alex Certify ಲೂಲೂ ಮಾಲ್​ ʼಮಿಡ್​ ನೈಟ್​ ಸೇಲ್ʼ ​ಗೆ ಮುಗಿಬಿದ್ದ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲೂಲೂ ಮಾಲ್​ ʼಮಿಡ್​ ನೈಟ್​ ಸೇಲ್ʼ ​ಗೆ ಮುಗಿಬಿದ್ದ ಜನ

ನೈಟ್​ ಲೈಫ್ ಶಾಪಿಂಗ್​ ಬಗ್ಗೆ ಕ್ರೇಜ್​ ಹೆಚ್ಚಿಸುವ ನಿಟ್ಟಿನಲ್ಲಿ ಲೂಲೂ ಇಂಟರ್​ನ್ಯಾಷನಲ್​ ಶಾಪಿಂಗ್​ ಮಾಲ್​ ನೈಟ್​ ಲೈಫ್ ಶಾಪಿಂಗ್​ ಘೋಷಿಸಿದ್ದು, ಜನರಿಂದ ಅಗಾಧ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೊಚ್ಚಿ ಮತ್ತು ತಿರುವನಂತಪುರಂನಲ್ಲಿ ಜನರು ಲೂಲೂ ಔಟ್​ಲೆಟ್​ಗಳಿಗೆ ನುಗ್ಗುತ್ತಿರುವ ವಿಡಿಯೊ, ಫೋಟೋಗಳು ಜಾಲತಾಣದಲ್ಲಿ ವೈರಲ್​ ಆಗಿವೆ.

ಗುಂಪುಗುಂಪಾಗಿ ಬಂದ ಜನರು ಸಂಗೀತ ಕಾರ್ಯಕ್ರಮ ಮತ್ತು ಮೋಜಿನ ಚಟುವಟಿಕೆಗಳಲ್ಲಿ ಪಾಲ್ಗೊಂಡು ಮಿಡ್​ನೈಟ್​ ಶಾಪಿಂಗ್​ ಯೋಜನೆಯನ್ನು ಎಂಜಾಯ್‌ ಮಾಡಿದ್ದಾರೆ. ಲೈವ್​ ಬ್ಯಾಂಡ್​ಗಳತ್ತಲೂ ಜನರುರ ದೃಷ್ಟಿ ಯನ್ನಿಟ್ಟಿದ್ದು ಕೊನೆಯಲ್ಲಿ ಜನರು ಹೆಚ್ಚಾದಂತೆ ಅವ್ಯವಸ್ಥೆಯು ಹೆಚ್ಚಾಯಿತು.

ಮಾಲ್​ನ ಎಸ್ಕಲೇಟರ್​ಗಳು ಮತ್ತು ಲಾಬಿಯ ಬಳಿ ಭಾರಿ ರಶ್​ ಕಾಣಿಸಿದೆ. ಭದ್ರತಾ ಸಿಬ್ಬಂದಿ ಜನರನ್ನು ನಿಯಂತ್ರಿಸಲು ಹೈರಾಣಾಗಿ ಹೋದರು. ದೊಡ್ಡ ಪ್ರಮಾಣದ ರಿಯಾಯಿತಿ ದರಗಳಲ್ಲಿ ವಸ್ತುಗಳನ್ನು ಗ್ರಾಹಕರು ಖರೀದಿ ಮಾಡುವುದೂ ಸಹ ವಿಡಿಯೋಗಳಲ್ಲಿ ಕಾಣಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...