alex Certify ಎಚ್ಚರ: ಡೆಂಗ್ಯೂ ರೋಗ ಲಕ್ಷಣಗಳಲ್ಲಾಗಿದೆ ದೊಡ್ಡ ಬದಲಾವಣೆ; ಹೊಸ ತಳಿ ಮೊದಲಿಗಿಂತಲೂ ಹೆಚ್ಚು ಅಪಾಯಕಾರಿ ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಚ್ಚರ: ಡೆಂಗ್ಯೂ ರೋಗ ಲಕ್ಷಣಗಳಲ್ಲಾಗಿದೆ ದೊಡ್ಡ ಬದಲಾವಣೆ; ಹೊಸ ತಳಿ ಮೊದಲಿಗಿಂತಲೂ ಹೆಚ್ಚು ಅಪಾಯಕಾರಿ !

ಬೆಂಗಳೂರು ಸೇರಿದಂತೆ ಅನೇಕ ಕಡೆಗಳಲ್ಲಿ ಡೆಂಗ್ಯೂ ಹಾವಳಿ ಹೆಚ್ಚಾಗಿದೆ. ಎಲ್ಲರೂ ಭಯಪಡುವಂತಹ ಕಾಯಿಲೆ ಇದು. ಈಗ ಕರೋನಾದಂತೆಯೇ ಡೆಂಗ್ಯೂನ ಹೊಸ ರೂಪಗಳು ಕಾಣಿಸಿಕೊಳ್ಳುತ್ತಿವೆ. ಇತ್ತೀಚಿನ ವರದಿಗಳ ಪ್ರಕಾರ DENV2 ಸ್ಟ್ರೈನ್ ಎಂಬ ಡೆಂಗ್ಯೂ ಹೊಸ ರೂಪಾಂತರ ಪತ್ತೆಯಾಗಿದೆ. ಇದು ಹಳೆಯ ತಳಿಗಿಂತ ಹೆಚ್ಚು ಅಪಾಯಕಾರಿ.

ಹೊಸ ರೂಪಾಂತರದ ಸೋಂಕಿಗೆ ದೆಹಲಿಯಲ್ಲಿ ಅನೇಕರು ತುತ್ತಾಗುತ್ತಿದ್ದಾರೆ. ಇದರ ಲಕ್ಷಣಗಳು ಡೆಂಗ್ಯೂವನ್ನೇ  ಹೋಲುತ್ತವೆ. ತಕ್ಷಣ ಎಚ್ಚೆತ್ತುಕೊಂಡು ಚಿಕಿತ್ಸೆ ಪಡೆಯದೇ ಇದ್ದರೆ ಈ ರೂಪಾಂತರಿ ಮಾರಕವಾಗಬಹುದು. ಆದ್ದರಿಂದ ಡೆಂಘಿ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.

DENV 2 ಅನ್ನು D2 ಸ್ಟ್ರೈನ್ ಎಂದೂ ಕರೆಯುತ್ತಾರೆ. ಈ ಸ್ಟ್ರೈನ್ ಹಿಂದೆಯೇ ಅಸ್ತಿತ್ವದಲ್ಲಿತ್ತು, ಆದರೆ ಕಾಲಾನಂತರದಲ್ಲಿ ಹೆಚ್ಚು ಗಂಭೀರವಾಗಿದೆ. ಡೆಂಗ್ಯೂನ ನಾಲ್ಕು ಮುಖ್ಯ ತಳಿಗಳು ಅಸ್ತಿತ್ವದಲ್ಲಿವೆ. ಅವುಗಳೆಂದರೆ DENV-1,  DENV-2, DENV-3 ಮತ್ತು DENV-4.

ಇದು ದಾಳಿ ಮಾಡಿದಾಗ ತನ್ನ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುತ್ತದೆ. ಆದರೆ ಈ ಸಮಯದಲ್ಲಿ ಇತರ ತಳಿಗಳ ದಾಳಿಗೆ ಅವಕಾಶವಿದೆ. ಎರಡು ತಳಿಗಳು ಒಟ್ಟಿಗೆ ರೋಗಿಗೆ ಸೋಂಕು ತರಬಹುದು ಎಂದು WHO ಹೇಳಿದೆ. ಆಗ ರೋಗಿಯ ಪರಿಸ್ಥಿತಿ ಹೆಚ್ಚು ಗಂಭೀರವಾಗಬಹುದು. 2012 ರವರೆಗೆ ಭಾರತದಲ್ಲಿ D1 ಮತ್ತು D3 ತಳಿಗಳು ಹೆಚ್ಚು ಪರಿಣಾಮಕಾರಿಯಾಗಿದ್ದವು. ಆದರೆ ನಂತರ D2 ಹೆಚ್ಚು ಪ್ರಾಬಲ್ಯ ಹೊಂದಲು ಪ್ರಾರಂಭಿಸಿತು.

ಬದಲಾದ ಡೆಂಗ್ಯೂ ಲಕ್ಷಣಗಳು ಯಾವುವು ?

ಡೆಂಘಿ ಕಾಣಿಸಿಕೊಂಡಾಗ ಪ್ಲೇಟ್‌ಲೆಟ್‌ಗಳು ಕಡಿಮೆಯಾಗುತ್ತವೆ. ಹೊಸ ರೂಪಾಂತರದ ಪರಿಣಾಮದಿಂದಾಗಿ ಪ್ಲೇಟ್ಲೆಟ್ ಪತನದ ಪ್ರಮಾಣವು ಬಹಳ ವೇಗವಾಗಿ ಹೆಚ್ಚಾಗುತ್ತದೆ. ಈ ರೂಪಾಂತರದಿಂದಾಗಿ ಹೆಮರಾಜಿಕ್ ಜ್ವರದ ಅಪಾಯವೂ ಹೆಚ್ಚಾಗಿದೆ. ತೀವ್ರ ಜ್ವರವಲ್ಲದೆ ವಾಂತಿ, ತಲೆನೋವು, ಕೀಲು ನೋವು ಕೂಡ ಬರಬಹುದು. ಕೆಲವರಿಗೆ ದದ್ದುಗಳು ಕಾಣಿಸಿಕೊಳ್ಳಬಹುದು. ಅತಿಯಾದ ದೌರ್ಬಲ್ಯ ಮತ್ತು ಒಸಡುಗಳಿಂದ ರಕ್ತಸ್ರಾವ ಕೂಡ ಡೆಂಘಿಯ ಹೊಸ ಲಕ್ಷಣಗಳಲ್ಲೊಂದು. ಆದ್ದರಿಂದ ತೀವ್ರ ಜ್ವರ ಕಾಣಿಸಿಕೊಂಡರೆ  ತಕ್ಷಣ ವೈದ್ಯರನ್ನು ಸಂಪರ್ಕಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...