alex Certify 5 ದಶಕಗಳ ಹಿಂದೆ ತಂದೆ ಚಲಾಯಿಸಿದ್ದ ಕಾರನ್ನೇ ಉಡುಗೊರೆಯಾಗಿ ನೀಡಿದ ಮಕ್ಕಳು : ಭಾವುಕ ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

5 ದಶಕಗಳ ಹಿಂದೆ ತಂದೆ ಚಲಾಯಿಸಿದ್ದ ಕಾರನ್ನೇ ಉಡುಗೊರೆಯಾಗಿ ನೀಡಿದ ಮಕ್ಕಳು : ಭಾವುಕ ವಿಡಿಯೋ ವೈರಲ್​

ಪೋಷಕರು ಮಕ್ಕಳಿಗೆ ಉಡುಗೊರೆ ಕೊಡೋದು ಹೊಸದಲ್ಲ. ಆದರೆ ವಯಸ್ಸಾದ ಪೋಷಕರಿಗೆ ಮಕ್ಕಳು ತಂದು ಕೊಡುವ ಚಿಕ್ಕ ಚಿಕ್ಕ ಉಡುಗೊರೆಯೂ ಸ್ಪೆಷಲ್​ ಎನಿಸುತ್ತದೆ.

ಇದೀಗ ಸೋಶಿಯಲ್​ ಮೀಡಿಯಾದಲ್ಲಿ ಇಂತದ್ದೇ ಒಂದು ಘಟನೆಗೆ ಸಂಬಂಧಿಸಿದ ವಿಡಿಯೋ ವೈರಲ್​ ಆಗಿದ್ದು ಈ ವಿಡಿಯೋ ನೋಡಿದ ನೆಟ್ಟಿಗರು ಭಾವುಕರಾಗಿದ್ದಾರೆ. ತ್ರಿಶೂರ್​ ಜಿಲ್ಲೆಯ 84 ವರ್ಷದ ಅಚ್ಯುತನ್​ ನಾಯರ್​ ಎಂಬವರಿಗೆ ಮಕ್ಕಳು ವಿಶೇಷವಾದ ಉಡುಗೊರೆ ನೀಡಿದ್ದಾರೆ.

ನಾಯರ್​ರ ಮಕ್ಕಳಾದ ಸುಜಿತ್​ ಹಾಗೂ ಅಜಿತ್​​ ತಮ್ಮ ತಂದೆಗೆ ಅತ್ಯಂತ ಅಮೂಲ್ಯವಾದ ಉಡುಗೊರೆಯೊಂದನ್ನು ನೀಡಿದ್ದಾರೆ. ಬರೋಬ್ಬರಿ ಐದು ದಶಕಗಳ ಹಿಂದೆ ನಾಯರ್​ ಚಲಾಯಿಸಿದ್ದ ಹಿಂದೂಸ್ತಾನ್​ ಅಂಬಾಸಿಡರ್ ಕಾರನ್ನು ಮಕ್ಕಳು ಉಡುಗೊರೆಯಾಗಿ ನೀಡಿದ್ದು ಈ ಕಾರನ್ನು ನೋಡಿದ ನಾಯರ್​ ಭಾವುಕರಾಗಿದ್ದಾರೆ.

ಯುಟ್ಯೂಬ್​ ಚಾನೆಲ್​ ಒಂದರಲ್ಲಿ ಈ ಹೃದಯಸ್ಪರ್ಶಿ ಘಟನೆಯ ವಿಡಿಯೋ ಶೇರ್​ ಮಾಡಲಾಗಿದ್ದು ಈ ವಿಡಿಯೋ ವೈರಲ್​ ಆಗಿದೆ. 1970ರ ಸಮಯದಲ್ಲಿ ವೈದ್ಯರ ಬಳಿಯಲ್ಲಿ ಡ್ರೈವರ್​ ಆಗಿ ಕೆಲಸ ಮಾಡುತ್ತಿದ್ದ ಅಚ್ಯುತ್​ ನಾಯರ್​ ಈ ಕಾರನ್ನು ಚಲಾಯಿಸಿದ್ದರು ಎನ್ನಲಾಗಿದೆ. ಆಗಿನ ಕಾಲದಲ್ಲಿ ಅಂಬಾಸಿಡರ್​ ಕಾರನ್ನು ಹೊಂದುವುದು ಪ್ರತಿಷ್ಠೆಯ ಸಂಕೇತವಾಗಿತ್ತು.

ಈ ಕಾರು ನಾಯರ್​ಗೆ ಕೇವಲ ಒಂದು ವಾಹನವಾಗಿರಲಿಲ್ಲ. ಇದು ವಿಶೇಷ ಸಂದರ್ಭದಲ್ಲಿ ಅವರ ನೆರೆಹೊರೆಯವರಿಗೂ ಸಹಾಯ ಮಾಡುವ ವಾಹನವಾಗಿತ್ತು. ಈ ಕಾರು ನಾಯರ್​ ಕುಟುಂಬಸ್ಥರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿತ್ತು. ತಲೆಮಾರುಗಳ ನೆನಪನ್ನು ಈ ಕಾರು ಹೊಂದಿತ್ತು ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...