alex Certify ಸಿನಿಮಾ ಹಾಡಿಗೆ ಡ್ಯಾನ್ಸ್ ಮಾಡಿದ್ರಾ ಸಿಎಂ ಸಿದ್ದರಾಮಯ್ಯ….? ಇಲ್ಲಿದೆ ವೈರಲ್ ವಿಡಿಯೋ ಹಿಂದಿನ ಅಸಲಿಯತ್ತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿನಿಮಾ ಹಾಡಿಗೆ ಡ್ಯಾನ್ಸ್ ಮಾಡಿದ್ರಾ ಸಿಎಂ ಸಿದ್ದರಾಮಯ್ಯ….? ಇಲ್ಲಿದೆ ವೈರಲ್ ವಿಡಿಯೋ ಹಿಂದಿನ ಅಸಲಿಯತ್ತು

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೃತ್ಯ ಕೌಶಲ್ಯ ಎಲ್ಲರಿಗೂ ಗೊತ್ತಿದೆ. ಪ್ರತಿ ವರ್ಷ ಅವರು ಮೈಸೂರಿನ ತಮ್ಮ ಗ್ರಾಮಕ್ಕೆ ಭೇಟಿ ನೀಡಿದ್ದಾಗ ಹಬ್ಬ-ಹರಿದಿನದ ಆಚರಣೆಯಲ್ಲಿ ತಮ್ಮ ಸಾಂಪ್ರದಾಯಿಕ ಜಾನಪದ ನೃತ್ಯ ಕಲೆಯನ್ನು ಪ್ರದರ್ಶಿಸುತ್ತಾರೆ. ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ ಬೆನ್ನಲ್ಲೇ, ಸಿದ್ದರಾಮಯ್ಯ ಡ್ಯಾನ್ಸ್ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಆದರೆ ಈ ವಿಡಿಯೋದಲ್ಲಿರುವುದು ಸಿಎಂ ಸಿದ್ದರಾಮಯ್ಯರಲ್ಲ. ಬದಲಾಗಿ ಅವರನ್ನೇ ಹೋಲುವ ವ್ಯಕ್ತಿ. ಸಿದ್ದರಾಮಯ್ಯನವರನ್ನೇ ಹೋಲುವ ಆ ವ್ಯಕ್ತಿ ಕನ್ನಡದ ಜನಪ್ರಿಯ ಹಾಡಿಗೆ ಕುಣಿದಿದ್ದಾರೆ. ಜನರ ಗುಂಪು ಅವರ ಸುತ್ತಲೂ ಕುಳಿತು ಚಪ್ಪಾಳೆ ತಟ್ಟುವುದು ಕಂಡುಬರುತ್ತದೆ. ಸಿದ್ದರಾಮಯ್ಯರನ್ನೇ ಹೋಲುವ ಈ ವ್ಯಕ್ತಿ ಯಾರು ಎಂದು ಫ್ಯಾಕ್ಟ್ ಚೆಕ್ ಮಾಡಿದಾಗ ಗೊತ್ತಾಗಿರುವುದು ಅವರು ಮೈಸೂರಿನ ಚನ್ನಮಾಯಿಗೌಡರೇ ಹೊರತು ಸಿದ್ದರಾಮಯ್ಯ ಅಲ್ಲ ಎಂಬುದು. 2018 ರಿಂದ ಇದೇ ವಿಡಿಯೋ ವೈರಲ್ ಆಗಿದ್ದು, ಅವರು ಸಿದ್ದರಾಮಯ್ಯರಲ್ಲ ಎಂಬುದು ಸ್ಪಷ್ಟವಾಗಿದೆ.

ಬೆಂಗಳೂರು ಮಿರರ್‌ನಲ್ಲಿ ಈ ಬಗ್ಗೆ ಮಾತನಾಡಿರುವ ವ್ಯಕ್ತಿ ನನಗೆ ನೃತ್ಯ ಮಾಡುವಂತೆ ಹೇಳಲಾಗಿತ್ತು, ನಾನು ಅದನ್ನು ಮಾಡಿದ್ದೇನೆ. ಈ ವೀಡಿಯೊದಲ್ಲಿ ಸಿಎಂಗೆ ಕೆಟ್ಟ ಹೆಸರು ತರುವ ಉದ್ದೇಶವಿಲ್ಲ ಎಂದು ಅವರು ಹೇಳಿದ್ದಾರೆ.

2013ರಲ್ಲಿ ಸಿದ್ದರಾಮಯ್ಯ ವಿರುದ್ಧ ಚನ್ನಮಾಯಿಗೌಡ ಸ್ಪರ್ಧಿಸಿದ್ದರು ಎಂದು ವರದಿಯಾಗಿತ್ತು. ನಂತರ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಿದರು. ಮೈಸೂರಿನ ಕಗ್ಗಲಿಪುರದಲ್ಲಿ ಕೃಷಿ ಕಾರ್ಯಾಗಾರದ ಅಂಗವಾಗಿ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರೈತ ಚನ್ನಮಾಯಿಗೌಡ ನೃತ್ಯ ಮಾಡಿರುವುದಾಗಿ ಹೇಳಿದ ವಿಡಿಯೋ ಸಂದರ್ಶನವೂ ಕೂಡ ಇದಕ್ಕೆ ಪೂರಕವಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋವನ್ನು ಹಾಕಿ ಅವರನ್ನು ಸಿದ್ದರಾಮಯ್ಯನವರಂತೆ ಬಿಂಬಿಸಿವೆ. ಹೀಗಾಗಿ ವಿಡಿಯೋದಲ್ಲಿ ಡ್ಯಾನ್ಸ್ ಮಾಡುತ್ತಿರುವುದು ಸಿದ್ದರಾಮಯ್ಯ ಅಲ್ಲ, ಅವರ ಲುಕ್‌ನಂತಿರುವುದು ಸ್ಪಷ್ಟವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...