alex Certify ವಧು – ವರನ ಬಹಿರಂಗ ಲಿಪ್ ಲಾಕ್ ನೋಡಿ ದಂಗಾದ ಅತಿಥಿಗಳು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಧು – ವರನ ಬಹಿರಂಗ ಲಿಪ್ ಲಾಕ್ ನೋಡಿ ದಂಗಾದ ಅತಿಥಿಗಳು…!

Viral Video: Bride and Groom Kiss Like Crazy On The Mandap. Internet Says  Haye Rabbaಸಾಮಾನ್ಯವಾಗಿ ಕ್ರಿಶ್ಚಿಯನ್ ಸಮುದಾಯದ ಮದುವೆಗಳಲ್ಲಿ ವಧು-ವರ ಚುಂಬಿಸುವುದು ಅವರ ಸಂಪ್ರದಾಯವಾಗಿದೆ. ಆದರೆ, ಹಿಂದೂ ಧರ್ಮದ ಮದುವೆಗಳಲ್ಲಿ ಇಂತಹ ಆಚರಣೆಗಳಿಲ್ಲ. ಆದರೆ, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ನೋಡಿದ್ರೆ ನೀವು ಶಾಕ್ ಆಗ್ತೀರಾ..!

ಹಿಂದೂ ಸಂಪ್ರದಾಯದ ಮದುವೆಯೊಂದರಲ್ಲಿ ವಧು-ವರ ತಮ್ಮೆಲ್ಲಾ ಆಚರಣೆಗಳನ್ನು ಪೂರ್ಣಗೊಳಿಸಿದ ನಂತರ ಪರಸ್ಪರ ಚುಂಬಿಸುವಂತೆ ಹೇಳಲಾಯಿತು. ಆದರೆ, ವಧು-ವರ ಚುಂಬಿಸಿದ ರೀತಿ ನೋಡಿ, ಅಲ್ಲಿದ್ದ ಅತಿಥಿಗಳು ಬೆಚ್ಚಿ ಬಿದ್ದಿದ್ದಾರೆ. ಯಾಕೆಂದ್ರೆ ಅವರಿಬ್ಬರ ಲಿಪ್ ಲಾಕ್ ದೃಶ್ಯ ನೋಡಿದವರು ಅಬ್ಬಬ್ಬಾ ಅಂದಿದ್ದಾರೆ.

ಮದುವೆ ಮಂಟಪದಲ್ಲಿ ಎಲ್ಲಾ ಸಂಬಂಧಿಕರು ಹಾಜರಿದ್ದರೂ ಕೂಡ  ವಧು ಮತ್ತು ವರ ಸುದೀರ್ಘವಾಗಿ ಚುಂಬಿಸಿದ್ದಾರೆ. ಮಂಟಪದ ಮೇಲೆ ಕುಳಿತಿದ್ದ ವಧು-ವರ ಇಬ್ಬರೂ ಪರಸ್ಪರ ಬಾಗಿ ಚುಂಬಿಸಿದ್ದಾರೆ. ಇಬ್ಬರೂ ಪರಸ್ಪರರ ತೋಳನ್ನು ಗಟ್ಟಿಯಾಗಿ ಹಿಡಿದು, ಇಂಗ್ಲೀಷ್ ಸಿನಿಮಾಗಳಲ್ಲಿ ಪಾತ್ರಧಾರಿಗಳು ಕಿಸ್ ಕೊಡುವ ರೀತಿ ಸುದೀರ್ಘ ಚುಂಬನ ಮಾಡಿದ್ದಾರೆ. ಸುತ್ತಾ ಅತಿಥಿಗಳು ನೆರೆದಿದ್ರೂ ಇಬ್ಬರೂ ತಮ್ಮನ್ನು ತಾವು ಮೈಮರೆತಂತೆ ಕಾಣುತ್ತಿದೆ. ಬಂದಿದ್ದ ಅತಿಥಿಗಳು ಮಾತ್ರ ಜೋಡಿಯ ಫ್ರೆಂಚ್ ಸ್ಟೈಲ್ ಚುಂಬನ ನೋಡಿ ಅವಕ್ಕಾಗಿದ್ದಾರೆ.

ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಛೀ.. ವ್ಯಾಕ್ ಅಂತೆಲ್ಲಾ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...