alex Certify ಗರ್ಭಿಣಿ ಹೆಂಗಸಿನ ಹೊಟ್ಟೆಗೆ ಮುತ್ತಿಕ್ಕಿದ ಒರಾಂಗುಟನ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಭಿಣಿ ಹೆಂಗಸಿನ ಹೊಟ್ಟೆಗೆ ಮುತ್ತಿಕ್ಕಿದ ಒರಾಂಗುಟನ್‌

ಒರಾಂಗುಟನ್ ಒಂದು ಗಾಜಿನ ಶೀಲ್ಡ್‌ ಮೂಲಕವೇ ತನ್ನ ಹೊಟ್ಟೆಗೆ ಮುತ್ತಿಕ್ಕಿದ ಭಾವುಕ ಕ್ಷಣವೊಂದನ್ನು ಅನುಭವಿಸಿದ ಇಂಗ್ಲೆಂಡ್‌ನ ಗರ್ಭಿಣಿ ಮಹಿಳೆಯೊಬ್ಬರು ಆನಂದಭಾಷ್ಪ ಸುರಿಸಿದ್ದಾರೆ.

ಗ್ಲೌಸೆಸ್ಟರ್‌ಶೈರ್‌‌ನ ನವೋಮಿ ಡೇವಿಸ್ ಹೆಸರಿನ 34 ವರ್ಷದ ಈ ಮಹಿಳೆ ಲೀಸೆಸ್ಟರ್‌ಶೈರ್‌ನ ಟ್ವೈಕ್ರಾಸ್ ಮೃಗಾಲಯಕ್ಕೆ ಪತಿ ಬೆನ್ ಬಿಲ್ಲಿಂಗ್‌ ಹ್ಯಾಮ್ ಜೊತೆಗೆ ಭೇಟಿ ಕೊಟ್ಟಿದ್ದರು. ಆ ವೇಳೆ ಮಂಗಗಳ ವಿಭಾಗದತ್ತ ಬಂದ ನವೋಮಿಗೆ, ಒರಾಂಗುಟನ್ ಒಂದು ತನ್ನ ತಾಯಿಯ ಹೆಗಲ ಮೇಲೆ ನಿಂತು ಗಾಜಿನ ಪರದೆ ಮೂಲಕವೇ ನವೋಮಿಯ ಗರ್ಭಧಾರಿತ ಹೊಟ್ಟೆಗೆ ಮುತ್ತಿಕ್ಕಿದೆ.

ಸಕ್ಕರೆಗಿಂತ ‘ಬೆಲ್ಲ’ ಆರೋಗ್ಯಕ್ಕೆ ಬೆಸ್ಟ್‌ ಯಾಕೆ ಗೊತ್ತಾ….?

ಈ ವೇಳೆ ನಾಲ್ಕು ತಿಂಗಳ ಗರ್ಭವತಿಯಾಗಿದ್ದ ನವೋಮಿಗೆ ತನ್ನ ಹೊಟ್ಟೆಯನ್ನು ಒರಾಂಗುಟನ್‌ಗೆ ತೋರಲು ಆಕೆಯ ಪತಿ ತಿಳಿಸಿದ್ದಾರೆ.

“ಗರ್ಭಧಾರಣೆ ಬಗ್ಗೆ ಒರಾಂಗುಟನ್‌ ಗಳಿಗೆ ಅರಿವಿರುತ್ತದೆ ಎಂದು ನನಗೆ ಗೊತ್ತೇ ಇರಲಿಲ್ಲ. ಆದರೆ ಈ ಮರಿ ನನ್ನ ಹೊಟ್ಟೆಗೆ ಮುತ್ತಿಕ್ಕಲು ಆರಂಭಿಸಿತು. ಅದು ನಿಜಕ್ಕೂ ಸುಂದರ ಕ್ಷಣವಾಗಿತ್ತು — ನಾನು ಸ್ವಲ್ಪ ಭಾವುಕಳಾದೆ” ಎಂದು ನವೋವಿ ತಮ್ಮ ಅನುಭವದ ಬಗ್ಗೆ ತಿಳಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...