alex Certify ಕಿಂಡರ್‌‌ ಗಾರ್ಟನ್ ವಿದ್ಯಾರ್ಥಿಗಳ ಕಲಿಕೆಯ ವಿಡಿಯೋ ವೈರಲ್; ಪುಟ್ಟ ಮಕ್ಕಳ ತನ್ಮಯತೆಗೆ ಮಂತ್ರಮುಗ್ದರಾದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಿಂಡರ್‌‌ ಗಾರ್ಟನ್ ವಿದ್ಯಾರ್ಥಿಗಳ ಕಲಿಕೆಯ ವಿಡಿಯೋ ವೈರಲ್; ಪುಟ್ಟ ಮಕ್ಕಳ ತನ್ಮಯತೆಗೆ ಮಂತ್ರಮುಗ್ದರಾದ ನೆಟ್ಟಿಗರು

ಶಿಶುವಿಹಾರದ ಮಕ್ಕಳ ದೈಹಿಕ ಶಿಕ್ಷಣ ತರಗತಿಯ ವಿಡಿಯೋ ಇಂಟರ್ನೆಟ್ ನಲ್ಲಿ ವೈರಲ್ ಆಗಿದ್ದು, ನೋಡುಗರಲ್ಲಿ ಅಚ್ಚರಿ ಹುಟ್ಟಿಸಿದೆ.

ದೈಹಿಕ ವ್ಯಾಯಾಮ ಮಾಡುವಾಗ ಮಕ್ಕಳ ಸಂಪೂರ್ಣ ಸಮನ್ವಯತೆ ಶ್ಲಾಘನೀಯವಾಗಿದೆ. ಎರಿಕ್ ಸೋಲ್ಹೈಮ್ ಅವರು ಟ್ವಿಟರ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದು, ಇದು 82,000 ಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ.

ಮ್ಯೂಸಿಕ್‌ಗೆ ತಕ್ಕಂತೆ ಚಿಕ್ಕ ಮಕ್ಕಳು ಎರಡು ಬಾಸ್ಕೆಟ್‌ ಬಾಲ್‌ ಗಳಲ್ಲಿ ಡ್ರಿಬ್ಲಿಂಗ್ ಮಾಡುತ್ತಾ ವ್ಯಾಯಾಮ ಮಾಡುವುದನ್ನು ಕಾಣಬಹುದು. ಇಷ್ಟು ಚಿಕ್ಕ ವಯಸ್ಸಿನಲ್ಲೇ ಈ ಸಾಹಸವನ್ನು ಮಾಡಲು ಅವರಿಗೆ ತರಬೇತಿ ನೀಡಿರುವುದು ಸಹ ಶ್ಲಾಘನೀಯ ಎನಿಸಿದೆ.

ವಿಡಿಯೋ ನೋಡಿದ ನಂತರ ನೆಟ್ಟಿಗರು ಮಂತ್ರಮುಗ್ಧರಾಗಿದ್ದಾರೆ. ಮಕ್ಕಳ ಸಾಹಸ ಶ್ಲಾಘಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...