alex Certify WAR BREAKING: ರಷ್ಯಾ ದಾಳಿಗೆ ಉಕ್ರೇನ್ ಖ್ಯಾತ ನಟ ಪಾಶಾ ಲಿ ಬಲಿ; ಸುಮಿ ನಗರದ ಮೇಲೆ 500 ಕೆಜಿ ಬಾಂಬ್ ಸ್ಫೋಟ; 18 ಜನ ದುರ್ಮರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

WAR BREAKING: ರಷ್ಯಾ ದಾಳಿಗೆ ಉಕ್ರೇನ್ ಖ್ಯಾತ ನಟ ಪಾಶಾ ಲಿ ಬಲಿ; ಸುಮಿ ನಗರದ ಮೇಲೆ 500 ಕೆಜಿ ಬಾಂಬ್ ಸ್ಫೋಟ; 18 ಜನ ದುರ್ಮರಣ

ಕೀವ್: ಉಕ್ರೇನ್ ಮೇಲೆ ರಷ್ಯಾ ನಡೆಸಿರುವ ಬಾಂಬ್ ದಾಳಿಗೆ ಉಕ್ರೇನ್ ನ ಖ್ಯಾತ ನಟ ಪಾಶಾ ಲಿ ಸಾವನ್ನಪ್ಪಿದ್ದಾರೆ. ಈ ಕುರಿತು ಓಡೆಸಾ ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ದೃಢಪಡಿಸಿದೆ.

ಉಕ್ರೇನ್ ನ ಇರ್ಪಿನ್ ನಲ್ಲಿ ರಷ್ಯಾ ನಡೆಸಿದ ದಾಳಿಯಲ್ಲಿ 33 ವರ್ಷದ ನಟ ಪಾಶಾ ಲಿ ಬಲಿಯಾಗಿದ್ದಾರೆ. ಉಕ್ರೇನ್ ಮೇಲೆ ಯುದ್ಧ ಸಾರಿದ ಬೆನ್ನಲ್ಲೇ ಪಾಶಾ ಲಿ ದೇಶ ರಕ್ಷಣೆಗಾಗಿ ಪ್ರಾದೇಶಿಕ ಸೇನೆಗೆ ಸೇರ್ಪಡೆಯಾಗಿದ್ದರು. ಆದರೆ ರಷ್ಯಾ ವಿರುದ್ಧ ಹೋರಾಟದಲ್ಲಿ ಲಿ ಸಾವನ್ನಪ್ಪಿದ್ದಾರೆ.

ಇನ್ನೊಂದೆಡೆ ರಷ್ಯಾ ಸುಮಿ ನಗರದಲ್ಲಿ ಕಳೆದ ರಾತ್ರಿಯಿಂದ ನಿರಂತರ ಬಾಂಬ್ ದಾಳಿ ನಡೆಸುತ್ತಿದ್ದು, ಇಬ್ಬರು ಮಕ್ಕಳು ಸೇರಿ 18 ಜನರು ಮೃತಪಟ್ಟಿದ್ದಾರೆ. ಸುಮಿ ನಗರದ ಮೇಲೆ ರಷ್ಯಾ ಬರೋಬ್ಬರಿ 500 ಕೆಜಿ ಬಾಂಬ್ ದಾಳಿ ನಡೆಸಿದೆ.

ನಿರಂತರ ಬಾಂಬ್ ದಾಳಿ ಬಳಿಕ ಇದೀಗ ಸುಮಿ ನಗರದಲ್ಲಿ 15 ತಾಸುಗಳ ಕಾಲ ರಷ್ಯಾ ಸೇನೆ ಕದನ ವಿರಾಮ ಘೋಷಣೆ ಮಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...