alex Certify ರಸ್ತೆಯಲ್ಲಿ ಹರ್ಯಾನ್ವಿ ಗಾಯಕಿ ಪ್ರಾಂಜಲ್ ದಹಿಯಾ ಸಖತ್ ಸ್ಟೆಪ್ಸ್…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಸ್ತೆಯಲ್ಲಿ ಹರ್ಯಾನ್ವಿ ಗಾಯಕಿ ಪ್ರಾಂಜಲ್ ದಹಿಯಾ ಸಖತ್ ಸ್ಟೆಪ್ಸ್…..!

ಹರ್ಯಾನ್ವಿ ಸಂಗೀತವು ತನ್ನದೇ ಆದ ಬೃಹತ್ ಪ್ರೇಕ್ಷಕರನ್ನು ಹೊಂದಿದೆ. ಹರ್ಯಾನ್ವಿ ಗಾಯಕಿ ಮತ್ತು ಮಾಜಿ ಬಿಗ್ ಬಾಸ್ ಸ್ಪರ್ಧಿ ಸಪ್ನಾ ಚೌಧರಿ ಅವರು ಇನ್ಸ್ಟಾಗ್ರಾಂನಲ್ಲಿ 5 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ. ಅವರ ಲೈವ್ ಶೋಗಳಲ್ಲಿ ಸಾವಿರಾರು ಅಭಿಮಾನಿಗಳು ಭಾಗವಹಿಸುತ್ತಾರೆ. ಆಕೆಯ ಡ್ಯಾನ್ಸ್ ವಿಡಿಯೋ ಕೂಡ ಭಾರಿ ಹಿಟ್ ಆಗಿದ್ದು, ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದೆ.

ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ ಹರ್ಯಾನ್ವಿಯ ಮತ್ತೋರ್ವ ಗಾಯಕಿಯ ಡ್ಯಾನ್ಸ್ ರೀಲ್ ಲಕ್ಷಗಟ್ಟಲೆ ವೀಕ್ಷಣೆಗಳೊಂದಿಗೆ ವೈರಲ್ ಆಗುತ್ತಿದೆ. 2.3 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಪ್ರಾಂಜಲ್ ದಹಿಯಾ ಅವರು ನೇವಿ ಬ್ಲೂ ಸೂಟ್‌ ಧರಿಸಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ, ಗಾಯಕಿ ತನ್ನ ಹೊಸ ಹಾಡು ‘ಬತೇಯು ಖುಗ್ಯಾ’ ಅನ್ನು ಹಾಡಿದ್ದಾರೆ.

ವಿಡಿಯೋ ಹಲವಾರು ವೀಕ್ಷಣೆಗಳನ್ನು ಮತ್ತು ಲೈಕ್ಸ್ ಗಳನ್ನು ಸ್ವೀಕರಿಸಿದೆ. ನೆಟ್ಟಿಗರು ಪ್ರಾಂಜಲ್ ಅವರ ಆಕರ್ಷಕವಾದ ನೃತ್ಯವನ್ನು ಇಷ್ಟಪಟ್ಟಿದ್ದಾರೆ. ಇನ್ಸ್ಟಾಗ್ರಾಂ ಬಳಕೆದಾರರು ಕಲಾವಿದರ ಬಗ್ಗೆ ಪ್ರೀತಿ ಮತ್ತು ಪ್ರಶಂಸೆಯೊಂದಿಗೆ ಕಾಮೆಂಟ್‌ ವಿಭಾಗವನ್ನು ತುಂಬಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...