alex Certify ರೋಹಿತ್​ ಶರ್ಮಾ ಜೊತೆ ಭಿನ್ನಾಭಿಪ್ರಾಯ ವದಂತಿ ವಿಚಾರವಾಗಿ ವಿರಾಟ್​ ಕೊಹ್ಲಿಯಿಂದ ಮಹತ್ವದ ಹೇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೋಹಿತ್​ ಶರ್ಮಾ ಜೊತೆ ಭಿನ್ನಾಭಿಪ್ರಾಯ ವದಂತಿ ವಿಚಾರವಾಗಿ ವಿರಾಟ್​ ಕೊಹ್ಲಿಯಿಂದ ಮಹತ್ವದ ಹೇಳಿಕೆ

ಟೀಂ ಇಂಡಿಯಾ ಟೆಸ್ಟ್​ ತಂಡದ ನಾಯಕ ವಿರಾಟ್​​ ಕೊಹ್ಲಿ ತಮ್ಮ ಹಾಗೂ ಟೀಂ ಇಂಡಿಯಾ ಸೀಮಿತ ಓವರ್​ಗಳ ತಂಡದ ನಾಯಕ ರೋಹಿತ್​ ಶರ್ಮಾ ಜೊತೆಯಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ. ಈ ವಿಚಾರವನ್ನು ಪದೇ ಪದೇ ಸ್ಪಷ್ಟಪಡಿಸುತ್ತಾ ನಾನು ಆಯಾಸಗೊಂಡಿದ್ದೇನೆ ಎಂದು ಪುನರುಚ್ಛರಿಸಿದರು.

ಡಿಸೆಂಬರ್​ 26ರಿಂದ ಆರಂಭಗೊಳ್ಳಲಿರುವ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳುವ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ವಿರಾಟ್​ ಕೊಹ್ಲಿ, ನನ್ನ ಹಾಗೂ ರೋಹಿತ್​ ಶರ್ಮಾ ನಡುವಿನ ಸಂಬಂಧ ಹದಗೆಟ್ಟಿಲ್ಲ. ನಾವು ಚೆನ್ನಾಗಿಯೇ ಇದ್ದೇವೆ ಎಂದು ಹೇಳುವ ಮೂಲಕ ಎಲ್ಲಾ ವದಂತಿಗಳನ್ನು ತಳ್ಳಿ ಹಾಕಿದ್ದಾರೆ.

ನನ್ನ ಹಾಗೂ ರೋಹಿತ್​ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಕಳೆದ 2 ರಿಂದ ಎರಡೂವರೆ ವರ್ಷಗಳಿಂದ ನಾನು ಈ ವಿಚಾರವನ್ನು ಸ್ಪಷ್ಟಪಡಿಸುತ್ತಲೇ ಇದ್ದೇನೆ. ಈ ಮಾತನ್ನು ಹೇಳಿ ನನಗೆ ಸುಸ್ತಾಗಿ ಹೋಗಿದೆ. ಪದೇ ಪದೇ ಇದೇ ಪ್ರಶ್ನೆಯನ್ನು ಕೇಳಲಾಗುತ್ತಿದೆ. ನಾನು ಎಲ್ಲಿಯವರೆಗೆ ಕ್ರಿಕೆಟ್​ ಜೀವನದಲ್ಲಿ ಇರುತ್ತೇನೆಯೋ ಅಲ್ಲಿಯವರೆಗೂ ನನ್ನ ನಡೆ ಹಾಗೂ ನುಡಿಗಳಿಂದ ತಂಡವನ್ನು ಎಂದಿಗೂ ತಲೆತಗ್ಗಿಸುವಂತೆ ಮಾಡೋದಿಲ್ಲ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...