alex Certify Video | ಪೊಲೀಸರ ಮುಂದೆ ಬಟ್ಟೆ ಬಿಚ್ಚಿ ಪಾನಮತ್ತ ಮಹಿಳೆ ರಂಪಾಟ; ನಡುರಸ್ತೆಯಲ್ಲಿನ ಹೈಡ್ರಾಮಾಗೆ ಜನ ಸುಸ್ತೋಸುಸ್ತು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Video | ಪೊಲೀಸರ ಮುಂದೆ ಬಟ್ಟೆ ಬಿಚ್ಚಿ ಪಾನಮತ್ತ ಮಹಿಳೆ ರಂಪಾಟ; ನಡುರಸ್ತೆಯಲ್ಲಿನ ಹೈಡ್ರಾಮಾಗೆ ಜನ ಸುಸ್ತೋಸುಸ್ತು…!

VIDEO: Drunk Woman Strips, Dances & Clashes With Police In UP's Kanpur; High-Voltage Drama Caught On Camera

ಉತ್ತರ ಪ್ರದೇಶದ ಕಾನ್ಪುರದಲ್ಲಿ ಪಾನಮತ್ತ ಮಹಿಳೆಯೊಬ್ಬರು ನಡುರಸ್ತೆಯಲ್ಲೇ ಗಲಾಟೆ ಸೃಷ್ಟಿಸಿ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಮಹಿಳೆಯನ್ನು ನಿಯಂತ್ರಿಸಲು ಪೊಲೀಸರು ಹೈರಾಣಾದರು. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಕಾನ್ಪುರದ ಗೋಮತಿ ನಗರ ಚೌಕ್‌ನಲ್ಲಿ ತಡರಾತ್ರಿ ಮಹಿಳೆ ಮದ್ಯದ ಅಮಲಿನಲ್ಲಿ ನಡುರಸ್ತೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದರು. ಘಟನೆ ನಡೆದ ಸ್ಥಳಕ್ಕೆ ಸಮೀಪದಲ್ಲಿಯೇ ಇದ್ದ ಮಾರ್ಕೆಟ್ ಠಾಣೆ ಪೊಲೀಸರು ಬಂದು ಮಹಿಳೆಯನ್ನು ಸಮಾಧಾನ ಪಡಿಸಿದರು. ಆದರೆ ಮಹಿಳೆ ಪೊಲೀಸ್ ಅಧಿಕಾರಿಗಳೊಂದಿಗೆ ವಾಗ್ವಾದ ಆರಂಭಿಸಿದ್ದು, ಈ ದೃಶ್ಯ ವೀಕ್ಷಿಸಲು ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು.

ಪುರುಷ ಪೊಲೀಸ್ ಅಧಿಕಾರಿಗಳ ಮುಂದೆ ಮಹಿಳೆ ತನ್ನ ಬಟ್ಟೆಗಳನ್ನು ತೆಗೆದು ಪೊಲೀಸ್ ಸಿಬ್ಬಂದಿಯನ್ನು ಬೆದರಿಸಲು ಪ್ರಯತ್ನಿಸಿದಳು. ಇದರಿಂದ ಹಿಂಜರಿದ ಪೊಲೀಸರು ಮಹಿಳಾ ಕಾನ್‌ಸ್ಟೇಬಲ್‌ಗಳನ್ನು ಕರೆಸಿದರು. ಬಳಿಕ ಮಹಿಳೆಗೆ ನೀರು ಕೊಟ್ಟು ಆಕೆಯನ್ನು ಪೊಲೀಸ್ ಸ್ಟೇಷನ್ ಗೆ ಕರೆದೊಯ್ದು ಸಂಬಂಧಿಕರಿಗೆ ಮಾಹಿತಿ ನೀಡಿ ಕಳಿಸಿಕೊಟ್ಟರು. ಮಹಿಳೆ ಕುಡಿದ ಸ್ಥಿತಿಯಲ್ಲಿದ್ದಳು ಎಂದು ಪೊಲೀಸ್ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಆದರೆ ರಸ್ತೆಯಲ್ಲಿ ಆಕೆಯ ರಂಪಾಟ ಬಹಳ ಸಮಯದವರೆಗೆ ನಡೆದಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...