alex Certify ಮಂಗಗಳಿಗೆ ಬಾಳೆಹಣ್ಣಿನ ರಸದೌತಣ; ನೆಟ್ಟಿಗರ ಹೃದಯ ತಟ್ಟಿದ ಪ್ರಾಣಿ ಪ್ರೇಮಿಯ ಗೆಶ್ಚರ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಂಗಗಳಿಗೆ ಬಾಳೆಹಣ್ಣಿನ ರಸದೌತಣ; ನೆಟ್ಟಿಗರ ಹೃದಯ ತಟ್ಟಿದ ಪ್ರಾಣಿ ಪ್ರೇಮಿಯ ಗೆಶ್ಚರ್​

ಜನರಲ್ಲಿರುವ ಪ್ರಾಣಿ ಪ್ರೇಮದ ಅನೇಕ ಉದಾಹರಣೆಗಳು ಸಾಮಾಜಿಕ ಜಾಲತಾಣದಲ್ಲಿ ಆಗಿಂದಾಗ್ಗೆ ಪ್ರಕಟವಾಗುತ್ತಿರುತ್ತದೆ.

ಪ್ರಾಣಿಪ್ರೇಮಿಯೊಬ್ಬರು ಮಂಗಗಳಿಗೆ ಬಾಳೆಹಣ್ಣಿನ ಔತಣ ನೀಡಲು ನಿರ್ಧರಿಸಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಮನಗೆಲ್ಲುತ್ತಿದೆ. 15 ಸೆಕೆಂಡುಗಳ ವಿಡಿಯೊದಲ್ಲಿ, ಹೃದಯ ವೈಶಾಲ್ಯ ಹೊಂದಿದ ಆ ವ್ಯಕ್ತಿ ನೂರಾರು ಬಾಳೆಹಣ್ಣುಗಳಿಂದ ತುಂಬಿದ ತನ್ನ ಕಾರಿನ ಡೋರ್​ ತೆರೆಯುತ್ತಾನೆ. ಕೆಲವೇ ಸೆಕೆಂಡುಗಳಲ್ಲಿ ಹಸಿದ ಕೋತಿಗಳ ಸಂಪೂರ್ಣ ಸೈನ್ಯವು ಅಲ್ಲಿ ಸೇರುತ್ತದೆ ಮತ್ತು ಬಾಳೆಹಣ್ಣು ತಿನ್ನಲು ಪ್ರಾರಂಭಿಸುತ್ತವೆ.

ಬಾಳೆಹಣ್ಣು ಮಂಗಗಳಿಗೆ ಹೆಚ್ಚು ಇಷ್ಟವಾದ ಆಹಾರಗಳಲ್ಲಿ ಒಂದಾಗಿದೆ. ಖುಷಿಯಿಂದ ಅವು ತಿನ್ನುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಈ ಮಂಗಗಳು ಖುಷಿಯಿಂದ ಸತ್ಕಾರ ಸ್ವೀಕರಿಸುವುದನ್ನು ಕಣ್ಣುತುಂಬಿಕೊಂಡ ನೆಟ್ಟಿಗರು ಖುಷಿಯಾಗಿದ್ದಾರೆ.

ಈ ವಿಡಿಯೊವನ್ನು ಕ್ರಿಯೇಚರ್​ ಆಫ್​ ಗಾಡ್​ ಎಂಬ ಟ್ವಿಟ್ಟರ್​ ಖಾತೆಯು “ಹ್ಯಾಪಿ ಸಂಡೇ” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದೆ.

ವಿಡಿಯೊ ಸುಮಾರು 1.5 ಮಿಲಿಯನ್​ ವೀಕ್ಷಣೆಯಾಗಿದ್ದು, ನೂರಾರು ಮಂದಿ ಕಾಮೆಂಟ್​ ಮಾಡಿ ಖುಷಿಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...