alex Certify ಬ್ಯಾಸ್ಕೆಟ್ ಬಾಲ್ ಆಡಲು ಈತನಿಗೆ ಗೂಳಿಯೇ ಎದುರಾಳಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ಯಾಸ್ಕೆಟ್ ಬಾಲ್ ಆಡಲು ಈತನಿಗೆ ಗೂಳಿಯೇ ಎದುರಾಳಿ….!

ವ್ಯಕ್ತಿಯೊಬ್ಬರು ಗೂಳಿಯೊಂದಿಗೆ ಬ್ಯಾಸ್ಕೆಟ್ ಬಾಲ್ ಆಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆತನಿಂದ ಬ್ಯಾಸ್ಕೆಟ್ ಬಾಲ್ ಕಸಿಯಲು ಆ ಗೂಳಿ ಸಾಕಷ್ಟು ಪ್ರಯತ್ನ ಮಾಡುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಚಿಕ್ಕ‌ ಮೈದಾನದಲ್ಲಿ ಎದುರಾಳಿಯೊಂದಿಗೆ ಅದರ ಸೆಣಸಾಟ ಅಬ್ಬಬ್ಬಾ ಎನ್ನುವಂತಿದೆ.

ಇದನ್ನು ನೋಡಲು ಅಚ್ಚರಿ ಎನಿಸಲೂಬಹುದು. ಎದುರಾಳಿಯಷ್ಟೇ ಚುರುಕುತನದಿಂದ ಆ ಗೂಳಿ ಹೆಜ್ಜೆ ಹಾಕಿ ಬಾಲ್ ಹಿಡಿಯಲು ಪ್ರಯತ್ನಿಸುತ್ತದೆ. ಈ ಒಂದು ರಂಜನೀಯ ವಿಡಿಯೋ ನೆಟ್ಟಿಗರಿಗೆ ಬಹಳ‌ ಖುಷಿಕೊಟ್ಟಂತಿದೆ.

ನೂರಾರು ಮಂದಿ ಕಾಮೆಂಟ್ ಮಾಡಿದ್ದು, ಕೆಲವರು ಗೂಳಿಯನ್ನು ಎನ್ ಬಿ ಎ ಆಟಗಾರರಿಗೂ ಹೋಲಿಸಿದ್ದಾರೆ. ಕೇರಳದ ಮೈದಾನದಲ್ಲಿ ಹಸುವೊಂದು ಫುಟ್ಬಾಲ್ ಆಟಗಾರನ್ನು ಕಾಡಿಸಿದ ಘಟನೆ ಕೂಡ ಇತ್ತೀಚೆಗೆ ನಡೆದಿದ್ದು, ಆ ವಿಡಿಯೋ ಸಹ ವೈರಲ್ ಆಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...