alex Certify ಪಾಕ್​ ವಿರುದ್ಧ ಗೆದ್ದು ಬೀಗಿದ ಕೊಹ್ಲಿಗೆ ಹೀಗೊಂದು ಅಪರೂಪದ ಅಭಿನಂದನೆ: ಮರಳು ಕಲೆಯಲ್ಲಿ ವಿರಾಟ್​ ದರ್ಶನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಕ್​ ವಿರುದ್ಧ ಗೆದ್ದು ಬೀಗಿದ ಕೊಹ್ಲಿಗೆ ಹೀಗೊಂದು ಅಪರೂಪದ ಅಭಿನಂದನೆ: ಮರಳು ಕಲೆಯಲ್ಲಿ ವಿರಾಟ್​ ದರ್ಶನ

ಬಲೂಚಿಸ್ತಾನ: ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಪಾಕಿಸ್ತಾನ ವಿರುದ್ಧದ ಟಿ20 ವಿಶ್ವಕಪ್ ಪಂದ್ಯದಲ್ಲಿ ತಮ್ಮ ಅದ್ಭುತ ಕೌಶಲ ಪ್ರದರ್ಶಿಸುತ್ತಿದ್ದಂತೆಯೇ ಅವರ ಅಭಿಮಾನಿಗಳ ಸಂಖ್ಯೆ ಇಮ್ಮಡಿಯಾಗತೊಡಗಿದೆ. ಕೊಹ್ಲಿ ವಿಕೆಟ್ ನಷ್ಟವಿಲ್ಲದೆ 82 ರನ್ ಗಳಿಸಿದ ನಂತರ ಅವರ ಮೇಲೆ ಅಭಿಮಾನಿಗಳ ಪ್ರೀತಿ ಉಕ್ಕಿ ಹರಿಯುತ್ತಿದ್ದು, ತಮ್ಮದೇ ಆದ ರೀತಿಯಲ್ಲಿ ಅಭಿನಂದನೆ ಸಲ್ಲಿಸುತ್ತಿರುವುದು ಮುಂದುವರೆದಿದೆ.

ಇದೀಗ, ಬಲೂಚಿಸ್ತಾನದಿಂದ ಬಂದ ಕೊಹ್ಲಿ ಅಭಿಮಾನಿಯೊಬ್ಬರು ತಮ್ಮ ನೆಚ್ಚಿನ ಆಟಗಾರನಿಗೆ ವಿಶೇಷ ರೀತಿಯಲ್ಲಿ ಗೌರವವನ್ನು ತೋರಿಸಿದ್ದಾರೆ. ಆರ್‌.ಎ ಗಡ್ಡಾನಿ ಎನ್ನುವ ಅಭಿಮಾನಿ ಮರಳು ಕಲೆಯ ಮೂಲಕ ಕೊಹ್ಲಿ ಅವರ ಅದ್ಭುತ ಭಾವಚಿತ್ರವನ್ನು ರಚಿಸಿದ್ದಾರೆ. ಅದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿದ್ದಾರೆ.

ಈ ಅದ್ಭುತ ಕಲಾಕೃತಿಗೆ ನೆಟ್ಟಿಗರು ಮನಸೋತಿದ್ದಾರೆ. ಫೋಟೋ ಶೇರ್​ ಮಾಡಿದ ಕೆಲವೇ ಗಂಟೆಗಳಲ್ಲಿ ಇದು 20 ಸಾವಿರಕ್ಕೂ ಅಧಿಕ ಲೈಕ್ಸ್​ ಜತೆಗೆ ಸಹಸ್ರಾರು ಕಮೆಂಟ್​ಗಳು ಬಂದಿವೆ. ಕೊಹ್ಲಿ ಜತೆಗೆ ಕಲಾವಿದನನ್ನೂ ನೆಟ್ಟಿಗರು ಶ್ಲಾಘಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...