alex Certify ದೀರ್ಘ ಸಮಯದ ಬಳಿಕ ಒಂದಾದ ಒಡಹುಟ್ಟಿದವರು; ಕಣ್ಣಂಚನ್ನು ತೇವಗೊಳಿಸುತ್ತೆ ಹೃದಯಸ್ಪರ್ಶಿ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೀರ್ಘ ಸಮಯದ ಬಳಿಕ ಒಂದಾದ ಒಡಹುಟ್ಟಿದವರು; ಕಣ್ಣಂಚನ್ನು ತೇವಗೊಳಿಸುತ್ತೆ ಹೃದಯಸ್ಪರ್ಶಿ ವಿಡಿಯೋ

ಟೆಕ್ಸಾಸ್​ನ ಹೂಸ್ಟನ್​ನಲ್ಲಿ ಬಹುಕಾಲದಿಂದ ದೂರವಿದ್ದ ಒಡಹುಟ್ಟಿದವರು ಮತ್ತೆ ಒಂದಾಗಲು ಜೈವಿಕ ತಂತ್ರಜ್ಞಾನದ ಸಾಧನವು ಸಹಾಯ ಮಾಡಿರುವ ಅಚ್ಚರಿ ಸುದ್ದಿಯೊಂದಿದೆ.

ಇಬ್ಬರೂ ಕೆಲಕಾಲ ಪರಸ್ಪರ ಸಮೀಪದಲ್ಲಿಯೇ ಇದ್ದರು, ಆದರೆ ಒಡ ಹುಟ್ಟಿದವರೆಂಬ ಅರಿವಿರಲಿಲ್ಲ. ರೇಮಂಡ್​ ಟರ್ನರ್ ಮತ್ತು ಕ್ರಿಸ್ಟಿನಾ ಸ್ಯಾಡ್​ಬೆರಿ ಮೊದಲ ಬಾರಿಗೆ ಒಂದಾಗಿದ್ದು, ಅವರ ಎಣಿಸಲಾಗದ ಖುಷಿ ಎಂತವರಿಗೂ ಆಶ್ಚರ್ಯ ತರುತ್ತದೆ.

2015ರಲ್ಲಿ ಟರ್ನರ್ ಹೂಸ್ಟನ್​ನಲ್ಲಿ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ನಿರ್ಮಾಪಕರಾಗಿ ಕೆಲಸ ಪಡೆದರು. ರೋಗಿಗಳು ತಮ್ಮ ಸ್ವಂತ ಸಂಗೀತವನ್ನು ರೆಕಾರ್ಡ್​ ಮಾಡಬಹುದಾದ ಸ್ಟುಡಿಯೋವನ್ನು ಆಸ್ಪತ್ರೆಯ ಆವರಣದಲ್ಲಿ ನಿಮಿರ್ಸಲಾಗಿದೆ. ಅದೇ ಸಮಯದಲ್ಲಿ, ಏರ್​ ಫೋರ್ಸ್​ನಲ್ಲಿರುವ ಕ್ರಿಸ್ಟಿನಾ ತನ್ನ ನಾಲ್ಕು ವರ್ಷದ ಮಗ ಬ್ರೆಸನ್​ನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆತರಲು ಪ್ರಾರಂಭಿಸಿದಳು.

ಒಂದು ದಿನ, ಟರ್ನರ್ ಅವರ ಪತ್ನಿ ಮಾರಿಯಾ ಅವರು ಗೂಗಲ್​ ಬೆಂಬಲಿತ ಕಂಪನಿ ಡಿಎನ್​ಎ ಪರೀಕ್ಷಾ ಕಿಟ್​ ಅನ್ನು ಖರೀದಿಸಿದ್ದು, ಅದನ್ನು ಬಳಕೆ ಮಾಡಿದಾಗ ಅದರ ಡೇಟಾ ಬೇಸ್​ ಬೇರೆ ಡೇಟಾಬೇಸ್​ನೊಂದಿಗೆ ಹೊಂದಿಕೆಯಾಗುತ್ತದೆ ಎಂದು ಆಕಸ್ಮಿಕವಾಗಿ ಪರಿಶೀಲಿಸಿದಾಗ ಟರ್ನರ್ ಕ್ರಿಸ್ಟಿನಾ ಜೊತೆ “ಕುಟುಂಬದ ಹೊಂದಾಣಿಕೆ, ಒಡಹುಟ್ಟಿದವರು” ಎಂಬುದನ್ನು ತೋರಿಸಿದೆ.

ಅನೇಕ ಬಾರಿ ಪರಸ್ಪರರು ಒಂದು ದಾರಿಯಲ್ಲಿ ಹಾದು ಹೋಗಿದ್ದರೂ ಅವರಿಬ್ಬರಿಗೆ ಯಾವುದೇ ಸುಳಿವು ಇರಲಿಲ್ಲ. ಮತ್ತೊಂದೆಡೆ, ಕ್ರಿಸ್ಟಿನಾ ಟರ್ನರ್ ಅನ್ನು “ಸ್ಟುಡಿಯೋದಲ್ಲಿ ಕೀಬೋರ್ಡ್​ ನುಡಿಸುವ ವ್ಯಕ್ತಿ” ಎಂದು ತಿಳಿದಿದ್ದರಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...