alex Certify ಚಿನ್ನದಂಗಡಿ ಮಾಲೀಕನ ಎದುರೇ ನೆಕ್ಲೇಸ್‌ ಕದ್ದ ಚಾಲಾಕಿ ಕಳ್ಳಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿನ್ನದಂಗಡಿ ಮಾಲೀಕನ ಎದುರೇ ನೆಕ್ಲೇಸ್‌ ಕದ್ದ ಚಾಲಾಕಿ ಕಳ್ಳಿ…!

ಗೋರಖ್‌ಪುರ (ಉತ್ತರ ಪ್ರದೇಶ) ಉತ್ತರ ಪ್ರದೇಶದ ಗೋರಖ್‌ಪುರದ ಚಿನ್ನಾಭರಣ ಮಳಿಗೆಯೊಂದರಲ್ಲಿ ಮಹಿಳೆಯೊಬ್ಬಳು ಅಂಗಡಿಯವನ ಎದುರೇ ಚಿನ್ನದ ಸೆಟ್‌ ಕದಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಆಕೆ ಸುಲಭದಲ್ಲಿ ನೆಕ್​ಲೆಸ್​ ಕದ್ದರೂ ಅಂಗಡಿಯವರಿಗೆ ಸ್ವಲ್ಪವೂ ಸಂದೇಹ ಬರದೇ ಇರುವುದನ್ನು ವಿಡಿಯೋದಲ್ಲಿ ನೋಡಬಹುದು.

ಜ್ಯುವೆಲ್ಲರಿ ಅಂಗಡಿಯಲ್ಲಿ ಮಹಿಳೆ ಮತ್ತು ಇತರ ಕೆಲವು ಜನರು ಇರುವುದನ್ನು ವಿಡಿಯೋದಲ್ಲಿ ನೋಡಬಹುದು. ಮಾರಾಟಗಾರರು ಕೆಲವು ಚಿನ್ನದ ಆಭರಣಗಳನ್ನು ತೋರಿಸುತ್ತಿರುವುದಾಗಲೇ ಅವರಿಗೆ ತಿಳಿಯದಂತೆ ಮಹಿಳೆ ಒಂದು ನೆಕ್​ಲೆಸ್​ ಅನ್ನು ಎಗರಿಸಿದ್ದಾಳೆ. ಸಿಸಿ ಟಿವಿಯಲ್ಲಿ ಕಳ್ಳತನ ದಾಖಲಾಗಿದೆ.

ಹಸಿರು ಸೀರೆ ಮತ್ತು ಸನ್​ ಗ್ಲಾಸ್​ ಹಾಕಿ ಮಾಸ್ಕ್​ ಧರಿಸಿದ್ದ ಮಹಿಳೆಯೊಬ್ಬಳು ಬಂದು ನೆಕ್​ಲೆಸ್​ ತೋರಿಸುವಂತೆ ಹೇಳುತ್ತಾಳೆ. ಒಂದು ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ನೆಕ್​ಲೆಸ್​ ಸೆಟ್​ನ ಬಾಕ್ಸ್​ಗಳನ್ನು ಅಂಗಡಿಯಾತ ತೋರಿಸುತ್ತಾನೆ. ಮಹಿಳೆಯು ತನಗೆ ಇನ್ನೂ ಕೆಲವು ಸೆಟ್‌ಗಳನ್ನು ತೋರಿಸಲು ಕೇಳುತ್ತಾಳೆ.

ನಂತರ ಅವಳು ತನ್ನ ತೊಡೆಯ ಮೇಲೆ ಎರಡು ಬಾಕ್ಸ್​ ಇಟ್ಟುಕೊಂಡು ನೋಡುವಂತೆ ಮಾಡಿ ಒಂದನ್ನು ಸೀರೆ ಒಳಗೆ ಸೇರಿಸಿ ಇನ್ನೊಂದನ್ನು ಮಾತ್ರ ಮೇಜಿನ ಮೇಲೆ ಇಡುತ್ತಾಳೆ. ಇದು ಅಂಗಡಿಯವರಿಗೆ ತಿಳಿಯುವುದೇ ಇಲ್ಲ. ಸಿಸಿಟಿವಿ ನೋಡಿದಾಗಲೇ ಆಭರಣ ಕಳುವಾಗಿರುವುದು ತಿಳಿದುಬಂದಿದೆ !

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...