alex Certify ವಿಐ ಆಕರ್ಷಕ ಪ್ಲಾನ್ ನಲ್ಲಿ 2 ತಿಂಗಳವರೆಗೆ ಪ್ರತಿ ದಿನ ಸಿಗ್ತಿದೆ 4ಜಿಬಿ ಡೇಟಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಐ ಆಕರ್ಷಕ ಪ್ಲಾನ್ ನಲ್ಲಿ 2 ತಿಂಗಳವರೆಗೆ ಪ್ರತಿ ದಿನ ಸಿಗ್ತಿದೆ 4ಜಿಬಿ ಡೇಟಾ

ಟೆಲಿಕಾಂ ಕಂಪನಿಗಳ ಮಧ್ಯೆ ಬೆಲೆ ಸಮರ ಮುಂದುವರೆದಿದೆ. ಗ್ರಾಹಕರನ್ನು ಸೆಳೆಯಲು ಕಂಪನಿಗಳು ಅಗ್ಗದ ಪ್ಲಾನ್ ಜೊತೆ ಕೆಲ ಆಫರ್ ನೀಡುತ್ತವೆ.

ವೋಡಾಫೋನ್ ಇಂಡಿಯಾ ಅನೇಕ ಅಗ್ಗದ ಪ್ಲಾನ್ ಗಳನ್ನು ಹೊಂದಿದೆ. ವೋಡಾಫೋನ್ ಈ ಪ್ಲಾನ್ ಗಳು ಜಿಯೋ ಪ್ಲಾನ್ ಗಿಂತ ಆಕರ್ಷಕವಾಗಿವೆ. ವಿಐನ ಕೆಲ ಪ್ಲಾನ್ ಗಳಲ್ಲಿ ಪ್ರತಿ ದಿನ ಡೇಟಾ ಜೊತೆ ವೀಕೆಂಡ್ ರೋಲ್ಓವರ್ ಡೇಟಾ ಸೌಲಭ್ಯವಿದೆ.

ವೋಡಾಫೋನ್ ಇಂಡಿಯಾದ 499 ರೂಪಾಯಿ ಪ್ಲಾನ್, ಜಿಯೋ ಹಾಗೂ ಏರ್ಟೆಲ್ ಪ್ಲಾನ್ ಗಿಂತ ಹೆಚ್ಚು ಗ್ರಾಹಕರಿಗೆ ಹತ್ತಿರವಾಗುತ್ತದೆ. 499 ರೂಪಾಯಿ ಪ್ಲಾನ್ 56 ದಿನಗಳ ಸಿಂಧುತ್ವ ಹೊಂದಿದೆ. ಬಳಕೆದಾರರು ದಿನಕ್ಕೆ 4ಜಿಬಿ ಡೇಟಾವನ್ನು ಪಡೆಯುತ್ತಾರೆ. ಅನಿಯಮಿತ ಕರೆ ಮತ್ತು 100 ಎಸ್‌ಎಂಎಸ್‌ ಪ್ರತಿದಿನ ಲಭ್ಯವಿದೆ. ವಿ ಚಲನಚಿತ್ರಗಳು ಮತ್ತು ಟಿವಿಗೆ ಉಚಿತ ಪ್ರವೇಶ ಪಡೆಯಬಹುದು. ವೀಕೆಂಡ್ ಡೇಟಾ ರೋಲ್ಓವರ್‌ನಂತಹ ವೈಶಿಷ್ಟ್ಯಗಳು ಯೋಜನೆಯಲ್ಲಿ ಲಭ್ಯವಿದೆ. ಬಿಂಜ್ ಆಲ್ ನೈಟ್‌ನಲ್ಲಿ, ಬಳಕೆದಾರರು ಮಧ್ಯಾಹ್ನ 12 ರಿಂದ ಬೆಳಿಗ್ಗೆ 6 ರವರೆಗೆ ಅನಿಯಮಿತ ಡೇಟಾವನ್ನು ಬಳಸಬಹುದು.

56 ದಿನಗಳ ಸಿಂಧುತ್ವದಲ್ಲಿ ರಿಲಾಯನ್ಸ್ ಜಿಯೋ 444 ರೂಪಾಯಿ ಪ್ಲಾನ್ ನೀಡುತ್ತದೆ. ಈ ಯೋಜನೆಯಲ್ಲಿ, ಬಳಕೆದಾರರು ದಿನಕ್ಕೆ 2ಜಿಬಿ ಡೇಟಾವನ್ನು ಪಡೆಯುತ್ತಾರೆ. ಅನಿಯಮಿತ ಕರೆ ಮತ್ತು 100 ಎಸ್‌ಎಂಎಸ್‌ಗಳು ಲಭ್ಯವಿದೆ. ಜಿಯೋ ಆಪ್‌ಗಳ ಉಚಿತ ಚಂದಾದಾರಿಕೆ ಪಡೆಯಬಹುದಾಗಿದೆ.

ಇನ್ನು ಏರ್ಟೆಲ್ 449 ರೂಪಾಯಿ ಯೋಜನೆ ಬಗ್ಗೆ ಹೇಳುವುದಾದ್ರೆ, ಇದ್ರ ಸಿಂಧುತ್ವ ಕೂಡ 56 ದಿನಗಳು. ಬಳಕೆದಾರರು ಪ್ರತಿದಿನ 2ಜಿಬಿ ಡೇಟಾವನ್ನು ಪಡೆಯುತ್ತಾರೆ. ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್ಎಂಎಸ್ ಲಭ್ಯವಿದೆ. ಅಮೆಜಾನ್ ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿ, ವಿಂಕ್ ಮ್ಯೂಸಿಕ್‌ಗೆ ಉಚಿತ ಪ್ರವೇಶ ಪಡೆಯಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...