alex Certify RRR ಚಿತ್ರದ ‘ನಾಟು ನಾಟು’ಗೆ ಜಪಾನಿಗರು ಫಿದಾ: ರಸ್ತೆ ನಡುವೆಯೇ ಯೂಟ್ಯೂಬರ್​ ಹೆಜ್ಜೆ- ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

RRR ಚಿತ್ರದ ‘ನಾಟು ನಾಟು’ಗೆ ಜಪಾನಿಗರು ಫಿದಾ: ರಸ್ತೆ ನಡುವೆಯೇ ಯೂಟ್ಯೂಬರ್​ ಹೆಜ್ಜೆ- ವಿಡಿಯೋ ವೈರಲ್​

ಕೆಲವು ಸಿನಿಮಾ ಹಾಡುಗಳೇ ಹಾಗೆ. ಎಷ್ಟು ಪ್ರಸಿದ್ಧಿ ಪಡೆಯುತ್ತವೆ ಎಂದರೆ ಇದು ವಿದೇಶಗಳಲ್ಲಿಯೂ ಮನೆಮಾತಾಗಿಬಿಡುತ್ತವೆ. ಅರ್ಥ ಗೊತ್ತಿಲ್ಲದಿದ್ದರೂ ಅವುಗಳ ಮ್ಯೂಸಿಕ್​ಗೆ ಜನರು ಫಿದಾ ಆಗಿಬಿಡುತ್ತಾರೆ.

ಅಂಥದ್ದೇ ಹಾಡುಗಳಲ್ಲಿ ಒಂದಾಗಿದೆ ಎಸ್‌ಎಸ್ ರಾಜಮೌಳಿ ಅವರ ಆರ್‌ಆರ್‌ಆರ್ ಚಿತ್ರ, ಭಾರತದಲ್ಲಿ ಮಾತ್ರವಲ್ಲದೇ ಜಗತ್ತಿನಾದ್ಯಂತ ಭಾರಿ ಹಿಟ್ ಆಗಿರುವ ಈ ಚಿತ್ರದ ಹಾಡುಗಳು ಅಮೆರಿಕದ ನಂತರ ಜಪಾನ್‌ ಮುಟ್ಟಿದೆ. ಜಪಾನ್​ನಲ್ಲಿ ಇದೇ ಅಕ್ಟೋಬರ್ 21 ರಂದು ಬಿಡುಗಡೆಯಾಗಿರುವ ಚಿತ್ರದ ಮ್ಯೂಸಿಕ್​ಗೆ ಜನರು ಫಿದಾ ಆಗಿದ್ದಾರೆ.

ಚಿತ್ರದ ಹಿಟ್ ಹಾಡುಗಳಲ್ಲಿ ಒಂದಾಗಿರುವ ‘ನಾಟು ನಾಟು’ ಈಗಾಗಲೇ ಜನರ ಮನಸ್ಸನ್ನು ಗೆದ್ದಿದೆ. ಜನಪ್ರಿಯ ಜಪಾನಿನ ಯೂಟ್ಯೂಬರ್ ಮೇಯೊ ಹಾಗೂ ಅವರ ಸ್ನೇಹಿತ ಈ ಹಾಡಿಗೆ ರಸ್ತೆಯ ನಡುವೆಯೇ ಹೆಜ್ಜೆ ಹಾಕಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದೆ.

ಈ ಚಿತ್ರ ನೋಡಿ ಬಹಳ ಸಂತೋಷವಾಯಿತು. ಇದರ ಹಾಡು ನಾಟು ನಾಟು, ಅದನ್ನು ನಾನು ಮರೆಯಲು ಸಾಧ್ಯವೇ ಇಲ್ಲ. ಇದಕ್ಕಾಗಿಯೇ ಹೆಜ್ಜೆ ಹಾಕೋಣ ಎನ್ನಿಸಿತು ಎಂದಿರುವ ಈ ಜೋಡಿಯ ವಿಡಿಯೋಗೆ ಸಹಸ್ರಾರು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...