alex Certify ತಂದೆಯ ಅಂತಿಮ‌ ದರ್ಶನದ ಭಾಗ್ಯ ಕಿತ್ತುಕೊಂಡ ಕೊರೊನ, ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ವಿಶಾಲ್ ದದ್ಲಾನಿ.. | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಂದೆಯ ಅಂತಿಮ‌ ದರ್ಶನದ ಭಾಗ್ಯ ಕಿತ್ತುಕೊಂಡ ಕೊರೊನ, ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ವಿಶಾಲ್ ದದ್ಲಾನಿ..

ಬಾಲಿವುಡ್ ನ ಮ್ಯೂಸಿಕ್ ಕಂಪೋಸರ್, ಗಾಯಕ ವಿಶಾಲ್ ದದ್ಲಾನಿಯವರ ತಂದೆ ಶನಿವಾರದಂದು ಇಹಲೋಕ ತ್ಯಜಿಸಿದ್ದಾರೆ. ಮೋತಿಲಾಲ್ ದದ್ಲಾನಿಯವರು ಇತ್ತೀಚೆಗೆ ಪಿತ್ತಕೋಶದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಶುಕ್ರವಾರ ರಾತ್ರಿ ಅಸುನೀಗಿದ್ದಾರೆ. ಆದರೆ ತನ್ನ ತಂದೆಯ ಕೊನೆ ಕಾರ್ಯಕ್ಕು ಹಾಜರಾಗದಂತಹ ಪರಿಸ್ಥಿತಿ ವಿಶಾಲ್ ದದ್ಲಾನಿಯವರದ್ದು.

ಕೊರೋನಾ ಪಾಸಿಟಿವ್ ಆಗಿರೊ ವಿಶಾಲ್, ಜನರ ನಡುವೆ ಹೋಗಿ ಅವರ ತಂದೆಗೆ ಅಂತಿಮ ನಮನ ಹೇಳಲೂ ಸಾಧ್ಯವಾಗುತ್ತಿಲ್ಲ, ಕಡೆಗೆ ತಮ್ಮ ತಾಯಿಯವರ ಜೀವನದ ಅತ್ಯಂತ ದುಃಖಕರ ಸಂದರ್ಭದಲ್ಲು ಅವರಿಗೆ ಹೆಗಲಾಗಿ ಸಮಾಧಾನ ಹೇಳಲು ಆಗುತ್ತಿಲ್ಲವೆಂದು ವಿಶಾಲ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ದುಃಖತಪ್ತರಾಗಿ ಬರೆದುಕೊಂಡಿದ್ದಾರೆ.

ತಮ್ಮ ತಂದೆ ತೀರಿಕೊಂಡ ಸುದ್ದಿಯನ್ನ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡ ವಿಶಾಲ್, ಕಳೆದ ನಾಲ್ಕು ದಿನಗಳಿಂದ ಐಸಿಯುವಿನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ನನ್ನ ತಂದೆ ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ. ನಾನು ನನ್ನ ಅತ್ತುತ್ತಮ ಸ್ನೇಹಿತನನ್ನ ಕಳೆದುಕೊಂಡಿದ್ದೇನೆ.‌ ಈ ವೇಳೆ ನನ್ನ ಕುಟುಂಬದೊಂದಿಗೆ ಇರಲಾಗುತ್ತಿಲ್ಲ, ಕಾರಣ ನೆನ್ನೆ ನನಗೆ ಕೊರೋನಾ ಸೋಂಕು ದೃಢವಾಗಿದೆ. ಸಧ್ಯ ನನ್ನ ತಂಗಿ ತಾಯಿಯ ಜೊತೆಗೆ ನಿಂತು ಅಂತ್ಯಕ್ರಿಯೆ ನಡೆಸುತ್ತಿದ್ದಾಳೆ ಎಂದು ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...