alex Certify ʼಮೇರೆ ಸಪ್ನೋ ಕಿ ರಾಣಿʼ ಹಾಡಿ​ಗೆ ಹೆಜ್ಜೆಹಾಕಿ ಗಮನ ಸೆಳೆದ ಪುಟ್ಟ ಮಕ್ಕಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಮೇರೆ ಸಪ್ನೋ ಕಿ ರಾಣಿʼ ಹಾಡಿ​ಗೆ ಹೆಜ್ಜೆಹಾಕಿ ಗಮನ ಸೆಳೆದ ಪುಟ್ಟ ಮಕ್ಕಳು

ಭಾರತದಲ್ಲಿ ಟಿಕ್​ಟಾಕ್​ ನಿಷೇಧದ ನಂತರ ಇನ್​ಸ್ಟಾಗ್ರಾಮ್​ ರೀಲ್​ಗಳು ಹೆಚ್ಚು ಪ್ರಚಲಿತದಲ್ಲಿದೆ. ಡ್ಯಾನ್ಸ್​ನ ವೀಡಿಯೊಗಳು ಇಲ್ಲಿ ಹೆಚ್ಚು ಟ್ರೆಂಡ್​ ಆಗುತ್ತವೆ. ವಿಶೇಷವಾಗಿ ಇನ್​ಸ್ಟಾ ಮ್ಯೂಸಿಕ್​ ನಂತರ ಮತ್ತು ಜನರು ಯಾವುದೇ ಜನಪ್ರಿಯ ಹಾಡಿನ ಆಡಿಯೊವನ್ನು ಬಳಸಲು ಅವಕಾಶ ಸಿಕ್ಕನಂತರ ಡ್ಯಾನ್ಸ್​ ರೀಲ್​ಗಳ ಸಂಖ್ಯೆಯು ಹೆಚ್ಚಾಗಿದೆ.

ಈ ನಡುವೆ ಮಕ್ಕಳ ಡ್ಯಾನ್ಸ್​ ವಿಡಿಯೋ ಇನ್​ಸ್ಟಾಗ್ರಾಮ್​ನಲ್ಲಿ ಭಾರಿ ಹಿಟ್​ ಆಗಿದ್ದು, ಸಾಕಷ್ಟು ವೀಕ್ಷಣೆಗಳನ್ನು ಗಳಿಸಿವೆ. ಬಾಲಿವುಡ್​ನ ಕ್ಲಾಸಿಕ್​ ಹಾಡಿಗೆ ಇಬ್ಬರು ಮಕ್ಕಳು ನೃತ್ಯ ಮಾಡುವುದನ್ನು ಇದರಲ್ಲಿ ಕಾಣಬಹುದು.

ಹೈದರಾಬಾದ್​ನಲ್ಲಿ ವಾಸಿಸುತ್ತಿರುವ ಬಾಲಕಿಯರ ತಂದೆ ರಮೇಶ್​ ಭಂಡಾರಿ ಚೆಟ್ರಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದು 128ಕೆ ವೀಕ್ಷಣೆ ಮತ್ತು 15,000 ಲೈಕ್​ಗಳನ್ನು ಪಡೆದುಕೊಂಡಿದೆ.

ಲೆಜೆಂಡರಿ ನಟ ರಾಜೇಶ್​ ಖನ್ನಾ ಅಭಿನಯದ 1969 ಆರಾಧನಾ ಚಿತ್ರದ “ಮೇರೆ ಸಪ್ನೋ ಕಿ ರಾಣಿ ಕಬ್​ ಆಯೇಗಿ ತು……” ಹಾಡಿಗೆ ಚಿಕ್ಕ ಹುಡುಗಿಯರು ಕುಣಿಯುತ್ತಿರುವುದನ್ನು ವೀಡಿಯೊದಲ್ಲಿ ನೋಡಬಹುದಾಗಿದೆ.

ಭಂಡಾರಿ ಸಹೋದರಿಯರ ಉತ್ಸಾಹಭರಿತ ನೃತ್ಯದ ಹೆಜ್ಜೆಗಳು ಅನೇಕ ನೆಟ್ಟಿಗರ ಮುಖದಲ್ಲಿ ನಗು ಮೂಡಿಸಿದೆ. ನಗುವ ಎಮೋಜಿಗಳೊಂದಿಗೆ ಕಾಮೆಂಟ್​ಗಳನ್ನು ಸಹ ಮಾಡಿದ್ದು, ಅವರ ‘ನಟನಾ ಕೌಶಲ್ಯ’ವನ್ನು ಶ್ಲಾಘಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...