alex Certify ವಿಡಿಯೋ ಗೇಮ್ ಆಡುತ್ತಲೇ ಸಲಿಂಗಿಗಳ ಜೀವನದ ಬಗ್ಗೆ ಮಾತನಾಡಿದ 12ರ ಪೋರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಡಿಯೋ ಗೇಮ್ ಆಡುತ್ತಲೇ ಸಲಿಂಗಿಗಳ ಜೀವನದ ಬಗ್ಗೆ ಮಾತನಾಡಿದ 12ರ ಪೋರ

ಇಂದಿನ ಮಕ್ಕಳಿಗೆ ತಮ್ಮ ಸುತ್ತಲೂ ಏನು ನಡೆಯುತ್ತಿದೆ ಎಂಬುದು ಬಲು ಬೇಗ ಅರಿವಿಗೆ ಬಂದುಬಿಡುತ್ತದೆ. ಎಲ್ಲಾ ರೀತಿಯ ಸನ್ನಿವೇಶಗಳ ಜ್ಞಾನವೂ ಮಕ್ಕಳಿಗೆ ಇರುತ್ತದೆ.

12 ವರ್ಷದ ಬಾಲಕನೊಬ್ಬ ’ಕಾಲ್ ಆಫ್ ಡ್ಯೂಟಿ’ ಎಂಬ ಜನಪ್ರಿಯ ವಿಡಿಯೋ ಗೇಮ್ ಒಂದನ್ನು ಆಡುತ್ತಿರುವ ವಿಡಿಯೋ ವೈರಲ್ ಆಗಿದೆ.

ಹೆಡ್‌ಫೋನ್‌ ಹಾಕಿಕೊಂಡು ಸ್ಕ್ರೀನ್‌ನಲ್ಲಿ ಬರುತ್ತಿರುವ ಆಟದಲ್ಲಿ ತಲ್ಲೀನನಾಗಿರುವ ಈತ ಇದೇ ವೇಳೆ ಮುಖ್ಯವಾದ ವಿಚಾರವೊಂದರ ಮೇಲೂ ಗಮನ ಇಟ್ಟಿದ್ದಾನೆ.

ಪ್ರಸಿದ್ಧ ಟಿವಿ ಶೋ ‌ʼಬಿಗ್ ಬ್ರದರ್ʼ ಈಗ ವಿಡಿಯೋ ಗೇಮ್

ಸಲಿಂಗಿಗಳ ವಿರುದ್ಧ ಪಕ್ಷಪಾತ ಮಾಡುವ ಪರಿಪಾಠದ ಬಗ್ಗೆ ಮಾತನಾಡುವ ಬಾಲಕ, “ಎಲ್ಜಿಬಿಟಿಕ್ಯೂ ಎಂದರೆ ಬರೀ ಸಲಿಂಗಿಗಳು ಎಂದರ್ಥವಲ್ಲ,” ಎಂದು ಸಖತ್ತಾಗಿ ಮಾತನಾಡಿದ್ದಾನೆ.

ಆಟವಾಡುತ್ತಲೇ ಸಲಿಂಗಿಗಳ ಜೀವನದ ಕುರಿತು ಸವಿವರವಾಗಿ ಮಾತನಾಡುವ ಈ ಪೋರನ ಜ್ಞಾನವನ್ನು ಕಂಡು ನೆಟ್ಟಿಗರು ಬೆರಗಾಗಿದ್ದಾರೆ.

“ಇದು ನನ್ನ ಮಗನ ತಲೆಮಾರು. ನಾವು ಅವರಿಗಾಗಿ ಜಗತ್ತನ್ನು ರಕ್ಷಿಸಬೇಕಿದೆ. ಅವರು ನಮಗಿಂತ ಉತ್ತಮರು” ಎಂದು ವಿಡಿಯೋ ನೋಡಿದ ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.

— Fifty Shades of Whey (@davenewworld_2) September 17, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...