alex Certify ಅಮ್ಯೂಸ್‌ಮೆಂಟ್ ಪಾರ್ಕ್ ರೈಡ್‌ನಲ್ಲಿ ಏಕಾಂಗಿಯಾಗಿ ಕುಳಿತು ಸವಾರಿ ಮಾಡಿದ ಪುಟ್ಟ ಪೋರ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮ್ಯೂಸ್‌ಮೆಂಟ್ ಪಾರ್ಕ್ ರೈಡ್‌ನಲ್ಲಿ ಏಕಾಂಗಿಯಾಗಿ ಕುಳಿತು ಸವಾರಿ ಮಾಡಿದ ಪುಟ್ಟ ಪೋರ..!

ಅಮ್ಯೂಸ್‌ಮೆಂಟ್ ಪಾರ್ಕ್ ರೈಡ್‌ನ್ನು ಬಹಳಷ್ಟು ಮಂದಿ ಇಷ್ಟಪಡುತ್ತಾರೆ. ಹಾಗಂತ ಅದರಲ್ಲಿ ಕುಳಿತು ಸವಾರಿ ಮಾಡುವುದೆಂದ್ರೆ ಎಂಥವರೂ ಕೂಡ ಭಯಪಡುತ್ತಾರೆ. ಇದೀಗ ಇಂಥದ್ದೇ ವಿಡಿಯೋವೊಂದು ವೈರಲ್ ಆಗಿದೆ.

ಹೌದು, ಅಮ್ಯೂಸ್‌ಮೆಂಟ್ ಪಾರ್ಕ್ ರೈಡ್‌ನಲ್ಲಿ ಮಗುವೊಂದು ಒಬ್ಬಂಟಿಯಾಗಿ ಕುಳಿತಿರುವ ದೃಶ್ಯದ ವಿಡಿಯೋ ವೈರಲ್ ಆಗಿದೆ. ತೊಟ್ಟಿಲಿನಲ್ಲಿ ಕೆಲವರು ಕುಳಿತಿದ್ದರೆ ಒಂದು ಮಗು ಮಾತ್ರ ಒಬ್ಬಂಟಿಯಾಗಿ ಕುಳಿತಿದೆ. ಪೋಷಕರಿಲ್ಲದೆ ಸವಾರಿಯಲ್ಲಿ ಕುಳಿತಿದ್ದ ಒಂಟಿ ಪುಟ್ಟ ಮಗುವನ್ನು ಕಂಡು ನೆಟ್ಟಿಗರ ಮನಸ್ಸಿನಲ್ಲಿ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಪೀಪಲ್ ಮ್ಯಾಗಜೀನ್‌ ತನ್ನ ಇನ್‌ಸ್ಟಾಗ್ರಾಮ್ ಪುಟದಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದೆ. ಇದು ಇಲ್ಲಿಯವರೆಗೆ 3.4 ಮಿಲಿಯನ್ ವೀಕ್ಷಣೆಗಳನ್ನು ಹೊಂದಿದೆ. ವಿಡಿಯೋವನ್ನು ಆರಂಭದಲ್ಲಿ ವೈರಲ್ ಹಾಗ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ.

ವೈರಲ್ ವೀಡಿಯೊದಲ್ಲಿ, ಮಗುವೊಂದು ಒಬ್ಬನೇ ಕುಳಿತಿರುವುದನ್ನು ನೋಡಬಹುದು. ಮಗು ಸವಾರಿಯ ಬಗ್ಗೆ ಸ್ವಲ್ಪವೂ ಉತ್ಸುಕನಾಗಿರಲಿಲ್ಲ ಹಾಗೂ ಭಯನೂ ಪಟ್ಟಿಲ್ಲ. ತನ್ನ ಹಿಂದೆ-ಮುಂದೆ ಕುಳಿತವರೆಲ್ಲಾ ಜೋರು ಬೊಬ್ಬೆ ಹೊಡೆಯುತ್ತಿದ್ದರೆ, ಈ ಮಗು ಮಾತ್ರ ಮನದಲ್ಲಿ ಖಾಲಿ ಭಾವನೆಗಳೊಂದಿಗೆ, ಇಲ್ಲಿ ಏನು ನಡೆಯುತ್ತಿದೆ ಎಂಬುದೂ ಗೊತ್ತಿಲ್ಲದಂತೆ ಸವಾರಿಯಲ್ಲಿ ಕುಳಿತಿದೆ.

ಇದೀಗ ಈ ವಿಡಿಯೋ ಜನರ ಮನಸ್ಸಿನಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಇಷ್ಟು ಚಿಕ್ಕ ಮಗು ತನ್ನಷ್ಟಕ್ಕೆ ತಾನೇ ಏಕೆ ಮತ್ತು ಯಾವ ಪೋಷಕರೂ ಅವನೊಂದಿಗೆ ಸವಾರಿ ಮಾಡಲಿಲ್ಲ ಎಂದು ಕೆಲವರು ಆಶ್ಚರ್ಯಪಟ್ಟಿದ್ದಾರೆ. ಅಲ್ಲದೆ ಸವಾರಿಯಲ್ಲಿ ಯಾವುದೇ ಸುರಕ್ಷತಾ ಪರಿಕರ ಇಲ್ಲದಿರುವುದರಿಂದ ಇದು ಅಪಾಯಕಾರಿ ಎಂದು ಇತರರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...