alex Certify ರೊಚ್ಚಿಗೆದ್ದು ಘರ್ಜಿಸಿದ ಹುಲಿ; ತತ್ತರಿಸಿದ ಪ್ರವಾಸಿಗರು……! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೊಚ್ಚಿಗೆದ್ದು ಘರ್ಜಿಸಿದ ಹುಲಿ; ತತ್ತರಿಸಿದ ಪ್ರವಾಸಿಗರು……!

ಉತ್ತರಾಖಂಡ: ಸಿಟ್ಟಿಗೆದ್ದ ಹುಲಿಯೊಂದು ಸಫಾರಿ ಜೀಪಿನ ಮೇಲೆ ಸವಾರಿ ಮಾಡುತ್ತಿದ್ದ ಪ್ರವಾಸಿಗರನ್ನು ದೂಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ದೃಶ್ಯವನ್ನು ಸಫಾರಿ ವಾಹನದಲ್ಲಿ ಬಂದಿದ್ದ ಪ್ರವಾಸಿಗರೊಬ್ಬರು ಕ್ಯಾಮರಾದಲ್ಲಿ ಸೆರೆಹಿಡಿದು ಭಯಾನಕ ಘಟನೆಯನ್ನು ಅನುಭವಿಸಿದ್ದಾರೆ.

ಇಂಡಿಯಾ ಟುಡೇ ಗ್ರೂಪ್ ಪ್ರಕಾರ ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಬಳಿಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಸುಶಾಂತ ನಂದಾ ಅವರು ಟ್ವಿಟರ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. “ಪಟ್ಟೆಯ ಸನ್ಯಾಸಿಯು ಕಿರಿಕಿರಿಗೊಳ್ಳುತ್ತಾನೆ” ಎಂದು ಅವರು ಶೀರ್ಷಿಕೆ ನೀಡಿದ್ದಾರೆ. ವಾಹನದಲ್ಲಿದ್ದ ಜನರು ಪೊದೆಗಳ ಹಿಂದೆ ಅಡಗಿಕೊಂಡಿರುವ ಹುಲಿ  ನೋಡಲು ನಿಂತಿರುತ್ತಾರೆ, ಫೋಟೋ ಕ್ಲಿಕ್ಕಿಸುತ್ತಿರುತ್ತಾರೆ. ಈ ಸಂದರ್ಭದಲ್ಲಿ ರೊಚ್ಚಿಗೆದ್ದು ಹುಲಿ ಘರ್ಜಿಸುತ್ತಾ ಬರುತ್ತದೆ.

ಸಫಾರಿ ವಾಹನದ ಚಾಲಕ ಚಾಣಾಕ್ಷ ನಡೆ ನಡೆಸಿ ಆತುರಾತುರವಾಗಿ ವಾಹನವನ್ನು ಹಿಮ್ಮುಖವಾಗಿ ಚಲಿಸಲು ಯತ್ನಿಸಿದರೂ ಹುಲಿ ಘರ್ಜನೆಯಿಂದ ಜನರು ಕೂಗಿಕೊಳ್ಳುವುದನ್ನು ವಿಡಿಯೋದಲ್ಲಿ ಕೇಳಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...