alex Certify ಭಾಂಗ್ರಾ ಹಾಡಿಗೆ ಅದ್ಭುತ ಸ್ಟೆಪ್ಸ್​ ಹಾಕಿದ ವೃದ್ಧರು: ನೃತ್ಯಕ್ಕೆ ವಯಸ್ಸಿನ ಹಂಗಿಲ್ಲ ಎಂದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾಂಗ್ರಾ ಹಾಡಿಗೆ ಅದ್ಭುತ ಸ್ಟೆಪ್ಸ್​ ಹಾಕಿದ ವೃದ್ಧರು: ನೃತ್ಯಕ್ಕೆ ವಯಸ್ಸಿನ ಹಂಗಿಲ್ಲ ಎಂದ ನೆಟ್ಟಿಗರು

ಅಮೃತಸರ: ಭಾರತೀಯ ವಿವಾಹದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ವೈರಲ್​ ಆಗುತ್ತಲೇ ಇರುತ್ತವೆ. ವಿವಾಹ ಸಮಾರಂಭಗಳಲ್ಲಿನ ನೃತ್ಯ ಪ್ರದರ್ಶನಗಳು, ಮದುವೆಯ ಬಟ್ಟೆಗಳು, ವಧುವಿನ ಪ್ರವೇಶ ಮತ್ತು ವಿವಾಹಗಳಿಂದ ಪ್ರಣಯ ಅಥವಾ ತಮಾಷೆಯ ಕ್ಷಣಗಳು… ಹೀಗೆ ಹಲವು ರಸವತ್ತಾದ ವಿಡಿಯೋ ವೈರಲ್​ ಆಗುತ್ತವೆ. ಇದೀಗ ಪಂಜಾಬಿ ವಿವಾಹದ ವಿಡಿಯೋ ಒಂದು ವೈರಲ್​ ಆಗಿದೆ.

ಇಬ್ಬರು ವೃದ್ಧರು ಯಾರ್ ಬೋಲ್ಡಾ ಹಾಡಿಗೆ ಭಾಂಗ್ರಾ ನೃತ್ಯ ಮಾಡುವ ವಿಡಿಯೋ ಇದಾಗಿದೆ. ತಮ್ಮ ವಯಸ್ಸನ್ನು ಮರೆತು ಈ ಇಬ್ಬರು ಹಾಡಿಗೆ ಅದ್ಭುತವಾಗಿ ಸ್ಟೆಪ್​ ಹಾಕಿದ್ದು, ಇದು ನೆಟ್ಟಿಗರ ಹೃದಯ ಗೆದ್ದಿದೆ. ನೃತ್ಯಕ್ಕೆ ವಯಸ್ಸಿನ ಹಂಗು ಇಲ್ಲ ಎನ್ನುವುದು ಮತ್ತೊಮ್ಮೆ ಸಾಬೀತು ಆಗಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಇಬ್ಬರು ಸಿಖ್ ಪುರುಷರು ಡ್ಯಾನ್ಸ್ ಫ್ಲೋರ್‌ನಲ್ಲಿ ಹಾಕಿರುವ ಈ ಹೆಜ್ಜೆಯನ್ನು ಇನ್ಸ್​ಟಾಗ್ರಾಂ ಖಾತೆಯಲ್ಲಿ ಪಿಂಕ್ ಪ್ಯಾಂಥರ್ ಸ್ಟುಡಿಯೋಸ್ ಎಂಬ ಪುಟ ಹಂಚಿಕೊಂಡಿದ್ದು, ಈ ವಿಡಿಯೋ ಅನ್ನು ಇದಾಗಲೇ 1 ಮಿಲಿಯನ್​ಗೂ ಅಧಿಕ ಮ ನೋಡಿದ್ದು, 84 ಸಾವಿರಕ್ಕೂ ಅಧಿಕ ಮಂದಿ ಲೈಕ್​ ಮಾಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...