alex Certify ಅಲ್ಲು ಅರ್ಜುನ್, ಜೂನಿಯರ್ ಎನ್.ಟಿ.ಆರ್. ಮತದಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಲ್ಲು ಅರ್ಜುನ್, ಜೂನಿಯರ್ ಎನ್.ಟಿ.ಆರ್. ಮತದಾನ

ಹೈದರಾಬಾದ್: ಸೂಪರ್‌ ಸ್ಟಾರ್‌ ಗಳಾದ ಅಲ್ಲು ಅರ್ಜುನ್ ಮತ್ತು ಜೂನಿಯರ್ ಎನ್‌ಟಿಆರ್ ಸೋಮವಾರ ಹೈದರಾಬಾದ್‌ನ ಜುಬಿಲಿ ಹಿಲ್ಸ್‌ ನಲ್ಲಿ ಮತದಾನ ಮಾಡಿದ್ದಾರೆ.

ಕುಟುಂಬದವರೊಂದಿಗೆ ಆಗಮಿಸಿ ಮತದಾನ ಮಾಡಿದ ಎನ್.ಟಿ.ಆರ್., ಪ್ರತಿಯೊಬ್ಬರೂ ಮತದಾನದ ಹಕ್ಕನ್ನು ಬಳಸಬೇಕು. ಇದು ಮುಂದಿನ ಪೀಳಿಗೆಗೆ ನಾವು ರವಾನಿಸಬೇಕಾದ ಉತ್ತಮ ಸಂದೇಶವಾಗಿದೆ ಎಂದು ಹೇಳಿದ್ದಾರೆ.

ಹೈದರಾಬಾದ್‌ ನ ಜುಬಿಲಿ ಹಿಲ್ಸ್‌ ನಲ್ಲಿರುವ ಮತಗಟ್ಟೆಯಲ್ಲಿ ಅಲ್ಲು ಅರ್ಜುನ್ ಮತದಾನ ಮಾಡಿದ್ದಾರೆ.

ಆಂಧ್ರಪ್ರದೇಶದಲ್ಲಿ ಲೋಕಸಭೆ ಚುನಾವಣೆ ಜತೆಗೆ ವಿಧಾನಸಭೆ ಚುನಾವಣೆಯೂ ನಡೆದಿದೆ. ಅಲ್ಲು ಅರ್ಜುನ್ ಅವರ ಸ್ನೇಹಿತೆ ಮತ್ತು ವೈಎಸ್‌ಆರ್‌ಸಿಪಿ ಶಾಸಕಿ ಶಿಲ್ಪಾ ರವಿ ಅವರು ನಂಗಲ್ ಕ್ಷೇತ್ರದಿಂದ ಅಭ್ಯರ್ಥಿಯಾಗಿದ್ದಾರೆ. ಹೀಗಿರುವಾಗ ಚುನಾವಣಾ ಪ್ರಚಾರದ ಕೊನೆಯ ದಿನವಾದ(ಶನಿವಾರ) ಅಲ್ಲು ಅರ್ಜುನ್ ತನ್ನ ಸ್ನೇಹಿತೆ ಪರ ಪ್ರಚಾರ ನಡೆಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...