alex Certify ಇಲ್ಲಿದೆ ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದ್ದ 2021ರ ಟಾಪ್ 10 ವೈರಲ್ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದ್ದ 2021ರ ಟಾಪ್ 10 ವೈರಲ್ ವಿಡಿಯೋ

Top 10 Viral Videos of 2021 That Took Internet By Storm in India

ಕೋವಿಡ್-19 ಸಾಂಕ್ರಾಮಿಕ ರೋಗ ಕಾಲಿಟ್ಟ ನಂತರ ಹಲವಾರು ಮಂದಿ ಮನೆಯಲ್ಲೇ ಕೆಲಸ ಮಾಡುವಂತಾಗಿದೆ. ಮನೆಯಲ್ಲೇ ಕೂತು ಬೇಜಾರಾಗಿದ್ದವರಿಗೆ ಸಾಮಾಜಿಕ ಜಾಲತಾಣದ ಮೀಮ್ ಗಳು, ವೈರಲ್ ವಿಡಿಯೋಗಳು ಕೊಂಚ ನಗೆತರಿಸಿದ್ದಂತೂ ಸುಳ್ಳಲ್ಲ.

ಇದೀಗ 2021ಕ್ಕೆ ವಿದಾಯ ಹೇಳಲು ಕೌಂಟ್ ಡೌನ್ ಶುರುವಾಗಿದೆ. ಹೀಗಾಗಿ ಇದು ಹಳೆಯ ಘಟನೆಗಳ ಮೆಲುಕು ಹಾಕುವ ಸಮಯವಾಗಿದೆ. 2021ರಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಅತಿ ಹೆಚ್ಚು ವೈರಲ್ ಆಗಿರುವ ಕೆಲವು ವಿಡಿಯೋಗಳು ಯಾವುವು ಅನ್ನೋದನ್ನು ನೋಡಿಕೊಂಡು ಬರೋಣ…..

ರ‍್ಯಾಪರ್‌ ಆಗಿ ಮಿಂಚುತ್ತಿರುವ ರಿಕ್ಷಾ ಚಾಲಕನ ಪುತ್ರಿ

1. 2021 ರ ಅತ್ಯಂತ ವೈರಲ್ ಆಗಿರೋದು, ಪಾಕಿಸ್ತಾನಿ ಪ್ರಭಾವಿ ದನನೀರ್ ಮೊಬೀನ್ ಅವರ ಚಿಕ್ಕ ವಿಡಿಯೋ ಕ್ಲಿಪ್ ಆಗಿದೆ. ವಿಡಿಯೋ ಅತ್ಯಂತ ಜನಪ್ರಿಯತೆಯನ್ನು ಗಳಿಸಿದೆ. ಸಂಗೀತಗಾರ ಯಶರಾಜ್ ಮುಖಾಟೆ ಅವರು ಕಳೆದ ವರ್ಷ ‘ರಸೋದೆ ​​ಮೈನ್ ಕೋನ್ ಥಾ ರೀಮಿಕ್ಸ್’ ಗಾಗಿ ವೈರಲ್ ಆದ ನಂತರ ಅವರ ವಿಡಿಯೊದ ಮ್ಯಾಶಪ್ ಅನ್ನು ರಚಿಸಿದ ನಂತರ ಮಾತ್ರ ಹೊಸ ಆವೃತ್ತಿ ಬಂದಿತು. ಇದು ಕೂಡ ಸಾಕಷ್ಟು ಜನಪ್ರಿಯತೆ ಪಡೆಯಿತು, ಮೀಮ್ ಗಳು ಕೂಡ ಸೃಷ್ಟಿಯಾಯಿತು.

2. ಛತ್ತೀಸ್‌ಗಢದ ಬಾಲಕ ಸಹದೇವ್ ದಿರ್ಡೊ, ಬಚ್‌ಪನ್ ಕಾ ಪ್ಯಾರ್ ಹಾಡಿರುವ ವಿಡಿಯೋ ಇಂಟರ್ನೆಟ್ ನಲ್ಲಿ ಸುಂಟರಗಾಳಿಯನ್ನೇ ಎಬ್ಬಿಸಿತ್ತು. ಬಾಲಕ ಸಹದೇವ್ ದೇಶದಾದ್ಯಂತ ಮನೆಮಾತಾದರು. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಸಹದೇವ್ ನನ್ನು ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಾಘೆಲ್ ಕೂಡ ಗೌರವಿಸಿದ್ದಾರೆ.

ಈ ದೇಶದಲ್ಲಿ ಸಿಗುತ್ತೆ ಜಿರಳೆ ಬಿಯರ್‌…..!

3. ಪದ್ಮಶ್ರೀ ಪುರಸ್ಕೃತ ಹಾಗೂ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಮಾಜಿ ಅಧ್ಯಕ್ಷ ಡಾ.ಕೆ.ಕೆ. ಅಗರ್ವಾಲ್ ಅವರು ಲೈವ್ ಸೆಷನ್‌ನಲ್ಲಿ ಪಾಲ್ಗೊಂಡಿದ್ದಾಗ, ತಮ್ಮ ಪತ್ನಿಯೊಂದಿಗೆ ಮಾತನಾಡಿರುವ ವಿಡಿಯೋ ವೈರಲ್ ಆಗಿತ್ತು. ಡಾ.ಕೆ.ಕೆ. ಅಗರ್ವಾಲ್ ಅವರ ಪತ್ನಿ ಕೂಡ ವೈದ್ಯೆಯಾಗಿದ್ದು, ಮೊದಲ ಹಂತದ ವ್ಯಾಕ್ಸಿನೇಷನ್ ಸಮಯದಲ್ಲಿ ಕೋವಿಡ್ ವಿರುದ್ಧ ಲಸಿಕೆಯನ್ನು ಅಗರ್ವಾಲ್ ತನ್ನ ಪತ್ನಿಯನ್ನು ಬಿಟ್ಟು ಪಡೆದಿದ್ದರು. ಇದರಿಂದ ಫೋನ್ ಕರೆಯಲ್ಲಿ ಅವರು ತಮ್ಮ ಪತ್ನಿಯ ಕೋಪವನ್ನು ಎದುರಿಸಬೇಕಾಯಿತು. ದುರದೃಷ್ಟವಶಾತ್, 62 ವರ್ಷದ ಹೃದ್ರೋಗ ತಜ್ಞರು ಕೆಲವು ತಿಂಗಳುಗಳ ನಂತರ ಕೊರೋನ ವೈರಸ್ನೊಂದಿಗೆ ಸುದೀರ್ಘ ಹೋರಾಟದ ನಂತರ ನಿಧನರಾದರು.

4. ಶ್ವೇತಾ ಎಂಬಾಕೆ ಟ್ವಿಟ್ಟರ್ ನಲ್ಲಿ ಟ್ರೆಂಡ್ರಿಂಗ್ ಪಟ್ಟಿಯಲ್ಲಿದ್ದರು. ಮೈಕ್ರೊಫೋನ್ ಅನ್ನು ಮ್ಯೂಟ್ ಮಾಡಲು ಮರೆತಿದ್ದ ಆಕೆಯ ಆನ್‌ಲೈನ್ ತರಗತಿಯ ಜೂಮ್ ಕರೆ ಸೋರಿಕೆಯಾಗಿತ್ತು. ಪರಿಣಾಮ ನೆಟ್ಟಿಗರು ಹ್ಯಾಶ್‌ಟ್ಯಾಗ್ ಅನ್ನು ಮೀಮ್‌ಗಳೊಂದಿಗೆ ತುಂಬಿ ಬಿಟ್ಟಿದ್ದರು. ಶ್ವೇತಾ ತನ್ನ ಸ್ನೇಹಿತನೊಂದಿಗೆ ಒಬ್ಬ ವ್ಯಕ್ತಿಯ ಖಾಸಗಿ ವಿವರಗಳನ್ನು ಬಹಿರಂಗಪಡಿಸಿದ ವಿಚಾರವು ಸಾರ್ವಜನಿಕವಾಗಿ ವೈರಲ್ ಆಯಿತು. ಸಹ ವಿದ್ಯಾರ್ಥಿಗಳು ಅವಳ ಮೈಕ್ ಆನ್ ಆಗಿದೆ ಎಂದು ಎಚ್ಚರಿಸಲು ಪ್ರಯತ್ನಿಸಿದ್ರೂ, ಆಕೆಗೆ ಗೊತ್ತಾಗದ ಕಾರಣ ಈ ರೆಕಾರ್ಡಿಂಗ್ ವೈರಲ್ ಆಯಿತು.

5. ಉದ್ಯೋಗಿಯೊಬ್ಬರು ಜೂಮ್ ಕರೆಯಲ್ಲಿದ್ದಾಗ ಅವರ ಪತ್ನಿ ಬಂದು ಮುತ್ತು ಕೊಡಲು ಪ್ರಯತ್ನಿಸಿದ ವಿಡಿಯೋ ವೈರಲ್ ಆಗಿತ್ತು. ಜಿಡಿಪಿ ರಫ್ತು ವ್ಯವಹಾರದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಗಂಭೀರ ವಿಷಯದ ಬಗ್ಗೆ ಮಾತನಾಡುತ್ತಿದ್ದಾಗ ಅಲ್ಲಿಗೆ ಬಂದ ಬಂದ ಪತ್ನಿ ಚುಂಬಿಸಲು ಪ್ರಯತ್ನಿಸಿದ್ದಾರೆ. ಕೂಡಲೇ ತಾನು ಕರೆಯಲ್ಲಿರುವುದಾಗಿ ಅವರು ಸನ್ನೆ ಮಾಡುತ್ತಾರೆ. ಇದರಿಂದ ಆಕೆ ಕೂಡಲೇ ಹಿಂದೆ ಸರಿಯುತ್ತಾರೆ.

ಈ ವಿಡಿಯೋವನ್ನು ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ಮರುಟ್ವೀಟ್ ಮಾಡಿದ್ದರು. ಮತ್ತು ಹರ್ಷ್ ಗೋಯೆಂಕಾ ಕೂಡ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ವಿಡಿಯೋ ಲಕ್ಷಗಟ್ಟಲೆ ವೀಕ್ಷಣೆ ಪಡೆದಿದ್ದು, ಭಾರಿ ವೈರಲ್ ಆಗಿತ್ತು.

 

6. ಕೇರಳದ ತ್ರಿಶೂರ್ ವೈದ್ಯಕೀಯ ಕಾಲೇಜಿನ ಕಾರಿಡಾರ್‌ನಲ್ಲಿ ಈ ವೈರಲ್ ಡ್ಯಾನ್ಸ್ ವಿಡಿಯೋವನ್ನು ಚಿತ್ರೀಕರಿಸಲಾಗಿದೆ. ಬೋನಿ ಎಂ ಅವರ 1978 ರ ಹಿಟ್ ಹಾಡು ರಾಸ್‌ಪುಟಿನ್‌ನ ಬೀಟ್‌ಗಳಿಗೆ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ನೃತ್ಯ ಮಾಡಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ ಮಿಲಿಯನ್ ಲೈಕ್‌ಗಳನ್ನು ಪಡೆದುಕೊಂಡಿದೆ. ಜೊತೆಗೆ ವಿವಾದಕ್ಕೂ ಸಿಲುಕಿತ್ತು.

7. ಹೃದಯಸ್ಪರ್ಶಿ ವೈರಲ್ ವಿಡಿಯೋದಲ್ಲಿ, ಗುಜರಾತ್‌ನ ವಡೋದರಾದ ಪಾರುಲ್ ಸೇವಾಶ್ರಮ್ ಆಸ್ಪತ್ರೆಯ ಸಿಬ್ಬಂದಿ ನೃತ್ಯ ಮಾಡುವ ಮೂಲಕ ಕೋವಿಡ್ ರೋಗಿಗಳನ್ನು ಹುರಿದುಂಬಿಸಿದ್ದರು. ಪಿಪಿಇ ಕಿಟ್‌ಗಳನ್ನು ಧರಿಸಿರುವ ಹಲವಾರು ವೈದ್ಯರು ಮತ್ತು ದಾದಿಯರು 1990 ರ ಸನ್ನಿ ಡಿಯೋಲ್ ಚಲನಚಿತ್ರ ‘ಘಾಯಲ್’ನ ‘ಸೋಚ್ನಾ ಕ್ಯಾ, ಜೋ ಭಿ ಹೋಗಾ ದೇಖಾ ಜಾಯೇಗಾ’ ಹಾಡಿಗೆ ನೃತ್ಯ ಮಾಡಿದ್ದರು. ಕೆಲವು ರೋಗಿಗಳು ಉತ್ಸಾಹದಿಂದ ವೈದ್ಯರೊಂದಿಗೆ ನೃತ್ಯ ಮಾಡಿದ್ದರು, ಈ ವಿಡಿಯೋ ಸಾಕಷ್ಟು ಜನಪ್ರಿಯತೆಯನ್ನು ಪಡೆದಿತ್ತು.

8. ರೆಮ್‌ಡೆಸಿವಿರ್ ಚುಚ್ಚುಮದ್ದಿನ ಹೆಸರನ್ನು ವ್ಯಕ್ತಿಯೊಬ್ಬರು ‘ರೆಮೋ ಡಿ’ಸೋಜಾ’ ಎಂದು ತಪ್ಪಾಗಿ ಉಚ್ಚರಿಸಿದ ವೈರಲ್ ವೀಡಿಯೊಗೆ ನೃತ್ಯ ಸಂಯೋಜಕ-ಚಲನಚಿತ್ರ ನಿರ್ಮಾಪಕ ರೆಮೊ ಡಿಸೋಜಾ ಉಲ್ಲಾಸದಿಂದ ಪ್ರತಿಕ್ರಿಯಿಸಿದ್ದರು. ನೃತ್ಯ ನಿರ್ದೇಶಕರು ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ವಿಡಿಯೋವನ್ನು ಮರುಪೋಸ್ಟ್ ಮಾಡಿದ್ದರು.

9. ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಏಪ್ರಿಲ್ 2021 ರಲ್ಲಿ ದೆಹಲಿಯಲ್ಲಿ ಒಂದು ವಾರದ ಅವಧಿಯ ಲಾಕ್‌ಡೌನ್ ಘೋಷಿಸುತ್ತಿದ್ದಂತೆ, ನೂರಾರು ಜನರು ಮದ್ಯ ಕೊಳ್ಳಲು ಕ್ಯೂ ನಿಂತಿದ್ದರು. ಮದ್ಯವನ್ನು ಖರೀದಿಸಲು ಸರದಿಯಲ್ಲಿದ್ದವರಲ್ಲಿ ವಯಸ್ಸಾದ ಮಹಿಳೆಯೊಬ್ಬರು ಲಾಕ್‌ಡೌನ್ ಸಮಯದಲ್ಲಿ ಮದ್ಯದಂಗಡಿಗಳನ್ನು ತೆರೆಯುವಂತೆ ಸರ್ಕಾರವನ್ನು ಒತ್ತಾಯಿಸಿದ್ದರು. ಅಲ್ಲದೆ ಯಾವುದೇ ಲಸಿಕೆ ಆಲ್ಕೋಹಾಲ್ಗೆ ಸರಿಸಾಟಿಯಲ್ಲ. ಏಕೆಂದರೆ, ಆಲ್ಕೋಹಾಲ್ ಮಾತ್ರ ನಿಜವಾದ ಔಷಧವಾಗಿದೆ ಎಂದು ಮಹಿಳೆ ನೀಡಿದ್ದ ಉತ್ತರ ಇಂಟರ್ನೆಟ್ ನಲ್ಲಿ ಸೆನ್ಸೇಷನ್ ಸೃಷ್ಟಿಸಿತ್ತು.

10. ಕೋವಿಡ್-19 ತುರ್ತು ಚಿಕಿತ್ಸಾ ವಿಭಾಗದಲ್ಲಿ ಹಾಡೊಂದಕ್ಕೆ ತೂಗುಡುತ್ತಿದ್ದ ರೋಗಿಯ ಮನೋಸ್ಥೈರ್ಯಕ್ಕೆ ನೆಟ್ಟಿಗರು ಕೊಂಡಾಡಿದ್ದರು. ಈ ವಿಡಿಯೋವನ್ನು ಡಾ ಮೋನಿಕಾ ಲಾಂಗೆ ಪೋಸ್ಟ್ ಮಾಡಿದ್ದರು. ದುರದೃಷ್ಟವಶಾತ್, ರೋಗ ಮತ್ತಷ್ಟು ಉಲ್ಬಣಿಸಿದ್ದರಿಂದ ಯುವತಿ ಮೃತಪಟ್ಟಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...