alex Certify ಮದ್ಯದ ಅಮಲಿನಲ್ಲಿ ಅಪಘಾತವೆಸಗಿದ ಸರ್ಕಾರಿ ಕಾರು ಚಾಲಕ; ಸ್ಕೂಟರ್‌ ನಲ್ಲಿದ್ದ ಮಗ ಸಾವು – ತಾಯಿ ಸ್ಥಿತಿ ಗಂಭೀರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದ್ಯದ ಅಮಲಿನಲ್ಲಿ ಅಪಘಾತವೆಸಗಿದ ಸರ್ಕಾರಿ ಕಾರು ಚಾಲಕ; ಸ್ಕೂಟರ್‌ ನಲ್ಲಿದ್ದ ಮಗ ಸಾವು – ತಾಯಿ ಸ್ಥಿತಿ ಗಂಭೀರ

ಮಹಾರಾಷ್ಟ್ರದಲ್ಲಿ ಕಾರೊಂದು ಸ್ಕೂಟರ್ ಮೇಲೆ ಹರಿದು ಸ್ಕೂಟರ್ ನಲ್ಲಿದ್ದ ಮಗ ಸಾವನ್ನಪ್ಪಿದ್ದರೆ, ತಾಯಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ. ಈ ಅಪಘಾತದ ಭೀಕರ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಾಸೈ ಪಶ್ಚಿಮದ ಮಧುಬನ್ ಪ್ರದೇಶದಲ್ಲಿ ಜೂನ್ 23 ರಂದು ಈ ಘಟನೆ ನಡೆದಿದೆ.

ಈ ಘಟನೆಯಲ್ಲಿ ಸಾವನ್ನಪ್ಪಿರುವ ಯುವಕನನ್ನು 17 ವರ್ಷದ ಅಮನ್ ಪಾರ್ಚ ಎಂದು ಗುರುತಿಸಲಾಗಿದ್ದು, ತೀವ್ರವಾಗಿ ಗಾಯಗೊಂಡಿರುವ ಆತನ ತಾಯಿ ಸುರೇಖಾ ಮನೋಜ್ ಪಾರ್ಚ ಎಂದು ತಿಳಿದುಬಂದಿದೆ.

ಅಪಘಾತ ನಡೆಸಿದ ಇನ್ನೋವಾ ಕಾರಿನ ಮೇಲೆ ಮಹಾರಾಷ್ಟ್ರ ಸರ್ಕಾರದ ಲೋಕೋಪಯೋಗಿ ಇಲಾಖೆ ಎಂದು ಬರೆಯಲಾಗಿತ್ತು. ಇದರ ಚಾಲಕ ಮದ್ಯಪಾನ ಮಾಡಿ ರಭಸವಾಗಿ ಕಾರನ್ನು ಓಡಿಸಿದ ಪರಿಣಾಮ ಈ ಅಪಘಾತ ನಡೆದಿದೆ ಎಂದು ಸುರೇಖಾರ ಸಂಬಂಧಿ ದೂರಿದ್ದಾರೆ.

ಈ ಘಟನಾ ಸ್ಥಳಕ್ಕೆ ಆಗಮಿಸಿದ ವಾಸೈ ಪೊಲೀಸರು ಇನ್ನೋವಾ ಕಾರನ್ನು ವಶಕ್ಕೆ ಪಡೆದಿದ್ದು, ಚಾಲಕನ ಪತ್ತೆಗೆ ಬಲೆ ಬೀಸಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...