alex Certify ಪ್ರಸಿದ್ಧ ಟಿವಿ ಶೋ ‌ʼಬಿಗ್ ಬ್ರದರ್ʼ ಈಗ ವಿಡಿಯೋ ಗೇಮ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಸಿದ್ಧ ಟಿವಿ ಶೋ ‌ʼಬಿಗ್ ಬ್ರದರ್ʼ ಈಗ ವಿಡಿಯೋ ಗೇಮ್

Two Decades After its Debut, TV Reality Show 'Big Brother' is Getting a Video Game

ಇಂಗ್ಲೆಂಡ್: ಬ್ರೆಜಿಲ್, ಕೆನಡಾ, ಫ್ರಾನ್ಸ್, ತಾಂಜಾನಿಯಾ, ಉಗಾಂಡಾ, ರಷ್ಯಾ ಸೇರಿ ವಿಶ್ವದ ವಿವಿಧ ದೇಶಗಳಲ್ಲಿ ದಶಕಗಳ ಹಿಂದೆ ಪ್ರಸಿದ್ಧವಾಗಿದ್ದ ಟಿವಿ ರಿಯಾಲಿಟಿ ಶೋ ಬಿಗ್ ಬ್ರದರ್ ಈಗ ವಿಡಿಯೋ ಗೇಮ್ ಆಗಿದೆ‌.

ಬಿಗ್ ಬ್ರದರ್ ದ ಗೇಮ್ ಎಂಬ ಹೆಸರಿನಲ್ಲಿ ಸಿದ್ಧ ಮಾಡಿದ ಈ ವಿಡಿಯೋಗೇಮ್ ನಲ್ಲಿ ಹೌಸ್ ಮೇಟ್ ಆಗಿ, ಇಲ್ಲವೇ ಏಕಾಂಗಿಯಾಗಿ ಭಾಗವಹಿಸಬಹುದಾಗಿದೆ. ವಿಶ್ವಾದ್ಯಂತ ಎಲ್ಲರೂ ಭಾಗವಹಿಸಲು ಅವಕಾಶವಿದ್ದು, ಗೆಲ್ಲುವವರಿಗೆ ವಿಶೇಷ ಬಹುಮಾನವಿದೆ.‌

9th ಇಂಫ್ಯಾಕ್ಟ್ ಎಂಬ ಬ್ರಿಟಿಷ್ ಕಂಪನಿ ಇದನ್ನು ಅಭಿವೃದ್ಧಿಪಡಿಸಿದ್ದು, ಅ.15 ರಿಂದ ಲಭ್ಯವಾಗಲಿದೆ. 4.99 ಡಾಲರ್ ಪಾವತಿಸಿ ಮೊದಲ ಮೂರು ಸುತ್ತಿನಲ್ಲಿ ಆಡಬಹುದು. ನಿಜವಾದ ಬಿಗ್ ಬ್ರದರ್ ಆಟದಲ್ಲಿ ಎಲಿಮಿನೇಟ್ ಆಗದಿರಲು ಬಳಸುವ ತಂತ್ರಗಳನ್ನೇ ಈ ಗೇಮ್ ನಲ್ಲೂ ಬಳಸಬಹುದಾಗಿದೆ.

1999 ರಲ್ಲಿ ಡಚ್‌ ಚಾನಲ್ ವೆರೋನಿಕಾದಲ್ಲಿ ಮೊದಲ ಬಾರಿ ಪ್ರಾರಂಭವಾದ ಈಗಿನ ಬಿಗ್ ಬಾಸ್ ಮಾದರಿಯ ಶೋ ಬಿಗ್ ಬ್ರದರ್ ಆಗಿದೆ. ಆಗ ವಿವಿಧ ಸೀಸನ್ ಗಳಲ್ಲಿ ಒಟ್ಟು 7 ಸಾವಿರ ಸ್ಪರ್ಧಿಗಳು ಭಾಗವಹಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...