alex Certify ಸಖತ್‌ ಕ್ಯೂಟ್‌ ಆಗಿದೆ ಮೇಕೆ – ಗೂಳಿ ಡಿಕ್ಕಿ ಹೊಡೆಯುವ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಖತ್‌ ಕ್ಯೂಟ್‌ ಆಗಿದೆ ಮೇಕೆ – ಗೂಳಿ ಡಿಕ್ಕಿ ಹೊಡೆಯುವ ವಿಡಿಯೋ

ಮನೆಯಲ್ಲಿ ಸಣ್ಣ ಮಕ್ಕಳಿದ್ದರೆ ತಲೆ ತಲೆ ತಾಗಿಸಿ ಡೀ ಡೀ ಡಿಕ್ಕಿ ಎಂದು ಮಕ್ಕಳನ್ನು ಖುಷಿಪಡಿಸುವ ಚಟುವಟಿಕೆ ನಡೆಸುವುದು ಸಾಮಾನ್ಯ. ಮಕ್ಕಳ ಪ್ರತಿಸ್ಪಂದನೆ ನೋಡಿ ದೊಡ್ಡವರೂ ಖುಷಿಪಡುವುದುಂಟು.

ಪ್ರಾಣಿಗಳಲ್ಲೂ ಈ ರೀತಿ ಚಟುವಟಿಕೆ ನಡೆಯುವುದುಂಟೇ ಎಂಬ ಅನುಮಾನ ಬರುವಂತೆ ಪ್ರಾಣಿಗಳೆರೆಡರ ನಡುವೆ ಡಿಕ್ಕಿ ಪ್ರಸಂಗ ನಡೆದಿದ್ದು, ಆ ಸಂದರ್ಭದ ವಿಡಿಯೋ ವೈರಲ್​ ಆಗಿದೆ.

ಮೇಕೆ ಮರಿಯೊಂದು ಮರಿ ಗೂಳಿಯ ಜತೆಗೆ ಹೋರಾಡಲು ಪ್ರಯತ್ನಿಸುತ್ತದೆ, ಹೋರಾಟವೆಂದರೆ ಅದು ನೈಜ ಕಾಳಗವೇನಲ್ಲ. ಓಡಿ ಬಂದು ನಿಧಾನವಾಗಿ ತನ್ನ ತಲೆಯನ್ನು ಗೂಳಿ ತಲೆಗೆ ಮೆದುವಾಗಿ ತಾಗಿಸುತ್ತದೆ.

ಇದರ ಮೂಲ ವಿಡಿಯೋ ಕ್ಲಿಪ್​ 2012ರ ದ್ದಾಗಿದ್ದರೂ, ಇದು ಇತ್ತೀಚೆಗೆ ಟ್ವಿಟರ್​ನಲ್ಲಿ ಮರುಕಳಿಸಿತು ಮತ್ತು ಈಗ 18 ಮಿಲಿಯನ್​ ವೀಕ್ಷಣೆ ಕಂಡಿದೆ. ಉತ್ತರ ಅಟ್ಲಾಂಟಿಕ್​ ಮಹಾಸಾಗರದ ಮಧ್ಯದಲ್ಲಿರುವ ಅಜೋರ್ಸ್​ ದ್ವೀಪಸಮೂಹದಲ್ಲಿರುವ ಜ್ವಾಲಾಮುಖಿ ಇರುವ ದ್ವೀಪವಾದ ಟೆಸಿರ್ರಾದ್ದಾಗಿದೆ ಈ 10 ಸೆಕೆಂಡ್​ ಕ್ಲಿಪ್​.

ಶಾಂತವಾಗಿ ನಿಂತಿರುವಾಗ ಎಳೆಯ ಗೂಳಿಯ ಕಡೆಗೆ ಮೇಕೆ ದೂರದಿಂದ ಓಡುತ್ತಿರುವುದನ್ನು ಕಾಣಬಹುದು. ಕುರಿಯು ಗೂಳಿಯ ತಲೆಯ ಹತ್ತಿರ ಬಂದಾಗ, ಅದರ ತಲೆಗೆ ಅಪ್ಪಳಿಸುವ ಬದಲು ನಿಧಾನವಾಗಿ ತಲೆಯಿಂದ ತಾಗಿಸಿಬಿಡುತ್ತೆ. ಗೂಳಿ ಕೂಡ ಪ್ರತಿರೋಧ ತೋರದೇ ಸಾವಧಾನದಿಂದ ತಲೆಯನ್ನು ತಾಗಿಸಿಕೊಳ್ಳುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...