alex Certify ಸ್ವಂತ ಸೂರಿಲ್ಲದ ಯುವತಿಗೆ ಕಾರಿನಲ್ಲೇ ಜೀವನ…! ಮನಕಲಕುವ ಕಥೆ ಕೇಳಿ ಕಣ್ಣೀರಾದ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ವಂತ ಸೂರಿಲ್ಲದ ಯುವತಿಗೆ ಕಾರಿನಲ್ಲೇ ಜೀವನ…! ಮನಕಲಕುವ ಕಥೆ ಕೇಳಿ ಕಣ್ಣೀರಾದ ಜನ

130 ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ಭಾರತದಲ್ಲಿ, ಅದಕ್ಕೂ ಹೆಚ್ಚು ಜನಸಂಖ್ಯೆ ಇರುವ ಚೀನಾದಲ್ಲಿ ಜನರು ಹೇಗೇಗೋ ಜೀವನ ದೂಡುತ್ತಿದ್ದಾರೆ. ಸ್ವಲ್ಪ ಹಣಕಾಸು ಇದ್ದವರಾದರೆ ವಾಸಿ, ಇಲ್ಲವಾದರೆ ರಸ್ತೆಗಳೆ ವಾಸಕ್ಕೆ ಗತಿ. ದಿಲ್ಲಿ, ಮುಂಬಯಿ, ಲಖನೌ, ಅಮೃತಸರ, ಬೆಂಗಳೂರು, ಚೆನ್ನೈಗಳಂಥ ಮಹಾನಗರಗಳಲ್ಲಿ ಜನದಟ್ಟಣೆಯಿಂದಾಗಿ ಮನೆಗಳೇ ಸಿಗದೆಯೇ ರಸ್ತೆಯ ಪಕ್ಕದಲ್ಲಿ, ಪಾರ್ಕ್‌ಗಳಲ್ಲಿ, ದೇವಸ್ಥಾನಗಳ ಆವರಣಗಳಲ್ಲಿ ಮಲಗುವವರನ್ನು ನಾವು ಕಾಣುವುದು ಸಾಮಾನ್ಯ ಆಗಿಬಿಟ್ಟಿದೆ.
ಆದರೆ, 22 ವರ್ಷದ ಈ ವಿದೇಶಿ ಯುವತಿ ಮಾತ್ರ ದುಡಿಮೆಯ ಛಲದೊಂದಿಗೆ ತನ್ನ ನಿರ್ಗತಿಕ ಪರಿಸ್ಥಿತಿಯನ್ನು ಧೈರ್ಯವಾಗಿ ಎದುರಿಸುತ್ತಿದ್ದಾಳೆ.

ಆಲಿಯಾ ಎಂಬ ಯುವತಿ ದಿನಸಿ ಮಾರುಕಟ್ಟೆಯೊಂದರಲ್ಲಿ ಕೆಲಸ ಮಾಡುತ್ತಾಳೆ. ಅದು ಕೂಡ ವಾರದ ಐದು ದಿನಗಳು, ನಿತ್ಯ 8 ಗಂಟೆಗಳ ಕೆಲಸ ಈಕೆಗೆ. ಬಳಿಕ ಸ್ವಲ್ಪ ಹೊರಗಡೆ ಸುತ್ತಾಡಿ, ಅಲ್ಲಿಯೇ ಎಲ್ಲಾದರೂ ಸಿಕ್ಕಿದ್ದನ್ನು ಖರೀದಿಸಿ ತಿನ್ನುತ್ತಾಳೆ. ಬಳಿಕ ತನ್ನ ಬಳಿಯಿರುವ ಕಾರೊಂದರಲ್ಲಿ ಮಲಗಿಕೊಳ್ಳುತ್ತಾಳೆ. ಈಕೆಗೆ ಮನೆಯೇ ಇಲ್ಲ..!

ಆಟವಾಡುತ್ತಿದ್ದ ಬಾಲಕಿ ಮೇಲೆ ನಾಯಿಗಳ ದಾಳಿ: ಸಿಸಿ ಟಿವಿಯಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ

ಹೌದು, ಕಾರಿನಲ್ಲಿ ನಿದ್ದೆ ಬರುವಷ್ಟು ಹೊತ್ತು ಮಲಗುತ್ತಾಳೆ. ಬಳಿಕ ಎದ್ದು ಕೂತು, ಬೇಗನೇ ತೆರೆಯುವ ಜಿಮ್‌ಗಳಿಗಾಗಿ ಹುಡುಕಾಡುತ್ತಾಳೆ. ಅಲ್ಲಿಗೆ ತೆರಳಿ, ವ್ಯಾಯಾಮ ಮಾಡುವ ನೆಪದಲ್ಲಿ ಸ್ನಾನ, ಬ್ರಷ್‌ ಮಾಡಿಕೊಳ್ಳುತ್ತಾಳೆ. ಪುನಃ ಕಾರನ್ನು ಏರಿಕೊಂಡು ತಲೆ ಬಾಚಿಕೊಂಡು, ಬೇರೆ ಡ್ರೆಸ್‌ ಧರಿಸಿಕೊಂಡು ಕೆಲಸಕ್ಕೆ ತೆರಳುತ್ತಾಳಂತೆ. ಈ ಬಗ್ಗೆ ಯೂಟ್ಯೂಬ್‌ನಲ್ಲಿ ಆಕೆಯ ವಿಡಿಯೊವೊಂದು ಭಾರಿ ವೈರಲ್‌ ಆಗಿದೆ.

ಆಕೆಯ ಕಷ್ಟದ ಕತೆಗಳನ್ನ ಕೇಳಿದ ಅನೇಕ ಜನರು ಹೇಗೋ ಆಕೆಯ ಮೊಬೈಲ್‌ ಸಂಖ್ಯೆ ಮತ್ತು ಕೆಲಸ ಮಾಡುವ ಸ್ಥಳ ಪತ್ತೆ ಮಾಡಿದ್ದಾರೆ. ಸ್ವಲ್ಪ ಹಣ ಸಹಾಯ ಮಾಡಿ, ಸಾಮಾನ್ಯ ದರ್ಜೆಯ ಹೋಟೆಲ್‌ನಲ್ಲಿ ತಂಗಲು ವ್ಯವಸ್ಥೆ ಮಾಡಿದ್ದಾರೆ ಎಂದು ಆಕೆಯೇ ಮತ್ತೊಂದು ವಿಡಿಯೊದಲ್ಲಿ ಹೇಳಿಕೊಂಡಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...