alex Certify ಮುದ್ದು ಮುದ್ದು ಹುಲಿಮರಿಗಳ ಆಟದ ಕ್ಯೂಟ್​ ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುದ್ದು ಮುದ್ದು ಹುಲಿಮರಿಗಳ ಆಟದ ಕ್ಯೂಟ್​ ವಿಡಿಯೋ ವೈರಲ್​

ಸತ್ಪುರ: ಮಧ್ಯಪ್ರದೇಶದ ಸತ್ಪುರ ಹುಲಿ ಸಂರಕ್ಷಿತ ಪ್ರದೇಶವು ಹಂಚಿಕೊಂಡಿರುವ ವಿಡಿಯೋ ಒಂದರಲ್ಲಿ ಎರಡು ಹುಲಿ ಮರಿಗಳು ಪರಸ್ಪರ ಮುದ್ದಾಗಿ ಆಟವಾಡುತ್ತಿರುವ ಕ್ಯೂಟ್ ದೃಶ್ಯವನ್ನು ನೋಡಬಹುದು. ತುಂಬಾ ಬೇಜಾರಾದಾಗ ಈ ವಿಡಿಯೋ ಮನಸ್ಸಿಗೆ ಮುದ ನೀಡುವುದಂತೂ ಗ್ಯಾರಂಟಿ.

ಸಾತ್ಪುರ ಹುಲಿ ಸಂರಕ್ಷಿತ ಪ್ರದೇಶದ ಫೀಲ್ಡ್ ಡೈರೆಕ್ಟರ್ ಎಲ್. ಕೃಷ್ಣಮೂರ್ತಿ ಅವರು ಈ ದೃಶ್ಯವನ್ನು ಸೆರೆಹಿಡಿದಿದ್ದು, ಅದನ್ನು ಶೇರ್​ ಮಾಡಿಕೊಂಡಿದ್ದಾರೆ. ಮುದ್ದು ಮರಿಗಳು ಸಂತೋಷದಿಂದ ಆಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡ ನಂತರ, ಹಲವಾರು ವೀಕ್ಷಣೆಗಳನ್ನು ಈ ವಿಡಿಯೋ ಕಂಡಿದೆ. ಪ್ರಾಣಿ ಲೋಕವೇ ವಿಚಿತ್ರ. ಅದರಲ್ಲಿಯೂ ಮುದ್ದು ಮೊಗದ ಕಂದಮ್ಮಗಳಂತೆ ಪ್ರಾಣಿಗಳ ಮರಿಗಳು ಕೂಡ ಅಷ್ಟೇ ಮನರಂಜನೆಯನ್ನು ಒದಗಿಸುತ್ತವೆ. ಇದು ನಮ್ಮ ದಿನವನ್ನು ಇನ್ನಷ್ಟು ಸೊಗಸು ಮಾಡಿದೆ ಎಂದು ಹಲವರು ಕಮೆಂಟ್​ ಮೂಲಕ ತಿಳಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...