alex Certify ಮಹಾಬಲಿ ಅವತಾರದಲ್ಲಿ ಕೆಲಸಕ್ಕೆ ಬಂದ ಬ್ಯಾಂಕ್​ ಅಧಿಕಾರಿ; ಗ್ರಾಹಕರಿಗೆ ಅಚ್ಚರಿಯೋ ಅಚ್ಚರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಾಬಲಿ ಅವತಾರದಲ್ಲಿ ಕೆಲಸಕ್ಕೆ ಬಂದ ಬ್ಯಾಂಕ್​ ಅಧಿಕಾರಿ; ಗ್ರಾಹಕರಿಗೆ ಅಚ್ಚರಿಯೋ ಅಚ್ಚರಿ

ಓಣಂ ಅಂಗವಾಗಿ ರಾಜ ಮಹಾಬಲಿಯಂತೆ ವೇಷ ಧರಿಸಿ ಕೆಲಸಕ್ಕೆ ಬಂದ ಉದ್ಯೋಗಿಯೊಬ್ಬರು ಗ್ರಾಹಕರನ್ನು ಆಶ್ಚರ್ಯಗೊಳಿಸಿದರು.
ಕೇರಳದ ತಲಶ್ಶೇರಿಯಲ್ಲಿರುವ ಎಸ್.ಬಿ.ಐ. ಶಾಖೆಯಲ್ಲಿ ನಡೆದ ಈ ಘಟನೆ ಟ್ವಿಟರ್​ ಬಳಕೆದಾರರಲ್ಲಿ ನಗು ತರಿಸಿದೆ.

ಘಟನೆಯ ವಿಡಿಯೋದಲ್ಲಿ ಆ ಬ್ಯಾಂಕ್​ ಉದ್ಯೋಗಿ ರಾಜನ ಉಡುಪಿನಲ್ಲಿಯೇ ಇದ್ದು ತನ್ನ ಗ್ರಾಹಕರ ಅಗತ್ಯತೆಗಳನ್ನು ಪೂರೈಸುವುದನ್ನು ಕಾಣಬಹುದು.

ಟ್ವಿಟ್ಟರ್​ ಬಳಕೆದಾರ ನಿಕ್ಸನ್​ ಜೋಸೆಫ್​ ವಿಡಿಯೊವನ್ನು ಹಂಚಿಕೊಂಡು, ಎಸ್.ಬಿ.ಐ. ತಲಶ್ಶೇರಿ ಸಿಬ್ಬಂದಿ ಪೌರಾಣಿಕ ರಾಜ ಮಹಾಬಲಿಯಂತೆ ವೇಷಧರಿಸಿ ಕೌಂಟರ್​ನಲ್ಲಿ ಸೇವೆಗಳನ್ನು ವಿತರಿಸುತ್ತಿದ್ದಾರೆ, ಅವರ ಚೈತನ್ಯ ಮತ್ತು ಉತ್ಸಾಹಕ್ಕೆ ವಂದನೆಗಳು ಎಂದು ವಿವರಿಸಿದ್ದಾರೆ.

ನೆಟ್ಟಿಗರು ಆ ಉದ್ಯೋಗಿಯ ಉತ್ಸಾಹವನ್ನು ಮೆಚ್ಚಿ ಶ್ಲಾಘಿಸಿದರು. ಈ ಸಿಬ್ಬಂದಿ ನಿಜವಾಗಿಯೂ ಧೈರ್ಯಶಾಲಿ ಎಂದು ಒಬ್ಬರು ಕಾಮೆಂಟ್​ ಮಾಡಿದರೆ, “ಅದ್ಭುತ ಮತ್ತು ಶ್ಲಾಘನೀಯ….. ಚೆಕ್​ ಅಥವಾ ಡೆಬಿಟ್​ ಅಕೌಂಟ್​ ಇಲ್ಲದೆಯೇ ಪಾವತಿ ಮಾಡಿದರೆ ಅವರ ಪ್ರಜೆಗಳು ಸಂತೋಷಪಡುತ್ತಾರೆ…. ಎಂದು ಇನ್ನೊಬ್ಬರು ಹಾಸ್ಯಮಯ ಕಾಮೆಂಟ್​ ಮಾಡಿದ್ದಾರೆ.

ಓಣಂ ಕೇರಳದ ಅತಿದೊಡ್ಡ ಹಬ್ಬಗಳಲ್ಲಿ ಒಂದಾಗಿದೆ. ದೇಶಾದ್ಯಂತ ಮತ್ತು ಪ್ರಪಂಚದಾದ್ಯಂತದ ಮಲಯಾಳಿಗಳು ಹಬ್ಬವನ್ನು ಬಹಳ ವೈಭವದಿಂದ ಆಚರಿಸುತ್ತಾರೆ. ಹಬ್ಬವು 10 ದಿನ ಆಚರಿಸಲಾಗುತ್ತದೆ. ಈ ವರ್ಷ ಆಗಸ್ಟ್​ 30 ರಂದು ಪ್ರಾರಂಭವಾಯಿತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...