alex Certify ಭಾರತೀಯ ಆಹಾರ ಪದ್ಧತಿ ಒಂದು ಮಸಾಲೆಯನ್ನು ಆಧರಿಸಿದೆ ಅಂಕಣಕ್ಕೆ ವ್ಯಕ್ತವಾಗ್ತಿದೆ ತೀವ್ರ ಟೀಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತೀಯ ಆಹಾರ ಪದ್ಧತಿ ಒಂದು ಮಸಾಲೆಯನ್ನು ಆಧರಿಸಿದೆ ಅಂಕಣಕ್ಕೆ ವ್ಯಕ್ತವಾಗ್ತಿದೆ ತೀವ್ರ ಟೀಕೆ

ಭಾರತದ ಆಹಾರ ಪದ್ಧತಿಗೆ ಸಂಬಂಧಿಸಿದಂತೆ ವಾಷಿಂಗ್ಟನ್ ಪೋಸ್ಟ್ ನಲ್ಲಿ ಪ್ರಕಟವಾದ ಅಂಕಣಕ್ಕೆ ಸಾಕಷ್ಟು ಟೀಕೆ ವ್ಯಕ್ತವಾಗ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಇದ್ರ ಬಗ್ಗೆ ಸಾಕಷ್ಟು ಪ್ರತಿಕ್ರಿಯೆ ಬರ್ತಿದೆ. ಭಾರತೀಯ ಆಹಾರ ಪದ್ಧತಿ ಒಂದು ಮಸಾಲೆಯನ್ನು ಆಧರಿಸಿದೆ ಎಂದು ಬರೆಯಲಾಗಿದೆ. ವಾಷಿಂಗ್ಟನ್ ಪೋಸ್ಟ್ ಪ್ರಕಟಿಸಿದ ಅಂಕಣವನ್ನು ಟ್ವಿಟರ್‌ನಲ್ಲಿ ಸೆಲೆಬ್ರಿಟಿ ಬಾಣಸಿಗರು, ರಾಜಕಾರಣಿಗಳು ಮತ್ತು ಭಾರತೀಯರು ಟೀಕಿಸಿದ್ದಾರೆ.

ವಾಷಿಂಗ್ಟನ್ ಪೋಸ್ಟ್ ಹಾಸ್ಯ ಅಂಕಣಕಾರ್ತಿ ಜೀನ್ ವೀಂಗಾರ್ಟೆನ್, ಈ ಅಂಕಣವನ್ನು ಬರೆದಿದ್ದಾರೆ. `ಯು ಕೆನ್ ಮೇಕ್ ಮಿ ಈಟ್ ದೀಸ್ ಫುಡ್’ ಹೆಸರಿನಲ್ಲಿ ಅಂಕಣ ಬರೆಯಲಾಗಿದೆ. ಈ ಅಂಕಣದಲ್ಲಿ ಅವರು ಅನೇಕ ಆಹಾರದ ಬಗ್ಗೆ ಬರೆದಿದ್ದಾರೆ. ನಾನು ಏಕೆ ಕೆಲ ಆಹಾರವನ್ನು ಸೇವನೆ ಮಾಡುವುದಿಲ್ಲ ಎಂಬುದನ್ನೂ ಬರೆದಿದ್ದಾರೆ. ಅದರಲ್ಲಿ ಉಪ್ಪಿನ ಮೀನು, ಬೇಳೆಕಾಳು ಸೇರಿದಂತೆ ಕೆಲ ಆಹಾರವನ್ನು ಏಕೆ ಸೇವನೆ ಮಾಡುವುದಿಲ್ಲ ಎಂದು ವಿವರಿಸಿದ್ದಾರೆ. ಅದರಲ್ಲಿ ಭಾರತದ ಆಹಾರದ ಬಗ್ಗೆ ಬರೆದಿರುವ ಅವರು, ವಿಶ್ವದ ಏಕೈಕ ಜನಾಂಗೀಯ ಪಾಕಪದ್ಧತಿಯು ಸಂಪೂರ್ಣವಾಗಿ ಒಂದು ಮಸಾಲೆಯನ್ನು ಆಧರಿಸಿದೆ ಎಂದಿದ್ದಾರೆ.

ಭಾರತದ ಕರ್ರಿ ಬಗ್ಗೆ ಬರೆದಿರುವ ಅವರು ನನಗೆ ಭಾರತೀಯ ಆಹಾರ ಇಷ್ಟವಿಲ್ಲ ಎಂದಿದ್ದಾರೆ. ಇದ್ರಲ್ಲಿ ಪಾಕಶಾಲೆ ಪದ್ಧತಿಯಿದೆ ಎಂದು ನಾನು ನಂಬುವುದಿಲ್ಲವೆಂದು ಬರೆದಿದ್ದಾರೆ. ಈ ಅಂಕಣಕ್ಕೆ ಅನೇಕರಿಂದ ಟೀಕೆ ವ್ಯಕ್ತವಾಗಿದ್ದು, ಜನರು ಟ್ವೀಟ್ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಭಾರತೀಯ-ಅಮೇರಿಕನ್ ಲೇಖಕಿ ಮತ್ತು ಟಿವಿ ಸ್ಟಾರ್ ಪದ್ಮಾ ಲಕ್ಷ್ಮಿ ಇನ್‌ಸ್ಟಾಗ್ರಾಮ್ ಪೋಸ್ಟ್‌ ಮೂಲಕ ಈ ಅಂಕಣದ ಬಗ್ಗೆ ಟೀಕಿಸಿದ್ದಾರೆ. ಇದನ್ನು ಪ್ರಕಟಿಸಿದ ವಾಶಿಂಗ್ಟನ್ ಪೋಸ್ಟ್ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...