alex Certify ಆಶೀರ್ವದಿಸಲು ಬಂದ ಪಾದ್ರಿಗೆ ಹೈಫೈ ಮಾಡಿದ ಮಗು: ಕ್ಯೂಟ್​ ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಶೀರ್ವದಿಸಲು ಬಂದ ಪಾದ್ರಿಗೆ ಹೈಫೈ ಮಾಡಿದ ಮಗು: ಕ್ಯೂಟ್​ ವಿಡಿಯೋ ವೈರಲ್​

ಮಕ್ಕಳು ಮುಗ್ಧತೆ ಮತ್ತು ಮುದ್ದುತನದ ಸಂಕೇತ. ಈಗ ವೈರಲ್​ ಆಗಿರುವ ಪ್ರಕರಣವೊಂದು ಅದನ್ನು ಸಾಬೀತುಪಡಿಸಿದೆ. ಚರ್ಚ್ ಪಾದ್ರಿಯೊಬ್ಬರು ಪುಟ್ಟ ಮಗುವನ್ನು ಆಶೀರ್ವದಿಸಲು ತನ್ನ ಕೈಯನ್ನು ಮೇಲಕ್ಕೆ ಎತ್ತಿದಾಗ, ಮಗುವೊಂದು ಅದನ್ನು ಹೈ-ಫೈ ಗೆಸ್ಚರ್ ಎಂದು ಭಾವಿಸಿ ತನ್ನ ಮುಗ್ಧತೆಯಿಂದ ಪಾದ್ರಿಗ ಹೈ-ಫೈ ಮಾಡಿರುವ ಕ್ಯೂಟ್​ ವಿಡಿಯೋ ಇದಾಗಿದೆ.
ಹಳೆಯ ವಿಡಿಯೋ ಪುನಃ ವೈರಲ್​ ಆಗಿದೆ. ತಾಯಿ ಮತ್ತು ಮಗಳು ಆಶೀರ್ವಾದಕ್ಕಾಗಿ ಪಾದ್ರಿಯ ಬಳಿಗೆ ಹೋಗುವುದನ್ನು ವೈರಲ್ ವಿಡಿಯೋದಲ್ಲಿ ನೋಡಬಹುದು.

ಆಶೀರ್ವದಿಸಲು ಪಾದ್ರಿಯು ತನ್ನ ಕೈಯನ್ನು ಪುಟಾಣಿಯ ಬಳಿ ತೆಗೆದುಕೊಂಡು ಹೋಗುತ್ತಾರೆ. ಮಗು ಮುದ್ದಾಗಿ ಹೈ-ಫೈ ನೀಡುತ್ತಾಳೆ. ಈ ಕ್ಷಣಕ್ಕೆ ಪಾದ್ರಿ ನಗುತ್ತಾರೆ. ನಂತರ, ತಾಯಿಯು ಹುಡುಗಿಯ ಕೈಗಳನ್ನು ಹಿಡಿದಿಟ್ಟುಕೊಳ್ಳುತ್ತಾಳೆ, ಇದರಿಂದ ಅವಳು ಆಚರಣೆಗೆ ಅಡ್ಡಿಯಾಗದಂತೆ ಆಶೀರ್ವಾದವನ್ನು ಪಡೆಯುತ್ತಾಳೆ. ಮಕ್ಕಳ ಮುಗ್ಧತೆಯನ್ನು ನೆಟ್ಟಿಗರು ಕೊಂಡಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...