alex Certify ಸಕ್ಕರೆಗಿಂತ ‘ಬೆಲ್ಲ’ ಆರೋಗ್ಯಕ್ಕೆ ಬೆಸ್ಟ್‌ ಯಾಕೆ ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಕ್ಕರೆಗಿಂತ ‘ಬೆಲ್ಲ’ ಆರೋಗ್ಯಕ್ಕೆ ಬೆಸ್ಟ್‌ ಯಾಕೆ ಗೊತ್ತಾ….?

ಸಕ್ಕರೆಗಿಂತ ಬೆಲ್ಲವೇ ಆರೋಗ್ಯಕರ ಎಂಬುದು ಎಲ್ಲರಿಗೂ ಗೊತ್ತು. ಬೆಲ್ಲವು ಜೀರ್ಣಕ್ರಿಯೆಯನ್ನು ವೇಗವಾಗಿ ನಡೆಯುವಂತೆ ಮಾಡುತ್ತದೆ. ಅಷ್ಟೇ ಅಲ್ಲ, ಆಹಾರ ಚೆನ್ನಾಗಿ ಜೀರ್ಣವಾಗುವಂತೆಯೂ ನೋಡಿಕೊಳ್ಳುತ್ತದೆ.

* ಒಂದು ವೇಳೆ ಹೊಟ್ಟೆ ಬಿರಿಯುವಂತೆ ತಿಂದು ಬಿಟ್ಟಿದ್ದರೆ, ಅದು ಚೆನ್ನಾಗಿ ಜೀರ್ಣವಾಗಲಿ ಎಂದು ಸ್ವಲ್ಪ ಬೆಲ್ಲ ತಿನ್ನಲು ಹೇಳಲಾಗುತ್ತದೆ.

* ಬೆಲ್ಲ ಶ್ವಾಸಕೋಶಗಳ ಆರೋಗ್ಯವನ್ನು, ಜೀರ್ಣ ವ್ಯವಸ್ಥೆಯನ್ನು ಕಾಪಾಡುತ್ತದೆ. ಹಾಗಾಗಿ ಇದನ್ನು ಒಳ್ಳೆಯ ಕ್ಲೆನ್ಸರ್ ಎಂದು ವರ್ಣಿಸುತ್ತಾರೆ.

* ಸಕ್ಕರೆಗಿಂತ ಬೆಲ್ಲದಲ್ಲಿ ನಾರಿನಂಶ ಹೆಚ್ಚು. ಹಾಗಾಗಿ ಇದು ಮಲಬದ್ಧತೆ ಉಂಟಾಗದಂತೆ ಕಾಪಾಡುತ್ತದೆ. ಕ್ಲೆನ್ಸರ್ ಆಗಿ ಇದು ಪಿತ್ತಕೋಶವನ್ನು ಸಹ ಶುಭ್ರ ಮಾಡುತ್ತದೆ.

* ಬೆಲ್ಲದಲ್ಲಿ ಖನಿಜಗಳು, ಲವಣಗಳು ಹೆಚ್ಚಾಗಿವೆ. ಅದರಲ್ಲೂ ಕಬ್ಬಿಣದ ಅಂಶ ತುಂಬಾ ಹೆಚ್ಚಾಗಿದೆ. ಹಾಗಾಗಿ ಋತುಚಕ್ರದ ಸಮಸ್ಯೆಗಳಿಂದ ತೊಳಲಾಡುವ ಮಹಿಳೆಯರು ಬೆಲ್ಲದಿಂದ ಮಾಡಿದ ಕಡಲೆ ಮಿಠಾಯಿಯನ್ನು ತಿನ್ನಬಹುದು.

* ಮಹಿಳೆಯರಲ್ಲಿ ಋತುಚಕ್ರದ ಸಮಯದಲ್ಲಿ ಬರುವ ನೋವನ್ನು ಬೆಲ್ಲ ಕಡಿಮೆ ಮಾಡುತ್ತದೆ.

* ಬೆಲ್ಲ ದೇಹದಲ್ಲಿರುವ ಫ್ರೀ ರಾಡಿಕಲ್ಸ್ ಅನ್ನು ನಿವಾರಿಸುತ್ತದೆ. ಅದರಿಂದ ರೋಗನಿರೋಧಕ ಶಕ್ತಿ ಬೆಳೆಯುತ್ತದೆ.

* ಬೆಲ್ಲದಲ್ಲಿರುವ ಕಾಂಪ್ಲೆಕ್ಸ್ ಕಾರ್ಬೋಹೈಡ್ರೇಟ್ಸ್ ನಿಂದ ತಕ್ಷಣ ದೇಹಕ್ಕೆ ಶಕ್ತಿ ದೊರೆಯುತ್ತದೆ. ಆದ್ದರಿಂದ ಬೆಲ್ಲ ಶಕ್ತಿಯ ಆಗರವೆನ್ನಬಹುದು.

* ಡಯಾಬಿಟಿಸ್ ರೋಗಿಗಳಿಗೆ ಸಕ್ಕರೆಗಿಂತ ಬೆಲ್ಲವೇ ಒಳ್ಳೆಯದು ಎಂದು ಕೆಲವರು ಹೇಳಿದರೂ, ಇದರ ಕ್ಯಾಲರಿಫಿಕ್ ಬೆಲೆ ಹೆಚ್ಚಾಗಿರುತ್ತದೆ. ಹಾಗಾಗಿ ಡಯಾಬಿಟಿಸ್ ನಿಂದ ನರಳುತ್ತಿರುವವರು ಬೆಲ್ಲವನ್ನು ಹೆಚ್ಚಾಗಿ ಉಪಯೋಗಿಸುವುದು ಒಳ್ಳೆಯದಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...