alex Certify ಮೆಹೆಂದಿ ಹಚ್ಚಿಸಿಕೊಳ್ಳುತ್ತಲೇ ನಿದ್ರೆಗೆ ಜಾರಿದ ವಧು….! ತಮಾಷೆ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೆಹೆಂದಿ ಹಚ್ಚಿಸಿಕೊಳ್ಳುತ್ತಲೇ ನಿದ್ರೆಗೆ ಜಾರಿದ ವಧು….! ತಮಾಷೆ ವಿಡಿಯೋ ವೈರಲ್

ಮದುವೆ ಅಂದ ಮೇಲೆ ವಧುವಿನ ಸಂಭ್ರಮ ಕೇಳಬೇಕೆ? ಭಾರತದಲ್ಲಂತ ವಧುವಿನ ಅಲಂಕಾರಕ್ಕೇ ಬಹುಪಾಲು ಸಮಯ ಮೀಸಲು. ಗೋರಂಟಿ ಹಚ್ಚಿಸಿಕೊಳ್ಳುವುದರಿಂದ ಹಿಡಿದು ಕೇಶಾಲಂಕಾರದ ತನಕ ವಿವಿಧ ಕೆಲಸಗಳಿಗೆ ಮೈಯೊಡ್ಡಿ ದಣಿವಾಗುವುದು ಸಹಜ. ಅದರಲ್ಲೂ ವಿಶೇಷವಾಗಿ ಮೆಹೆಂದಿ ಹಾಕಿಸಿಕೊಳ್ಳುವುದಕ್ಕೆ ಗಂಟೆಗಟ್ಟಲೆ ನಿಶ್ಚಲವಾಗಿ ಕುಳಿತುಕೊಳ್ಳಬೇಕಾಗುತ್ತದೆ.

ತರಹೇವಾರಿ ವಿನ್ಯಾಸಗಳನ್ನು ಮಾಡುವುದಕ್ಕೆ ಬಹಳ ಹೊತ್ತು ಬೇಕಾಗುತ್ತದೆ. ಹೀಗೆ, ಮದುವೆ ಸಿದ್ಧಳಾಗುತ್ತಿರುವ ಯುವತಿಯೊಬ್ಬಳು ಮೆಹೆಂದಿ ಹಚ್ಚಿಸಿಕೊಳ್ಳಲು ಹೋಗಿದ್ದಾಳೆ. ಅಲ್ಲಿ ಮೆಹೆಂದಿ ಕಲಾವಿದರು ಆಕೆಯ ಕೈ ಕಾಲುಗಳಿಗೆ ಮೆಹೆಂದಿ ಹಾಕಲು ಶುರುಮಾಡಿದ್ದರು. ಕೆಲವೇ ನಿಮಿಷಗಳಲ್ಲಿ ಆಕೆ ನಿದ್ದೆಗೆ ಜಾರಿದ್ದಳು.

ಅಲಿ ಜಾಫರ್‌ ಅವರ ಟ್ರೆಂಡಿಂಗ್‌ ಹಾಡು ಜೂಮ್‌ ಅನ್ನು ಹಿನ್ನೆಲೆಯಲ್ಲಿ ಹೊಂದಿರುವ ಈ ವಿಡಿಯೋ ಈಗ ಇನ್‌ಸ್ಟಾಗ್ರಾಂನಲ್ಲಿ ವೈರಲ್‌ ಆಗಿದೆ. ವೆಡ್‌ಅಬೌಟ್‌ ಎಂಬ ಇನ್‌ಸ್ಟಾಗ್ರಾಂ ಪುಟ ಈ ವಿಡಿಯೋವನ್ನು ಶೇರ್‌ ಮಾಡಿದೆ. ಈ ಕ್ಲಿಪ್‌ 69,000ಕ್ಕೂ ಹೆಚ್ಚು ವ್ಯೂವ್ಸ್‌ ಹೊಂದಿದ್ದು, 2,200ಕ್ಕೂ ಹೆಚ್ಚು ಲೈಕ್ಸ್‌ ಪಡೆದಿದೆ.

ವಿಡಿಯೋದಲ್ಲಿ ಯುವತಿ ಹಾಸಿಗೆ ಮೇಲೆ ಪವಡಿಸುತ್ತಿರುವುದು ಕಂಡುಬಂದಿದೆ. ಮೆಹೆಂದಿ ಕಲಾವಿದರು ಕೈ, ಕಾಲುಗಳಿಗೆ ಮೆಹೆಂದಿ ಹಚ್ಚುತ್ತಿರುವ ದೃಶ್ಯವಿದೆ. ಮೆಹೆಂದಿ ಕಲಾವಿದರು ವಿಶೇಷ ಕಲಾಕೃತಿಗಳನ್ನು ಮಾಡುವ ಕಾರಣ, ಬಹಳ ಹೊತ್ತು ಬೇಕಾಗುತ್ತದೆ. ಈ ಸಂದರ್ಭದಲ್ಲಿ ಕುಳಿತು ಕುಳಿತು ಸುಸ್ತಾಗಿ ಅಲ್ಲೇ ಕಿರು ನಿದ್ರೆಗೆ ಜಾರಿದ್ದಳು ಆ ವಧು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...