alex Certify ಅವಸರದಲ್ಲಿ ವರನಿಗೆ ಮಾಲೆ ಹಾಕಲು ಹೋದ ಯುವತಿಗೆ ಏನಾಯ್ತು….? ವಿಡಿಯೊ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅವಸರದಲ್ಲಿ ವರನಿಗೆ ಮಾಲೆ ಹಾಕಲು ಹೋದ ಯುವತಿಗೆ ಏನಾಯ್ತು….? ವಿಡಿಯೊ ವೈರಲ್

ಭಾರತದಲ್ಲಿ ಮದುವೆಗಳಿಗೆ ವಿಶೇಷ ಸ್ಥಾನವಿದೆ. ಹಾಗಾಗಿಯೇ ವಿದೇಶಿಗರು ಭಾರತದ ಮದುವೆಯನ್ನು ’ಬಿಗ್‌ ಫ್ಯಾಟ್‌ ಇಂಡಿಯನ್‌ ವೆಡ್ಡಿಂಗ್‌’ ಎಂದು ಕರೆಯುತ್ತಾರೆ. ಭರ್ಜರಿ ಮೂರು ತಿಂಗಳಾದರೂ ಮದುವೆಯ ಸಂಭ್ರಮ ಮನೆಯೊಂದರಲ್ಲಿ ಇರುತ್ತದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗುತ್ತದೆ. ಬಟ್ಟೆ, ಒಡವೆ, ಪೂಜೆ ಸಾಮಗ್ರಿಗಳು, ಮದುವೆಯ ಮಂಟಪ ಬುಕ್ಕಿಂಗ್‌, ಆಮಂತ್ರಣ ಪತ್ರಿಕೆ, ನೆಂಟರಿಗೆ ಹಂಚಿಕೆ, ಅಸಮಾಧಾನಿತ ನೆಂಟರ ಮನವೊಲೈಕೆ, ಊಟ-ಉಪಚಾರ, ವರದಕ್ಷಿಣೆ ಇಲ್ಲದಿದ್ದರೂ ಮಗಳ ಸುಖೀ ಸಂಸಾರಕ್ಕಾಗಿ ಪೋಷಕರಿಂದ ಕೊಡುಗೆಗಳು, ಮೆಹಂದಿ ಕಾರ್ಯಕ್ರಮ, ಡ್ಯಾನ್ಸ್‌, ವರನ ಸ್ನೇಹಿತರ ಮದ್ಯದ ಪಾರ್ಟಿಗಳು ಸೇರಿದಂತೆ ಭಾರತದಲ್ಲಿ ಒಂದು ಮದುವೆ ಎಂದರೆ ಅದು ಊರಿನ ಜಾತ್ರೆ ನಡೆದಂತೆಯೇ ಸರಿ.

ಅದಕ್ಕೆ ನಮ್ಮಲ್ಲಿ ಪ್ರಸಿದ್ಧ ಗಾದೆ ಇರುವುದು, ’’ ಮದುವೆ ಮಾಡಿ ನೋಡಿ, ಮನೆ ಕಟ್ಟಿ ನೋಡಿ’’ ಎಂದು. ಆಗ ಗೊತ್ತಾಗುತ್ತದೆ ಜೀವನದಲ್ಲಿ ಕಷ್ಟ ಎಂದರೇನು, ಯಾರು ನಮ್ಮವರು ಎನ್ನುವುದು ಎಂದು ಹಿರಿಯರು ಆಡಿದ ಮಾತುಗಳು.

ಅಂತಹದ್ದೇ ದೊಡ್ಡ ಮದುವೆ ಸಮಾರಂಭದಲ್ಲಿನ ಯಡವಟ್ಟು ಒಂದರ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿದೆ. ಅನೇಕ ರಾಜ್ಯಗಳಲ್ಲಿ ವಿವಿಧ ಸಮುದಾಯದ ಜನರದ್ದು ಬೇರೆ ಬೇರೆಯ ಸಂಪ್ರದಾಯಗಳ ಅಡಿಯಲ್ಲಿ ಮದುವೆ ನಡೆಸಲಾಗುತ್ತದೆ. ಉತ್ತರ ಭಾರತದಲ್ಲಿ ವರನ ಚಪ್ಪಲಿಗಳನ್ನು ಬಚ್ಚಿಟ್ಟು, ವಧುವಿನ ಸೋದರಿ ಅಥವಾ ಸಂಬಂಧಿಗಳು ವರನಿಂದ ಹಣದ ಬೇಡಿಕೆ ಇಡುತ್ತಾರೆ. ಕೇಳಿದ್ದಷ್ಟು ಕೊಟ್ಟರೆ ಮಾತ್ರವೇ ಚಪ್ಪಲಿ ಹಿಂದಿರುಗಿಸುವ ಹಠ ಮಾಡುತ್ತಾರೆ. ಇನ್ನು ಕೆಲವು ಕಡೆಗಳಲ್ಲಿ ವರನು ವಧುವಿಗೆ ಮಾಲೆ ಹಾಕುತ್ತಾರೆ. ಆದರೆ, ವಧುವು ಹಾಕಲು ಮುಂದಾದಾಗ ಕೊರಳು ಒಡ್ಡುವುದಿಲ್ಲ. ಬದಲಿಗೆ ಕೊರಳು ಎತ್ತರಿಸುತ್ತಾನೆ. ಆಗ ಹುಡುಗಿಯ ನೆಂಟರು ವಧುವನ್ನು ಎತ್ತಿಕೊಂಡು ವರನಿಗೆ ಮಾಲೆ ಹಾಕಿಸುತ್ತಾರೆ.

ಅದೇ ರೀತಿ ಆಟವಾಡಿಸುತ್ತಿದ್ದ ವರನಿಗೆ ವರಮಾಲೆ ತೊಡಿಸುವ ಸುಪಾರಿಯನ್ನು ವಧುವು ತನ್ನ ಸ್ನೇಹಿತೆಗೆ ಕೊಟ್ಟಿರುತ್ತಾಳೆ. ವಧುವಿಗೆ ವರನು ಸಿಂಧೂರ ಹಚ್ಚುವ ಪದ್ಧತಿಯ ಆಚರಣೆ ನಡೆಯುವ ನಡುವೆ ಜೋರಾಗಿ ಮುನ್ನುಗ್ಗಿ ಬರುವ ಮಾಲೆ ಹಿಡಿದ ಯುವತಿಯನ್ನು ಕಂಡ ವರನು ಬದಿಗೆ ಶೀಘ್ರವಾಗಿ ವಾಲುತ್ತಾನೆ. ಆಗ ಗುರಿ ತಪ್ಪಿದ ನರಿಯಂತೆ ವಧುವಿನ ಸ್ನೇಹಿತೆ ಮಾಲೆ ಹಿಡಿದುಕೊಂಡೇ ಸುತ್ತಲಿದ್ದ ಜನರ ಮೇಲೆ ಬೀಳುತ್ತಾಳೆ. ಅಲ್ಲಿಗೆ ವರಮಾಲೆಯನ್ನು ತೊಡಿಸುವ ಸಂಚು ವಿಫಲಗೊಳ್ಳುತ್ತದೆ. ಈ ವಿಡಿಯೊ ಭಾರಿ ವೈರಲ್‌ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...