alex Certify ರಸ್ತೆ ಬದಿ ಕಲಾವಿದನ ಗಿಟಾರ್ ನಾದಕ್ಕೆ ಮನಸೋತ ನೆಟ್ಟಿಗರು: ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಸ್ತೆ ಬದಿ ಕಲಾವಿದನ ಗಿಟಾರ್ ನಾದಕ್ಕೆ ಮನಸೋತ ನೆಟ್ಟಿಗರು: ವಿಡಿಯೋ ವೈರಲ್​

ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಅಭಿನಯದ 2021 ರ ಸೂಪರ್​ ಹಿಟ್ ಚಲನಚಿತ್ರ ಶೇರ್ಷಾದ ಕೆಲವು ಗೀತೆಗಳು ಇಂದಿಗೂ ಜನಮಾನಸದಲ್ಲಿ ಅಚ್ಚಾಗಿ ಉಳಿದಿದೆ. ರಾತನ್ ಲಂಬಿಯಾನ್ ಮತ್ತು ರಾಂಝಾ ಇವೆರಡು ರೊಮಾಂಟಿಕ್​ ಹಾಡುಗಳನ್ನು ಜನರು ಗುನಗುನಿಸುತ್ತಿದ್ದಾರೆ, ಈ ಹಾಡನ್ನು ಕೇಳಲು ಸದಾ ಇಷ್ಟ ಪಡುವ ದೊಡ್ಡ ವರ್ಗವೇ ಇದೆ.

ಬೀದಿಬದಿಯಲ್ಲಿ ಕುಳಿತ ಯುವಕನೊಬ್ಬ ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿ ಒಂದು ಮೂಲೆಯಲ್ಲಿ ಕುಳಿತು ಇದೇ ಹಾಡಿಗೆ ಗಿಟಾರ್ ನುಡಿಸುತ್ತಿದ್ದು ಅದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದೆ. ಇದೇ ಸಮಯದಲ್ಲಿ ದಾರಿಹೋಕರೊಬ್ಬರು ಬಂದು ಮನ್ ಭಾರ್ಯಾ ಅವರ ಹಾಡನ್ನು ಹಾಡಿದರು. ಆ ಯುವಕ ಅವರ ಹಾಡಿಗೆ ಅಷ್ಟೇ ಸುಂದರವಾಗಿ ಗಿಟಾರ್​ ನುಡಿಸಿದ. ಈ ಜೋಡಿಯ ಸಂಗೀತ ಕೇಳಲು ಬೀದಿಯಲ್ಲಿ ಹೋಗುವವರ ನಿಂತು ಆಲಿಸಿ ಸಂತೋಷ ಪಡುತ್ತಿರುವುದು ವಿಡಿಯೋದಲ್ಲಿ ಕಾಣಬಹುದು.

‘abaan_ali_47’ ಬಳಕೆದಾರರು ಈ ವಿಡಿಯೋ ಅನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿದ್ದು, ನೆಟ್ಟಿಗರು ಇದಕ್ಕೆ ಫಿದಾ ಆಗಿದ್ದಾರೆ. ಇಂಥ ಒಬ್ಬ ಸಂಗೀತ ಕಲಾವಿದನಿಗೆ ಪ್ರೋತ್ಸಾಹ ನೀಡಿ ಸೂಕ್ತ ವೇದಿಕೆ ಕಲ್ಪಿಸಬೇಕು ಎನ್ನುವುದು ನೆಟ್ಟಿಗರ ಅಭಿಮತ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...