alex Certify ಸಾರ್ಜನಿಕರೇ ಗಮನಿಸಿ : ಸಿಎಂ `ಜನತಾ ದರ್ಶನ’ ಮುಂದೂಡಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾರ್ಜನಿಕರೇ ಗಮನಿಸಿ : ಸಿಎಂ `ಜನತಾ ದರ್ಶನ’ ಮುಂದೂಡಿಕೆ

ಬೆಂಗಳೂರು : ಇದೇ ಅಕ್ಟೋಬರ್ 9ರಂದು ದೆಹಲಿಯಲ್ಲಿ ನಡೆಯಲಿರುವ ಸಭೆಯೊಂದರಲ್ಲಿ ಮುಖ್ಯಮಂತ್ರಿಗಳು ಭಾಗವಹಿಸಬೇಕಿರುವುದರಿಂದ ಅಂದು ನಡೆಸಲು ಉದ್ದೇಶಿಸಿದ್ದ  ಜನತಾ ದರ್ಶನ ಕಾರ್ಯಕ್ರಮ ಮುಂದೂಡಲಾಗಿದೆ.

ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದು, ಅಕ್ಟೋಬರ್ 09 ರಂದು ನಾನು ದೆಹಲಿ ಪ್ರವಾಸ ಕೈಗೊಂಡಿರುವ ಹಿನ್ನೆಲೆಯಲ್ಲಿ ಆ ದಿನ ಹಮ್ಮಿಕೊಂಡಿದ್ದ ಜನತಾ ದರ್ಶನ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ದೂರದ ಊರುಗಳಿಂದ ನನ್ನನ್ನು ಭೇಟಿ ಮಾಡಲು ಬರಬೇಕೆಂದಿದ್ದವರು ದಯವಿಟ್ಟು ಇದನ್ನು ಗಮನಿಸಿ ಎಂದಿದ್ದಾರೆ.

ಜನತಾ ದರ್ಶನದ ಮುಂದಿನ ದಿನಾಂಕ ನಂತರ ತಿಳಿಸಲಾಗುವುದು ಎಂದು ಮುಖ್ಯಮಂತ್ರಿ ಕಚೇರಿ ಪ್ರಕಟಣೆ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...