alex Certify ಮದ್ಯದಂಗಡಿಯಲ್ಲಿ ಕದಿಯಲು ಬಂದವರು ಕಂಠಪೂರ್ತಿ ಕುಡಿದು ಸಿಕ್ಕಿಬಿದ್ದರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದ್ಯದಂಗಡಿಯಲ್ಲಿ ಕದಿಯಲು ಬಂದವರು ಕಂಠಪೂರ್ತಿ ಕುಡಿದು ಸಿಕ್ಕಿಬಿದ್ದರು…!

ಕಳ್ಳರಿಬ್ಬರು ಮದ್ಯದಂಗಡಿಗೆ ಕನ್ನ ಹಾಕಿ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾರೆ.

ತಮಿಳುನಾಡಿನ ತಿರುವಳ್ಳೂರಿನಲ್ಲಿ ಈ ಘಟನೆ ನಡೆದಿದ್ದು, ಮದ್ಯದ ಅಂಗಡಿಯ ಗೋಡೆಗಳಿಗೆ ರಂಧ್ರ ಕೊರೆದು ಒಳ ನುಗ್ಗಿದ ಕ್ಷಣವನ್ನು ಸೆರೆಹಿಡಿಯುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ.

ಪೊಲೀಸರು ಕೊರೆದ ರಂಧ್ರಗಳ ಮೂಲಕ ಕಳ್ಳರನ್ನು ಹೊರಗೆ ಬರುವಂತೆ ಕೇಳುವ ಮತ್ತು ಹೊರ ಬರುವ ಮುನ್ನ ಆ ಕಳ್ಳರು ಅಂಗಡಿಯೊಳಗೆ ಮದ್ಯ ಸೇವಿಸಿ ಬಂದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಆ ಇಬ್ಬರು ಮೂಲತಃ ಕದ್ದ ಮದ್ಯವನ್ನು ಮಾರಾಟ ಮಾಡಲು ಯೋಜಿಸಿದ್ದರು ಆದರೆ ತಮ್ಮ ಯೋಜನೆಯನ್ನು ಬದಲಾಯಿಸಿ ಮತ್ತು ಟೇಕಾಫ್​ ಮಾಡುವ ಮೊದಲು ಮದ್ಯ ಸೇವಿಸಿ ಆನಂದಿಸಲು ನಿರ್ಧರಿಸಿದ್ದರು. ಹೀಗಾಗಿ ಸಿಕ್ಕಿಬಿದ್ದಿದ್ದಾರೆ.

ಟ್ವಿಟ್ಟರ್​ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಒಬ್ಬ ಬಳಕೆದಾರ ಕಾಮೆಂಟ್​ ಮಾಡಿ, ಪೊಲೀಸರು ಅದೇ ರಂಧ್ರದಿಂದ ಆ ಕಳ್ಳರನ್ನು ಬರುವಂತೆ ಮಾಡಿರುವುದು ಉತ್ತಮ ಅಂಶವಾಗಿದೆ ಎಂದಿದ್ದರೆ, ಪೊಲೀಸರು ಅವರನ್ನು ಅಂಗಡಿಯ ಶಟರ್​ ತೆಗೆದು ಏಕೆ ಹೊರಗೆ ಕರೆ ತರಲಿಲ್ಲ. ಅವರನ್ನು ಮತ್ತೆ ಏಕೆ ತೆವಳುವಂತೆ ಮಾಡಿದರು ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ.

ಪೊಲೀಸರು ಅವರನ್ನು ನಿಭಾಯಿಸಿದ ರೀತಿಯನ್ನು ನಾನು ಪ್ರೀತಿಸುತ್ತೇನೆ. ಅರ್ಥವಾಗದವರಿಗೆ ಪೊಲೀಸರು ನಿಧಾನವಾಗಿ ಹೊರಬನ್ನಿ….. ಭಯಪಡಬೇಡಿ ಎಂದು ಹೇಳುತ್ತಿದ್ದರು. ಅವರು ಹೊರಬಂದ ನಂತರ, ಅವರು ಆ ರಂಧ್ರವನ್ನು ಹೇಗೆ ಮಾಡಿದರು ಎಂದು ಪೊಲೀಸರು ಅವರನ್ನು ಕೇಳುತ್ತಿದ್ದರು. ಪ್ರಬುದ್ಧ ಮತ್ತು ಉತ್ತಮ ತರಬೇತಿ ಪಡೆದ ಪೊಲೀಸರು ಎಂದು ಇನ್ನೊಬ್ಬರು ಶ್ಲಾಘಿಸಿ ಕಾಮೆಂಟ್​ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...