alex Certify WATCH: ಬೆಕ್ಕಿನ ಕಾರಣಕ್ಕೆ ಕೆಲ ಕಾಲ ನಿಂತ ಆರ್.ಸಿ.ಬಿ. – ಪಂಜಾಬ್ ಕಿಂಗ್ಸ್ ನಡುವಿನ ಮ್ಯಾಚ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

WATCH: ಬೆಕ್ಕಿನ ಕಾರಣಕ್ಕೆ ಕೆಲ ಕಾಲ ನಿಂತ ಆರ್.ಸಿ.ಬಿ. – ಪಂಜಾಬ್ ಕಿಂಗ್ಸ್ ನಡುವಿನ ಮ್ಯಾಚ್

ಶುಕ್ರವಾರದಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವೆ ನಡೆದ ಪಂದ್ಯದಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದೆ. ಪಂದ್ಯಕ್ಕೆ ಬೆಕ್ಕೊಂದು ಅರೆಕ್ಷಣ ಅಡ್ಡಿ ಮಾಡಿದ್ದು ಈ ಕಾರಣಕ್ಕೆ ಕೆಲವೊತ್ತು ಆಟ ನಿಂತಿದೆ.

ಮುಂಬೈನ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 20 ಓವರ್ ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 209 ರನ್ ಗಳಿಸಿತ್ತು. ಈ ಗುರಿಯನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬ್ಯಾಟಿಂಗ್ ಮಾಡುವ ವೇಳೆ ಮೊದಲ ಓವರ್ ನಲ್ಲಿ ಈ ಘಟನೆ ಸಂಭವಿಸಿದೆ.

ಈ ಬೆಕ್ಕು ಕ್ರೀಡಾಂಗಣದೊಳಕ್ಕೂ ಬಂದಿರಲಿಲ್ಲ. ಆದರೆ ಇದು ಸೈಟ್ ಸ್ಕ್ರೀನ್ ಮುಂದೆ ಕುಳಿತಿದ್ದ ಕಾರಣ ಬ್ಯಾಟ್ಸ್ ಮನ್ ಗಳಿಗೆ ಬಾಲ್ ಗುರುತಿಸಲು ಅಡಚಣೆಯಾಗಿದೆ. ಬಳಿಕ ಅಂಪೈರ್ ಸಿಬ್ಬಂದಿಗೆ ಹೇಳಿ ಬೆಕ್ಕನ್ನು ಅಲ್ಲಿಂದ ಕಳುಹಿಸಿದ ಬಳಿಕ ಆಟ ಆರಂಭವಾಗಿದೆ.

— Varma Fan (@VarmaFan1) May 13, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...