alex Certify ಮನೆಯಿಂದಲೇ ಮತದಾನ ಮಾಡಿದ 33 ಸಾವಿರ ಜನ: ನೋಂದಣಿ ಮಾಡಿಕೊಂಡಿದ್ದವರಲ್ಲಿ 26 ಜನ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಿಂದಲೇ ಮತದಾನ ಮಾಡಿದ 33 ಸಾವಿರ ಜನ: ನೋಂದಣಿ ಮಾಡಿಕೊಂಡಿದ್ದವರಲ್ಲಿ 26 ಜನ ಸಾವು

ಬೆಂಗಳೂರು: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಚುನಾವಣಾ ಆಯೋಗದಿಂದ 80 ವರ್ಷ ಮೇಲ್ಪಟ್ಟವರಿಗೆ, ವಿಕಲಚೇತನರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಮೊದಲ ದಿನ ಹಿರಿಯ ನಟಿ ಲೀಲಾವತಿ ಸೇರಿದಂತೆ 33 ಸಾವಿರ ಜನರು ಮನೆಯಿಂದಲೇ ಮತದಾನ ಮಾಡಿದ್ದಾರೆ.

ಚುನಾವಣಾ ಆಯೋಗದ ಈ ಪ್ರಯತ್ನಕ್ಕೆ ಮೊದಲ ದಿನ ಭರ್ಜರಿ ಯಶಸ್ಸು ದೊರೆತಿದೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 5 ರವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಮನೆಯಿಂದಲೇ ಮತದಾನ ಮಾಡುವ ಪ್ರಕ್ರಿಯೆಯಲ್ಲಿ 2,542 ತಂಡಗಳು ಭಾಗಿಯಾಗಲಿವೆ. 33 ಸಾವಿರಕ್ಕೂ ಅಧಿಕ 80 ವರ್ಷ ಮೇಲ್ಪಟ್ಟವರು ಮತ್ತು ವಿಕಲಚೇತನರು ಮತದಾನ ಮಾಡಿದ್ದಾರೆ. ಮೈಸೂರಿನಲ್ಲಿ ಮನೆಯಿಂದಲೇ ಮತದಾನ ಮಾಡಲು ನೋಂದಾಯಿಸಿಕೊಂಡಿದ್ದ 26 ವೃದ್ಧರು ಮೃತಪಟ್ಟಿದ್ದಾರೆ. ಮೊದಲ ದಿನ 80 ವರ್ಷ ಮೇಲ್ಪಟ್ಟ 787 ಹಾಗೂ 167 ವಿಕಲಚೇತನರು ಮನೆಯಲ್ಲಿ ಮತದಾನ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...