alex Certify ಮುಗ್ದ ಮನಸ್ಸಿನ ಈ ಪುಟ್ಟ ಮಕ್ಕಳ ವಿಡಿಯೋದಲ್ಲಿದೆ ʼಮಾನವೀಯತೆʼ ಪಾಠ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಗ್ದ ಮನಸ್ಸಿನ ಈ ಪುಟ್ಟ ಮಕ್ಕಳ ವಿಡಿಯೋದಲ್ಲಿದೆ ʼಮಾನವೀಯತೆʼ ಪಾಠ

ಮಕ್ಕಳೆಂದರೆ ಅತ್ಯಂತ ಮುಗ್ಧ ಮನಸ್ಸಿನ ಪರಿಶುದ್ಧತೆ ಹೊಂದಿರುವವರು. ಮಕ್ಕಳೆಂದ್ರೆ ದೇವರಿಗೆ ಸಮಾನ ಅಂತಾನೇ ಹೇಳ್ತಾರೆ. ಯಾಕೆಂದ್ರೆ, ಶ್ರೀಮಂತ – ಬಡವರ ನಡುವಿನ ವ್ಯತ್ಯಾಸ ತಿಳಿದಿಲ್ಲ. ಇದೀಗ ವೈರಲ್ ಆಗಿರುವ ವಿಡಿಯೋ ನೋಡಿದ್ರೆ ನಿಮ್ಮ ಹೃದಯ ಕರಗೋದ್ರಲ್ಲಿ ಸಂಶಯವೇ ಇಲ್ಲ.

ಕಿಯಾನ್ಶ್ ದೇಟೆ ಎಂದು ಗುರುತಿಸಲಾದ ಪುಟ್ಟ ಬಾಲಕ, ರಸ್ತೆಯಲ್ಲಿ ಆಟಿಕೆ ಮಾರಾಟಗಾರರ ಪುತ್ರನ ಜೊತೆ ಉತ್ಸಾಹದಿಂದ ನೃತ್ಯ ಮಾಡಿದ್ದಾನೆ. ಈ ವೇಳೆ ಆ ಮಗು ಕಿಯಾನ್ಶ್ ನನ್ನು ಅಪ್ಪಲು ಹೋದಾಗ, ಒಬ್ಬರನ್ನೊಬ್ಬರು ಪರಸ್ಪರ ಅಪ್ಪಿಕೊಂಡಿದ್ದಾರೆ. ಈ ಕ್ಯೂಟ್ ವಿಡಿಯೋವನ್ನು ಬಾಲಕ ಕಿಯಾನ್ಶ್ ತಾಯಿ ಸೆರೆಹಿಡಿದಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಬಳಿಕ ವಿಡಿಯೋ ಭಾರಿ ವೈರಲ್ ಆಗಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ವಿಡಿಯೋವನ್ನು ಇಷ್ಟಪಟ್ಟಿದ್ದಾರೆ ಹಾಗೂ ಮುಗ್ಧ ಮಕ್ಕಳ ಹೃದಯ ಮತ್ತು ಮುಗ್ಧತೆಗೆ ಮನಸೋತಿದ್ದಾರೆ.

ಸಾಮಾಜಿಕ ಜಾಲತಾಣದ ಕಾಮೆಂಟ್‌ಗಳ ವಿಭಾಗವು ಹೃದಯ ಮತ್ತು ಪ್ರೀತಿಯ ಎಮೋಜಿಗಳೊಂದಿಗೆ ತುಂಬಿ ಹೋಗಿದೆ. ಮಕ್ಕಳ ಈ ಮುಗ್ಧತೆಯು ಬಹಳಷ್ಟು ಜನರಿಗೆ ಪಾಠವಾಗಿದೆ ಅಂತೆಲ್ಲಾ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.‌

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...