alex Certify ಬಿಯರ್​ ಕುಡಿಯಲು ಸ್ಟ್ರಾ ಬದಲು ಹಾಟ್​ ಡಾಗ್​ ಬಳಕೆ; ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಯರ್​ ಕುಡಿಯಲು ಸ್ಟ್ರಾ ಬದಲು ಹಾಟ್​ ಡಾಗ್​ ಬಳಕೆ; ವಿಡಿಯೋ ವೈರಲ್​

ಸಾಮಾಜಿಕ ಜಾಲತಾಣದಲ್ಲಿ ವಿಲಕ್ಷಣ ವಿಷಯಗಳಿಗೇನು ಕೊರತೆಯಿಲ್ಲ. ಅನೇಕ ಸಂದರ್ಭದಲ್ಲಿ ವಿಡಿಯೋ ಹುಚ್ಚುಚ್ಚಾಗಿ ವೈರಲ್​ ಆಗಿಬಿಡುತ್ತದೆ.

ಇದೀಗ ಚಲಾವಣೆಗೆ ಬಂದಿರುವ ಚಿಕ್ಕ ವಿಡಿಯೋ ಕ್ಲಿಪ್​ನಲ್ಲಿ, ಬೇಸ್​ಬಾಲ್​ ಆಟದ ಮೈದಾನದಲ್ಲಿ ಕುಳಿತಿದ್ದ ಪ್ರೇಕ್ಷಕನೊಬ್ಬ ಹಾಟ್​ ಡಾಗ್​ ಅನ್ನು ಸ್ಟ್ರಾದಂತೆ ಬಳಸಿದ್ದಾನೆ. ವಿಡಿಯೋವನ್ನು ನಿಕೋಲಸ್​ ಹೆಲ್ಲರ್​ ಎಂಬುವರು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಅಪರಿಚಿತ ವ್ಯಕ್ತಿ ಹಾಟ್​ ಡಾಗ್​ ಅನ್ನು ಎರಡೂ ಬದಿಗಳಿಂದ ಸ್ಟ್ರಾ ದಂತೆ ಕಚ್ಚುತ್ತಿರುವುದನ್ನು ಕಾಣಬಹುದು. ಮುಂದೆ, ಆತ ಹಾಟ್​ ಡಾಗ್​ ಅನ್ನು ಬಿಯರ್​ ತುಂಬಿದ ಗ್ಲಾಸ್​ನಲ್ಲಿ ಮುಳುಗಿಸಿ ಕುಡಿಯುತ್ತಾನೆ.

ಈ ವಿಡಿಯೋ ವೆೈರಲ್​ ಆಗಿದ್ದು, 3 ಮಿಲಿಯನ್​ಗಿಂತಲೂ ಹೆಚ್ಚು ಮಂದಿ ವೀಕ್ಷಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಆ ವ್ಯಕ್ತಿಯ ವರ್ತನೆ ದಿಗ್ಭ್ರಮೆಗೊಳಿಸಿದೆ.

“ಡ್ಯಾಮ್​. ಜೀನಿಯಸ್​ ಐಡಿಯಾ” ಎಂದು ಒಬ್ಬರು ಕಾಮೆಂಟ್​ ಮಾಡಿದ್ದರೆ, ಇನ್ನು ಕೆಲವರು ಹಾಸ್ಯಮಯವಾಗಿ ಅಭಿಪ್ರಾಯ ವ್ಯಕ್ತಪಡಿಸಿ ಕಾಲೆಳೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...