸದ್ಯ ಎಲ್ಲಿಯೂ ಇಲ್ಲ. ಇದು ಎಲ್ಲಾ ದೇಶಗಳಲ್ಲಿಯೂ ಮಾಮೂಲು. ಪಾಕಿಸ್ತಾನದ ಯುವತಿಯೊಬ್ಬಳು ಬಾಲಿವುಡ್​ ಹಾಡಿಗೆ ನರ್ತಿಸಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರ ಮೆಚ್ಚುಗೆ ಗಳಿಸುತ್ತಿದೆ.

ಲತಾ ಮಂಗೇಶ್ಕರ್ ಅವರ ‘ಮೇರಾ ದಿಲ್ ಯೇ ಪುಕಾರೇ’ ಹಾಡಿಗೆ ಮದುವೆ ಸಮಾರಂಭದಲ್ಲಿ ಲಾಹೋರ್ ಮೂಲದ ಹುಡುಗಿ ಆಯೇಷಾ ನೃತ್ಯ ಮಾಡಿದ್ದಾಳೆ. ಆಕೆಯ ಅಭಿನಯದ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ಇದು ವೈರಲ್​ ಆಗಿದೆ. ಆಕೆಯ ನೃತ್ಯಕ್ಕೆ ಹಿಂದೆ ಕುಳಿತವರೆಲ್ಲವೂ ಮನಸೋತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಆನ್‌ಲೈನ್‌ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ ಕೆಲವೇ ದಿನಗಳಲ್ಲಿ 40 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಹಿಂದಿ ಹಾಡಿಗೆ ಯಾವ ಬಾಲಿವುಡ್​ ಹೀರೋಯಿನ್​ಗೂ ಕಡಿಮೆ ಇಲ್ಲದಂತೆ ನರ್ತಿಸಿರುವಿರಿ ಎಂದು ಭಾರತದ ನೆಟ್ಟಿಗರೂ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...