alex Certify Watch | ರೈಲು ನಿಲ್ದಾಣದ ಛಾವಣಿ ಮೇಲೆ ನಾಯಿಯ ತಿರುಗಾಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Watch | ರೈಲು ನಿಲ್ದಾಣದ ಛಾವಣಿ ಮೇಲೆ ನಾಯಿಯ ತಿರುಗಾಟ

ಮುಂಬೈ: ಲೋಕಲ್ ರೈಲುಗಳಿಗೆ ಹೆಸರುವಾಸಿಯಾಗಿರುವ ಮುಂಬೈ ನಗರದ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್‌ನ ಛಾವಣಿಯ ಮೇಲೆ ನಾಯಿಯೊಂದು ನಡೆದುಕೊಂಡು ಹೋಗುತ್ತಿರುವ ವಿಡಿಯೋ ವೈರಲ್​ ಆಗಿದೆ.

ಬೀದಿ ನಾಯಿಯೊಂದು ಮೇಲ್ಛಾವಣಿಯ ಮೇಲೆ ಅಪಾಯಕಾರಿಯಾಗಿ ತಿರುಗುತ್ತಿರುವುದನ್ನು ತೋರಿಸುವ ವಿಡಿಯೋವನ್ನು ಮುಂಬೈನ ಅಂಧೇರಿ ರೈಲ್ವೆ ನಿಲ್ದಾಣದಿಂದ ವರದಿ ಮಾಡಲಾಗಿದೆ.

ಈ ಟ್ವೀಟ್ ಪ್ರಕಾರ, ಅಂಧೇರಿಯ ಪ್ಲಾಟ್‌ಫಾರ್ಮ್ 4 ಮತ್ತು 5 ರ ಛಾವಣಿಯ ಮೇಲೆ ನಾಯಿ ತಿರುಗಾಡುತ್ತಿರುವುದನ್ನು ನೋಡಬಹುದು. ವಿಚಿತ್ರ ರೀತಿಯಲ್ಲಿ ನಾಯಿ ತಿರುಗಾಡುತ್ತಿರುವುದನ್ನು ಅನಿಲ್ ಜೋಶಿ ಎನ್ನುವವರು ವಿಡಿಯೋ ಮಾಡಿ ಪಶ್ಚಿಮ ರೈಲ್ವೆಯ ವಿಭಾಗೀಯ ರೈಲ್ವೆ ವ್ಯವಸ್ಥಾಪಕ- ಮುಂಬೈ ವಿಭಾಗ ಮತ್ತು ಉತ್ತರ ರೈಲ್ವೆಯ ಅಧಿಕೃತ ಖಾತೆಯನ್ನು ಟ್ಯಾಗ್ ಮಾಡಿದ್ದಾರೆ.

ನಾಯಿ ಅಲ್ಲಿಗೆ ಹೇಗೆ ಬಂತು ಎಂಬ ಬಗ್ಗೆ ಇದುವರೆಗೆ ಮಾಹಿತಿ ಸಿಗಲಿಲ್ಲ. ಪ್ರಕರಣವನ್ನು ಗಮನಿಸಿ, ಉತ್ತರ ರೈಲ್ವೇ ಅಧಿಕಾರಿಗಳ ತಂಡ ಪರಿಶೀಲನೆ ನಡೆಸುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...